ಯಾದಗಿರಿ: ‘ವಿದ್ಯಾರ್ಥಿಗಳು ಕೇವಲ ಕೋರ್ಸ್ಗೆ ಸೀಮಿತವಾಗದೆ ಸಮಕಾಲೀನ ಅಗತ್ಯತೆಯಂತೆ ಕೌಶಲವನ್ನು ಬೆಳೆಸಿಕೊಂಡು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ವಕೀಲ ಅನಂತ ನಾಯಕ್ ಕರೆ ಹೇಳಿದರು.

ನಗರದಲ್ಲಿ ಅಂಬಾಭವಾನಿ ದೇವಸ್ಥಾನ ಸೇವಾ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ಸಹಯೋಗದಲ್ಲಿ ಜರುಗಿದ 2026-27ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ತಂದೆ ತಾಯಿಗಳ ಋಣವನ್ನು ತೀರಿಸುವ ಕೆಲಸ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹತ್ತರ ಸಾಧನೆ ಮಾಡಬೇಕು. ಬಂಜಾರ ಸಮಾಜಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂತ ಸೇವಾಲಾಲ್ ಮಹಾರಾಜರು ಎರಡು ಕಣ್ಣುಗಳಂತೆ. ಅವರ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದರು.

‘ಬಂಜಾರ ಸಮುದಾಯದಿಂದ ಯಾರೂ ಮೀಸಲಾತಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಸಂವಿಧಾನ ನಮ್ಮ ಜೀವಾಳವಾಗಿದೆ’ ಎಂದು ಹೇಳಿದರು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ‘ವಿದ್ಯಾರ್ಥಿಗಳು ಪೆನ್ನು ಮತ್ತು ಪುಸ್ತಕಗಳನ್ನು ಹಿಡಿಯಿರಿ. ಜ್ಞಾನವೇ ನಿಜವಾದ ಸಂಪತ್ತು. ಜ್ಞಾನವನ್ನು ಪಡೆಯಲು ಯುವಕರು ಆಧ್ಯತೆ ನೀಡಿ. ಟ್ರಸ್ಟ್ನ ಸಮಾಜಿಕ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.

ತಲಬಂಡಿ ಶಕ್ತಿ ಪೀಠದ ವಿಠ್ಠಲ್ ಮಹಾರಾಜರು ಮಾತನಾಡಿ, ‘ಇಂದಿನ ಯುವಕರು ದುಶ್ಚಟಗಳಿಂದ ಹೊರಬಂದು ವ್ಯಾಸಂಗದ ಕಡೆ ಗಮನಹರಿಸಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವಂತಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪಾಂಡು ಎಲ್.ರಾಠೋಡ, ಡಿಡಿಯು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಭೀಮಣ್ಣ ಮೇಟಿ, ಬಿಜೆಪಿ ಯುವ ಘಟಕದ ಅಧ್ಯಕ್ಷ ಶ್ರೀಧರ ಸಾಹುಕಾರ, ವಕೀಲ ಶಾಂತಕುಮಾರ ಡಿ.ಜಾಧವ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಂಗಾರು ರಾಠೋಡ್ ಮಾತನಾಡಿದರು.

ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಚವ್ಹಾಣ, ಕಲಬುರಗಿಯ ಕನ್ನಡ ರತ್ನ ಕರಿಯರ್ ಅಕಾಡೆಮಿ ನಿರ್ದೇಶಕ ಡಾಕಪ್ಪ ಜಾಧವ, ಹಾಸ್ಟೆಲ್ ವಾರ್ಡನ್ ಲಕ್ಷ್ಮಿ, ಕ್ರೀಡಾಪಟುಗಳಾದ ಮಾರುತಿ ಚವ್ಹಾಣ್, ಕುಮಾರ, ರವಿ ಎಲ್. ರಾಠೋಡ, ವೆಂಕಟೇಶ ರಾಠೋಡ್, ಮಂಜುನಾಥ ಚವ್ಹಾಣ, ರಾಜು ರಾಠೋಡ, ತಿರುಪತಿ ಚವ್ಹಾಣ, ಕೃಷ್ಣ ಚವ್ಹಾಣ್, ಹಣಮಂತ ರಾಠೋಡ, ಮೋತಿಲಾಲ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-30-1221691865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.