ತುಮಕೂರು: ಸಿಇಟಿ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾತಿ ಸಿಗುತ್ತಾ? ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ ಪೈಕಿ ಯಾವ ಆಯ್ಕೆ ಉತ್ತಮ? ಮೊದಲ ಸುತ್ತಿನಲ್ಲಿ ಸೀಟು ಸಿಗದಿದ್ದರೆ ಮುಂದಿನ ಪ್ರಕ್ರಿಯೆ ಹೇಗೆ? ಒಂದೇ ಕಾಲೇಜಿನಲ್ಲಿ ಹಲವು ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದೇ?....

ವಿದ್ಯಾರ್ಥಿ, ಪೋಷಕರ ಇಂತಹ ಹತ್ತಾರು ಪ್ರಶ್ನೆ ಹಾಗೂ ಗೊಂದಲಗಳಿಗೆ ಶಿಬಿರದಲ್ಲಿ ‘ಮಾರ್ಗದರ್ಶನ’ ಸಿಕ್ಕಿತು.

ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಬುಧವಾರ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ವಿದ್ಯಾನಿಧಿ ಕಾಲೇಜು ಸಹಯೋಗದಲ್ಲಿ ಸಿಇಟಿ ಹಾಗೂ ಕಾಮೆಡ್–ಕೆ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮೆಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಂಡರು. ಪರೀಕ್ಷೆ, ಫಲಿತಾಂಶ ನಂತರದ ಸಿದ್ಧತೆ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರು.

ಸಿಇಟಿ, ಕಾಮೆಡ್–ಕೆ ರ್ಯಾಂಕ್ ಪ್ರಕಟವಾದ ನಂತರ ಕಾಲೇಜು ಆಯ್ಕೆ ಮಾಡಿಕೊಳ್ಳುವುದು. ಅರ್ಜಿ ಪರಿಶೀಲನೆ, ತಿದ್ದುಪಡಿ, ದಾಖಲೆಗಳ ಸಲ್ಲಿಕೆ, ಮೀಸಲಾತಿ ಸೌಲಭ್ಯ, ಶುಲ್ಕ ಪಾವತಿ ಸೇರಿದಂತೆ ಹಲವಾರು ವಿಚಾರಗಳ ಕುರಿತು ವಿದ್ಯಾರ್ಥಿಗಳು, ಪೋಷಕರು ಸಂಪನ್ಮೂಲ ವ್ಯಕ್ತಿಗಳಿಂದ ಕೇಳಿ ತಿಳಿದುಕೊಂಡರು.

ಕಲಿಕೆಗೆ ಒತ್ತು: ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್.ಕುಮಾರ್, ‘ಕಾಮೆಡ್–ಕೆ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸುವ ಮೂಲಕ ರಾಷ್ಟ್ರದ ಎಲ್ಲ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ರಾಜ್ಯದಲ್ಲಿ 16 ವೈದ್ಯಕೀಯ ಕಾಲೇಜು, 20 ದಂತ ವೈದ್ಯಕೀಯ ಕಾಲೇಜು, 150 ಎಂಜನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ 10ರಿಂದ 15 ಸಾವಿರ ವೈದ್ಯಕೀಯ ಸೀಟುಗಳು ಖಾಲಿ ಉಳಿಯುತ್ತಿವೆ. ವಿದ್ಯಾರ್ಥಿಗಳು ರ್ಯಾಂಕ್ ಬಗ್ಗೆ ಚಿಂತಿಸದೆ, ಸ್ವಯಂ ಕಲಿಕೆಗೆ ಒತ್ತು ನೀಡಬೇಕು’ ಎಂದು ಸಲಹೆ ಮಾಡಿದರು.

2024–25ರಲ್ಲಿ ಕಾಮೆಡ್–ಕೆ ಪರೀಕ್ಷೆಗೆ 1,30,620 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ರಾಜ್ಯದವರು 43,071 ಮಂದಿ ಇದ್ದರು. ರ್ಯಾಂಕ್ ಬಂದ ನಂತರವೂ ಒಳ್ಳೆಯ ಕಾಲೇಜು ಸಿಗುವ ತನಕ ಕಾಯುವುದು ಉತ್ತಮ. ಬಯೋ ಮೆಡಿಕಲ್ ಎಂಜಿನಿಯರಿಂಗ್, ಫುಡ್ ಟೆಕ್ನಾಲಜಿ, ರೋಬೊಟಿಕ್ ಆ್ಯಂಡ್ ಆಟೋಮೇಷನ್ ಒಳಗೊಂಡಂತೆ ಹಲವು ಕೋರ್ಸ್ಗಳಿಗೂ ಬೇಡಿಕೆ ಇದೆ ಎಂದು ಮಾಹಿತಿ ಹಂಚಿಕೊಂಡರು.

ಎಚ್ಚರ ಅಗತ್ಯ: ಸಿಇಟಿ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಿ.ಜೆ.ಜಯಶೀಲ, ‘ಸಿಇಟಿ ಪರೀಕ್ಷೆ ವೇಳೆ ಪ್ರತಿ ದಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್ಸೈಟ್ ವೀಕ್ಷಿಸಬೇಕು. ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ, ದಾಖಲೆ ಸಲ್ಲಿಸಲು ಅವಕಾಶ ಇರುತ್ತದೆ. ಎಸ್ಎಸ್ಎಲ್ಸಿ ಸ್ಯಾಟ್ಸ್ ಸಂಖ್ಯೆ ಆಧಾರದ ಮೇಲೆ ಮೀಸಲಾತಿ, ಅಂಗವಿಕಲತೆ, ಕ್ರೀಡೆ, ಗ್ರಾಮೀಣ ವಿದ್ಯಾರ್ಥಿ ಎಂಬುವುದು ತಿಳಿಯುತ್ತದೆ. ನೋಂದಣಿ ಸಂಖ್ಯೆ, ಪಾಸ್ವಾರ್ಡ್ ಯಾರ ಜತೆಗೂ ಹಂಚಿಕೊಳ್ಳಬೇಡಿ’ ಎಂದು ಎಚ್ಚರಿಸಿದರು.

ಸರ್ಕಾರಿ ಕಾಲೇಜಿನಲ್ಲಿ ಶೇ 100ರಷ್ಟು, ಅನುದಾನಿತ ಕಾಲೇಜುಗಳಲ್ಲಿ ಶೇ 95, ಖಾಸಗಿ ಕಾಲೇಜಿನಲ್ಲಿ ಶೇ 45ರಷ್ಟು ಸೀಟುಗಳನ್ನು ಕೆಇಎ ವತಿಯಿಂದ ರ್ಯಾಂಕಿಂಗ್ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಸೀಟು ಸಿಗುವುದಿಲ್ಲ ಎಂಬ ಬಗ್ಗೆ ಆತಂಕ ಪಡಬೇಕಿಲ್ಲ. ಸೀಟು ಸಿಗುತ್ತದೆ ಎಂದರು.

ಕಾಲೇಜು ಆಯ್ಕೆಗೆ ಯಾವುದೇ ಮಿತಿ ಇಲ್ಲ. ರ್ಯಾಂಕ್ ಆಧಾರದ ಮೇಲೆ ಕಾಲೇಜು ಆಯ್ಕೆ ಮಾಡಿಕೊಳ್ಳಬಹುದು. ಪ್ರವೇಶಾತಿ ನಂತರ ಕೆಇಎಗೆ ಮಾಹಿತಿ ಸಲ್ಲಿಸಬೇಕು. ಕಾಲೇಜು ಇಷ್ಟವಿಲ್ಲದಿದ್ದರೆ, ಮುಂದಿನ ಸುತ್ತಿಗೂ ಹೋಗಬಹುದು. ಸಿಇಟಿ ಬಗ್ಗೆ ಪ್ರಶ್ನೆಗಳು ಇದ್ದರೆ ಕೆಇಎ ವೆಬ್ಸೈಟ್ನ ಚಾರ್ಟ್ ಬಾಕ್ಸ್ನಲ್ಲಿ ಕೇಳಿ ಉತ್ತರ ಪಡೆಯಬಹುದು ಎಂದು ತಿಳಿಸಿದರು.

‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್‘ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-17-1106223216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.