ಪುರುಷೋತ್ತಮ ಬಿಳಿಮಲೆ

ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷ ಸುಮಾರು 15 ವಿವಿಧ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತದೆ. ಪ್ರತಿ ವರ್ಷ ನಡೆಯುವ ನಾಗರಿಕ ಸೇವಾ ಪರೀಕ್ಷೆಗೆ 30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಸುಮಾರು 10 ಲಕ್ಷ ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಮತ್ತೆ 14 ಸಾವಿರದಿಂದ 15 ಸಾವಿರ ಜನ ಮೈನ್ಸ್ಗೆ ಉತ್ತರ ಬರೆಯಲು ಅರ್ಹರಾಗಿ ಅಂತಿಮವಾಗಿ ಸರಿಸುಮಾರು 1,200 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳುತ್ತಾರೆ.

ಪರೀಕ್ಷೆ ನಡೆಸುವವರಿಗೆ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಆಡಳಿತದೊಳಕ್ಕೆ ತರಬೇಕೆಂಬ ಇಚ್ಛೆ ಇರುವುದರಿಂದ ಅವರು ಅಭ್ಯರ್ಥಿಗಳ ಕಠಿಣ ಪರಿಶ್ರಮವನ್ನು ಗೌರವಿಸುವುದರ ಜೊತೆಗೆ ಅತ್ಯಂತ ನಿಷ್ಠುರವಾದ ರೀತಿಯಲ್ಲಿ ಗೋಪ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಾರೆ. ಇದು ಯುಪಿಎಸ್ಸಿ ಯಶಸ್ಸಿನ ಮೂಲ.

ಗೋಪ್ಯತೆ ಕಾಪಾಡಿಕೊಳ್ಳುವುದೇ ಹೆಚ್ಚಿನ ಪರೀಕ್ಷೆಗಳಲ್ಲಿನ ಪ್ರಮುಖ ಸಮಸ್ಯೆ. ಇದಕ್ಕಾಗಿ ಯುಪಿಎಸ್ಸಿ ದೇಶದ ಎಲ್ಲ ಭಾಗಗಳಿಂದ ಅತ್ಯಂತ ಜತನದಿಂದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ವಿದ್ವಾಂಸರನ್ನು ಆರಿಸಿಕೊಳ್ಳುತ್ತದೆ. ಅರ್ಹರನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಂಡರೆ ಅರ್ಧ ಸಮಸ್ಯೆ ಮುಗಿದಂತೆ. ಈ ವಿದ್ವಾಂಸರು ಸಾಮಾನ್ಯವಾಗಿ ತಾವು ಯಾವ ಕೆಲಸಕ್ಕೆ ಹೋಗುತ್ತಿದ್ದೇವೆ ಎಂದು ಯಾರಿಗೂ ಹೇಳುವುದಿಲ್ಲ. ಇವರು ಅನೇಕ ಪ್ರಶ್ನೆ ಪತ್ರಿಕೆಗಳ ದೊಡ್ಡ ಸಂಗ್ರಹವನ್ನೇ ಮಾಡುತ್ತಾರೆ. ಅವುಗಳಲ್ಲಿ ಯಾವುದನ್ನು ಆಯ್ದುಕೊಂಡು ಅಭ್ಯರ್ಥಿಗಳಿಗೆ ಕೊಡುತ್ತಾರೆ ಎಂಬುದು ಪ್ರಶ್ನೆ ಪತ್ರಿಕೆ ತಯಾರು ಮಾಡಿದವರಿಗೂ ಗೊತ್ತಿರುವುದಿಲ್ಲ. ಮೌಲ್ಯಮಾಪನದಲ್ಲಿಯೂ ಅನಾಮಧೇಯ ಪದ್ಧತಿಯನ್ನು ಕಾಪಾಡಿಕೊಳ್ಳಲಾಗುತ್ತದೆ.

ಯುಪಿಎಸ್ಸಿ ಸಂದರ್ಶನಗಳು ಕೂಡ ಸೃಜನಶೀಲವಾಗಿರುತ್ತವೆ. ಇವು ಅಭ್ಯರ್ಥಿಯ ಪ್ರತಿಭೆ ಹೊರಗೆಳೆಯುವ ಪ್ರಾಮಾಣಿಕ ಪ್ರಯತ್ನಗಳಾಗಿರುತ್ತವೆಯೇ ವಿನಾ ನಾಲ್ಕಾರು ವರ್ಷ ಅಭ್ಯಾಸ ಮಾಡಿ ಬಂದವರನ್ನು ‘ನೀನೆಷ್ಟು ದಡ್ಡ ನೋಡು’ ಎಂದು ನಿರೂಪಿಸುವ ಉದ್ದೇಶವನ್ನು ಹೊಂದಿರುವುದಿಲ್ಲ. ಬುದ್ದಿವಂತನನ್ನು ದಡ್ಡ ಎಂದು ನಿರೂಪಿಸಬಲ್ಲವರು ದಡ್ಡನನ್ನು ಬುದ್ದಿವಂತನೆಂದೂ ನಿರೂಪಿಸಬಲ್ಲವರಾದಾಗ ವ್ಯವಸ್ಥೆ ಕೆಟ್ಟು ಹೋಗುತ್ತದೆ. ಉದಾಹರಣೆಗೆ, ‘ಕನ್ನಡ ಸಾಹಿತ್ಯದಲ್ಲಿ ನಿಮಗೆ ಯಾವ ಕಾಲದ ಸಾಹಿತ್ಯ ಇಷ್ಟ’ ಎಂದು ಕೇಳಿದಾಗ ಅಭ್ಯರ್ಥಿಯು ‘ಹೊಸಗನ್ನಡ’ ಎಂದರೆ, ‘ಹೊಸಗನ್ನಡದಲ್ಲಿ ನಿಮಗೆ ಯಾರು ಇಷ್ಟ’ ಎಂದು ಕೇಳುತ್ತಾರೆ. ಅಭ್ಯರ್ಥಿ, ‘ಕುವೆಂಪು’ ಅಂದರೆ, ಮತ್ತೆ ಕುವೆಂಪು ಮೇಲೆಯೇ ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಇಡೀ ಪ್ರಕ್ರಿಯೆಯೇ ರೋಚಕವಾಗಿರುತ್ತದೆ.

ಯುಪಿಎಎಸ್ಸಿ ಸರಿಯಾದ ಜಾಗದಲ್ಲಿ ಅರ್ಹತೆ ಹೊಂದಿರುವ ಜನರನ್ನಿಟ್ಟುಕೊಂಡೇ ಪರೀಕ್ಷೆಗಳನ್ನು ನಡೆಸುತ್ತದೆ. ಆಯೋಗದ ಇನ್ನೊಂದು ಹೆಚ್ಚುಗಾರಿಕೆ ಎಂದರೆ, ಅದರಲ್ಲಿ ಇನ್ನೂ ರಾಜಕೀಯ ಸುಳಿದಿಲ್ಲ. ಅಂತಹ ಪ್ರಯತ್ನಗಳು ಕೆಲವು ನಡೆದಿದ್ದವಾದರೂ ಅಲ್ಲಿನ ವ್ಯವಸ್ಥೆ ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. 100 ವರ್ಷಗಳಿಂದ ಅದು ಸಾಗಿ ಬಂದ ಹಾದಿ ವಿವಿಧ ರಾಜ್ಯಗಳಲ್ಲಿರುವ ಲೋಕಸೇವಾ ಆಯೋಗಗಳಿಗೆ ಅತ್ಯಂತ ದೊಡ್ಡ ಮಾದರಿ. ಕೆಪಿಎಸ್ಸಿಯೂ ಇದೇ ಮಾದರಿಯನ್ನು ಅನುಸರಿಸಿದರೆ ಅದು ದೇಶದ ಅತ್ಯುತ್ತಮ ನೇಮಕಾತಿ ಸಂಸ್ಥೆ ಆಗುವುದರಲ್ಲಿ ಸಂದೇಹವಿಲ್ಲ.

ಲೇಖಕ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-51-2097348032

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.