ಸೋಮವಾರ, 11 ಮೇ 2026
×
ADVERTISEMENT

ಯುಪಿಎಸ್‌ಸಿ | ಪ್ರತಿ ಪರೀಕ್ಷೆಗೂ ಪ್ರತ್ಯೇಕ ಪ್ಲಾನ್‌: ಬಸವರಾಜ ಜವಳಿ

Published : 15 ಏಪ್ರಿಲ್ 2026, 23:26 IST
Last Updated : 16 ಏಪ್ರಿಲ್ 2026, 5:17 IST
ADVERTISEMENT
ಫಾಲೋ ಮಾಡಿ
Comments
ಮಹಿಳಾ ಅಧಿಕಾರಿಯ ಕಾರ್ಯವೇ ಪ್ರೇರಣೆ
‘7ನೇ ತರಗತಿಯಲ್ಲಿ ಇದ್ದಾಗ ಮಹಿಳಾ ಅಧಿಕಾರಿಯೊಬ್ಬರು ಒತ್ತುವರಿಯಾಗಿದ್ದ ರಸ್ತೆಯನ್ನು ತೆರವು ಮಾಡಿಸಿದ್ದರು. ಬೆಳಿಗ್ಗೆ 6ಕ್ಕೆ ಬಂದು, ವಿರೋಧದ ನಡುವೆಯೂ ಮುಂದೆ ನಿಂತು ದಿಟ್ಟತನದಿಂದ ಅಧಿಕಾರ ಚಲಾಯಿಸಿದ್ದರು. ಅದು, ನಮ್ಮೂರಲ್ಲಿ ದೊಡ್ಡ ಸುದ್ದಿಯಾಗಿತ್ತು. ಎಲ್ಲೆಡೆಯೂ ಆ ಅಧಿಕಾರಿಯ ಬಗ್ಗೆಯೇ ಮಾತು. ನಾನೂ ಅಧಿಕಾರಿಯಾದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಬಹುದು, ಯಾವೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದಕ್ಕೆ ಅದು ಪ್ರೇರಣೆಯಾಗಿ, ಇವತ್ತು ಯುಪಿಎಸ್‌ಸಿ ಪಾಸಾದೆ’ ಎನ್ನುತ್ತಾರೆ ಬಸವರಾಜ ಜವಳಿ ಅವರು.
ದಿನಪತ್ರಿಕೆಗಳೇ ಬುನಾದಿ
ಯುಪಿಎಸ್‌ಸಿ ಪುಸ್ತಕಗಳ ಓದಿನ ಜೊತೆಗೆ ವಿಶ್ಲೇಷಣಾತ್ಮಕ ಚಿಂತನೆಯ ಕೌಶಲ ಕೇಳುತ್ತದೆ. ಪುಸ್ತಕಗಳು ಮಾಹಿತಿ ನೀಡಿದರೆ, ದಿನಪತ್ರಿಕೆಗಳು ಜಗತ್ತಿನ ನಿತ್ಯದ ವಿದ್ಯಮಾನ ತಿಳಿಸುತ್ತವೆ. ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಪ್ರತ್ಯೇಕವಾಗಿ ನೋಡಬಾರದು. ಪಠ್ಯದಲ್ಲಿ ಇರುವುದು ಪತ್ರಿಕೆಗಳಲ್ಲಿ ಬರುವುದರಿಂದ ಎರಡನ್ನೂ ಒಗ್ಗೂಡಿಸಿ ಓದಿದರೆ ಪರೀಕ್ಷೆಗೆ ಸಹಾಯವಾಗುತ್ತದೆ. ಇಂಗ್ಲಿಷ್ ಪತ್ರಿಕೆಯ ಜೊತೆಗೆ ಕನ್ನಡದಲ್ಲಿ ‘ಪ್ರಜಾವಾಣಿ’ ಓದುತ್ತಿದೆ. ಅದರಲ್ಲಿನ ಸಂಪಾದಕೀಯ, ಅಂಕಣಗಳು ಆಳವಾದ ವಿಚಾರಗಳನ್ನು ಒಳಗೊಂಡಿವೆ. ಅದು, ನನ್ನಲ್ಲಿ ವಿಶ್ಲೇಷಣಾತ್ಮಕ ಬರಹದ ಕೌಶಲ ಬೆಳೆಸಿಕೊಳ್ಳಲು ಸಹಾಯ ಮಾಡಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT