ಯಾದಗಿರಿ: ‘ನಮ್ಮ ಶಾಲೆಗೆ ಗ್ರಾಮ ಪಂಚಾಯಿತಿಯಿಂದ ನಿತ್ಯ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯೊಂದಿಗೆ ಬರುತ್ತಿದ್ದ ದಿಕ್ಸೂಚಿಯನ್ನು ನಿಯಮಿತವಾಗಿ ಓದಿದ್ದರಿಂದ ನನಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 577 (ಶೇ 92.32) ಅಂಕಗಳಿಸಲು ಸಾಧ್ಯವಾಯಿತು’.

ಇದು ವಡಗೇರಾ ತಾಲ್ಲೂಕಿನ ಹಲಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸರಸ್ವತಿ ನರಸಪ್ಪ ಅವರ ಮಾತುಗಳು. ಇದೇ ಶಾಲೆಯ 111 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 104 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 93.69 ಫಲಿತಾಂಶ ಬಂದಿದೆ.

‘ತರಗತಿಯಲ್ಲಿ ಶಿಕ್ಷಕರು ಕೊಟ್ಟ ನೋಟ್ಸ್ನೊಂದಿಗೆ ‘ಪ್ರಜಾವಾಣಿ’ಯ ದಿಕ್ಸೂಚಿಯನ್ನು ಇರಿಸಿಕೊಂಡು ಓದುತ್ತಿದೆ. ದಿಕ್ಸೂಚಿಯಿಂದಾಗಿ ಪಾಠದಲ್ಲಿ ಯಾವುದು ಮಹತ್ವದಿದೆ, ಪರೀಕ್ಷೆಗೆ ಯಾವೆಲ್ಲ ಪ್ರಶ್ನೆಗಳು ಬರಬಹುದು ಎಂಬುದು ಗೊತ್ತಾಗಿ, ಹೆಚ್ಚು ಮಾರ್ಕ್ಸ್ ತೆಗೆಯಲು ಸಹಾಯವಾಗಿದೆ. ನನ್ನ ಬಳಿ ಸಂಗ್ರಹಿಸಿ ಇರಿಸಿಕೊಂಡ ಮಾಹಿತಿಪೂರ್ಣವಾದ ದಿಕ್ಸೂಚಿ ನೋಟ್ಸ್ಗಳನ್ನು ನನ್ನ ಜೂನಿಯರ್ ಕೇಳುತ್ತಿದ್ದಾರೆ’ ಎಂದರು.

ಗಣಿತ, ವಿಜ್ಞಾನಕ್ಕೆ ನೆರವು: ‘ಪ್ರಜಾವಾಣಿ’ಯ ದಿಕ್ಸೂಚಿಯನ್ನು ದಿನಾಲು ಓದುತ್ತಿದ್ದೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳು ಕಠಿಣವಾಗಿತ್ತು. ದಿಕ್ಸೂಚಿ ಓದಿದ ಬಳಿಕ ಈ ಮೂರು ವಿಷಯಗಳು ಸರಳವಾಗಿ ಅರ್ಥವಾದವು. ಇದರಿಂದಾಗಿ ಪರೀಕ್ಷೆಯಲ್ಲಿ ಹೆಚ್ಚುವರಿಯಾಗಿ ಶೇ 45ರಷ್ಟು ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಐಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಲ್ಲಯ್ಯ ಬಸಪ್ಪ.

ಐಕೂರು ಶಾಲೆಯ ಈ ಬಾರಿಯ ಪರೀಕ್ಷೆಗೆ ಕುಳಿತ ಎಲ್ಲ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅವರಲ್ಲಿ ಮಲ್ಲಯ್ಯ ಶೇ 90.40ರಷ್ಟು ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಓದಿದ ತಕ್ಷಣವೇ ಅರ್ಥವಾಗುತ್ತೆ: ‘ಪ್ರಜಾವಾಣಿ’ ದಿಕ್ಸೂಚಿ ಪರೀಕ್ಷೆಯ ಹಿತದೃಷ್ಟಿಯ ಹೆಚ್ಚಿನ ಅಂಕ ಗಳಿಕೆ, ಕಡಿಮೆ ಶಬ್ದಗಳಲ್ಲಿ ಸರಳವಾದ ವಿವರಣೆಯು ಮಕ್ಕಳಿಗೆ ಓದಿದ ತಕ್ಷಣವೇ ಅರ್ಥವಾಗುತ್ತದೆ. ಒಂದು ಪಾಠದಲ್ಲಿನ ಮುಖ್ಯವಾದ ಅಂಶಗಳನ್ನು ಸಂಕ್ಷಿಪ್ತವಾಗಿ ದಿಕ್ಸೂಚಿಯಲ್ಲಿ ಪ್ರಕಟಿಸುತ್ತಿರುವುದು ಸಹ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ’ ಎನ್ನುತ್ತಾರೆ ಹಾಲಗೇರಾ ಶಾಲೆಯ ಮುಖ್ಯಶಿಕ್ಷಕ ಎಚ್.ಬಿ. ಬಂಡಿ.

‘ಆರು ವಿಷಯಗಳಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಕಲಿಕಾ ಅಂಶಗಳನ್ನುಸಂಕ್ಷಿಪ್ತವಾಗಿ, ನಿರ್ದಿಷ್ಟವಾಗಿ, ನೇರವಾಗಿ ಹಾಗೂ ಗುರುತು ಮಾಡಿ ಹೇಳಿದರೆ ಬೇಗ ಅರ್ಥವಾಗುತ್ತದೆ. ಅದು, ದಿಕ್ಸೂಚಿಯಲ್ಲಿದೆ. ಪರೀಕ್ಷೆಯ ದೃಷ್ಟಿಯಿಂದ ಸಂಭವನೀಯ ಪ್ರಶ್ನೊತ್ತರಗಳು ಬರುವುದರಿಂದ 35ರಿಂದ 40 ಅಂಕಗಳನ್ನು ಸುಲಭವಾಗಿ ಗಳಿಸಬಹುದು’ ಎನ್ನುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-30-1203621341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.