ಉಪ್ಪಿನಂಗಡಿ: ವಿದ್ಯಾರ್ಥಿಗಳು ಪ್ರೌಢ ಹಂತದಲ್ಲೇ ಮುಂದಿನ ಕಲಿಕೆ, ಓದು, ಬದುಕಿನ ಬಗ್ಗೆ ಆಸೆ, ಗುರಿ ಹೊಂದಿರಬೇಕು. ಹೀಗಾದಾಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಬಹುದು ಎಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಹೇಳಿದರು.

ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಮಾಹಿತಿ ಕಾರ್ಯಕ್ರಮ, ಉಪ್ಪಿನಂಗಡಿ ಪರಿಸರದ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಉಬಾರ್ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಉಪ್ಪಿನಂಗಡಿಯಲ್ಲಿ ಹಮ್ಮಿಕೊಂಡಿದ್ದ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ, ನ್ಯಾಯಾಧೀಶರು, ವಕೀಲರು, ವೈದ್ಯರು, ಎಂಜಿನಿಯರ್ ಆಗಬೇಕು ಎಂದು ಆಸೆ ಪಡಬೇಕು. ಇದಕ್ಕಾಗಿ ಸಾಧನೆಯ ಗುರಿ ಇಟ್ಟುಕೊಳ್ಳಬೇಕು. ಯೋಜನೆ, ಕಾರ್ಯ ಚಟುವಟಕೆ, ಶಿಸ್ತು ಅಳವಡಿಸಿಕೊಂಡು ಮುಂದೆ ಸಾಗಿದಾಗ ಆಸೆ, ಕನಸು ನನಸಾಗಲು ಸಾಧ್ಯ ಎಂದರು.

ರಾಯಚೂರು ವಿವಿ ಪ್ರಾಧ್ಯಾಪಕಿ ರಝೀಯಾ ಬಾನು, ಶೈಕ್ಷಣಿಕ ತರಬೇತುದಾರರಾದ ವತ್ಸಲಾ ನಾಯಕ್, ಹನೀಫ್ ಪುತ್ತೂರು, ಉಬಾರ್ ಸ್ಪೋರ್ಟಿಂಗ್ ಕ್ಲಬ್ ಗೌರವ ಸಲಹೆಗಾರ ಯು.ಟಿ.ಮಹಮ್ಮದ್ ತೌಸೀಫ್ ಅವರು ‘ಪೋಷಕರೊಂದಿಗೆ ಮಕ್ಕಳು ಮತ್ತು ಪೋಷಕರ ಸಂಬಂಧ’, ‘ಶಿಕ್ಷಣದ ಆಯ್ಕೆ ಯಲ್ಲಿ ಪೋಷಕರ ಪಾತ್ರ’ದ ಬಗ್ಗೆ ಮಾತನಾಡಿದರು.

ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಶಬೀರ್ ಕೆಂಪಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಅಧ್ಯಕ್ಷ ಎಚ್.ಯೂಸುಫ್, ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ ಶಂಶಾದ್ ಬಾನು, ಸರಳೀಕಟ್ಟೆ ಸರ್ಕಾರಿ ಪ್ರೌಢ ಶಾಲೆ ಅಧ್ಯಾಪಕ ಮಹಮ್ಮದ್ ಹನೀಫ್ ಮಾತನಾಡಿದರು.

ಇಂಡಿಯನ್ ಸ್ಕೂಲ್ ಕಾರ್ಯ ದರ್ಶಿ ಶುಕೂರ್ ಶುಕ್ರಿಯಾ, ದೈಹಿಕ ಶಿಕ್ಷಣ ಶಿಕ್ಷಕ ರಫೀಕ್ ಮಾಸ್ಟರ್ ಉಪ್ಪಿನಂಗಡಿ, ಯು.ಟಿ.ರಹೀನಾಝ್ ಅಂಡೆತ್ತಡ್ಕ, ರಿಜ್ವಾನ್ ಮಂಗಳೂರು, ಅರಫಾ ವಿದ್ಯಾ ಕೇಂದ್ರದ ಶಫೀಕ್ ಅರಫಾ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ರವೂಫ್ ಭಾಗವಹಿಸಿದ್ದರು.

ಇಂಡಿಯನ್ ಸ್ಕೂಲ್, ಜ್ಞಾನಭಾರತಿ ವಿದ್ಯಾ ಕೇಂದ್ರ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ, ಅರಫಾ ವಿದ್ಯಾ ಕೇಂದ್ರ, ಆಯಿಷಾ ವಿದ್ಯಾ ಸಂಸ್ಥೆ ಆತೂರು, ಬದ್ರಿಯಾ ವಿದ್ಯಾ ಸಂಸ್ಥೆ ಆತೂರು, ಸರ್ಕಾರಿ ಪ್ರೌಢಶಾಲೆ ಸರಳೀಕಟ್ಟೆ, ಅಲ್ ಮುನವ್ವರ ಮೂಡಡ್ಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-29-1300729418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.