ಸುಬ್ರಹ್ಮಣ್ಯ: ‘ಯುವ ಸಮೂಹವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವ ಗುರಿಯನ್ನು ಹೊಂದಿರಬೇಕು. ಇದು ಭವಿಷ್ಯಕ್ಕೆ ಆಧಾರವಾಗಿರುತ್ತದೆ’ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಕೆ.ಎಸ್.ಎಸ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗ ಪಡೆಯಲು ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು. ಕಷ್ಟ, ಪರಿಶ್ರಮದ ಮೂಲಕ ವಿದ್ಯೆ ಕಲಿಯುವುದರಿಂದ ಜೀವನದಲ್ಲಿ ಮಾನವೀಯ ಕಾಳಜಿ ಹೆಚ್ಚುತ್ತದೆ. ಸೋಲು– ಗೆಲುವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಸಮನಾಗಿ ಸ್ವೀಕರಿಸಿ ಗುರಿಯತ್ತ ಸಾಗುವುದು ಅಗತ್ಯ ಎಂದರು.

ಕುಮಾರಸ್ವಾಮಿ ಪಿಯು ಕಾಲೇಜಿನ ಪ್ರಾಂಶುಪಾಲ ಸಂಕೀರ್ತ್ ಹೆಬ್ಬಾರ್ ಅತಿಥಿಯಾಗಿದ್ದರು.

ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ., ರಕ್ಷಕ– ಶಿಕ್ಷಕ ಸಂಘದ ಅಧ್ಯಕ್ಷ ರವಿ ಕಕ್ಕೆಪದವು, ಸದಸ್ಯೆ ಭವಾನಿ ಶಂಕರ್ ಪೈಲಾಜೆ, ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ., ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿಶಾ ಗೌರಿ, ಉಪಾಧ್ಯಕ್ಷ ಕೀರ್ತನ್, ಕಾರ್ಯದರ್ಸಿ ದೀಕ್ಷಾ ಭಾಗವಹಿಸಿದ್ದರು. ಉಪನ್ಯಾಸಕಿ ಆರತಿ ನಿರೂಪಿಸಿದರು. ಮನೋಹರ್ ಸ್ವಾಗತಿಸಿ, ಶ್ರೀಲತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-29-1251941152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.