ತುಮಕೂರು: ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಹಾಗೂ ವಿದ್ಯಾನಿಧಿ ಕಾಲೇಜು ಸಹಯೋಗದಲ್ಲಿ ಸಿಇಟಿ ಹಾಗೂ ಕಾಮೆಡ್–ಕೆ ಮಾರ್ಗದರ್ಶನ ಶಿಬಿರವನ್ನು ಮೇ 13ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಕುವೆಂಪು ನಗರದಲ್ಲಿರುವ ವಿದ್ಯಾನಿಧಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಎಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಿಇಟಿ, ಕಾಮೆಡ್–ಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಸಿಇಟಿ ಹಿಂದಿನ ನೋಡಲ್ ಅಧಿಕಾರಿ ಪಿ.ಜೆ.ಜಯಶೀಲ ಹಾಗೂ ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್.ಕುಮಾರ್ ಅವರು ನಿಮ್ಮೆಲ್ಲ ಅನುಮಾನ, ಗೊಂದಲ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದಾರೆ.

ಸಿಇಟಿ, ಕಾಮೆಡ್–ಕೆ ಪರೀಕ್ಷೆ ನಂತರ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಸೀಟು ಆಯ್ಕೆ, ಯಾವ ಕೋರ್ಸ್ಗಳಿಗೆ ಬೇಡಿಕೆ ಇದೆ, ಕಾಲೇಜು ಪ್ರವೇಶ, ಅಗತ್ಯ ದಾಖಲೆ ಇತರೆ ಮಾಹಿತಿಗಳನ್ನು ಕಾರ್ಯಕ್ರಮದಲ್ಲಿ ತಜ್ಞರು ನೀಡಲಿದ್ದಾರೆ.

ಸಿಇಟಿ ನಂತರ ಮುಂದೇನು ಮಾಡಬೇಕು, ಸೀಟ್ ಮ್ಯಾಟ್ರಿಕ್ಸ್, ಎಂಜಿನಿಯರಿಂಗ್ ಸೀಟು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಯಾವೆಲ್ಲ ವಿಧಾನ ಅನುಸರಿಸಬೇಕು? ಪ್ರವೇಶ ಪಡೆದುಕೊಳ್ಳಲು ಏನು ಮಾಡಬೇಕು? ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ? ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಯಾವೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ? ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು?... ಇಂತಹ ಹತ್ತಾರು ಪ್ರಶ್ನೆಗಳಿಗೆ, ಹಲವು ಗೊಂದಲಗಳಿಗೆ ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ.

ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಪ್ರಸರಣಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ ಭಾಗವಹಿಸಲಿದ್ದಾರೆ.

ನೋಂದಣಿಗೆ ಸಂಪರ್ಕಿಸಿ: ಸಂದೀಪ್ ಮೊ 9845070167, ಪ್ರವೀಣ್ ಕುಮಾರ್ ಮೊ 9606931743, ಪುನಿತ್ 8217329130

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-17-1066795600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.