ವಿಜಯಪುರ: ‘ನೀಟ್ ಸಂಕಷ್ಟದಿಂದ ಹತಾಶರಾಗಬೇಡಿ, ಅದನ್ನೇ ಒಂದು ಅವಕಾಶ ಎಂದು ಭಾವಿಸಿ’ ಎಂದು ಆರ್ಕೆಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಹೇಳಿದರು.

ವಿಜಯಪುರದ ಆರ್ಕೆಎಂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಕ್ಸೆಲ್ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಿಇಟಿ ಹಾಗೂ ನೀಟ್ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಧೈರ್ಯ ಕಳೆದುಕೊಳ್ಳಬಾರದು. ಮರುಪರೀಕ್ಷೆಗೆ ಸಮರ್ಪಕವಾಗಿ ಸಿದ್ಧತೆ ನಡೆಸಬೇಕು. ಈ ವಿಚಾರವನ್ನು ರಾಜಕೀಯವಾಗಿ ಚರ್ಚಿಸುವುದಕ್ಕೋ ಅನವಶ್ಯಕ ಚಿಂತನೆ ಮಾಡುವುದಕ್ಕೋ ಮನಸ್ಸಿನಲ್ಲಿ ಅಲ್ಪ ಪ್ರಮಾಣದ ಜಾಗವನ್ನೂ ಕೊಡಬಾರದು’ ಎಂದರು.

ಸಂಪನ್ಮೂಲ ವ್ಯಕ್ತಿ ಕೆ. ಮುರಳೀಧರ್, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿಧಾನ, ಕಳೆದ ವರ್ಷದ ಕಟ್ಆಫ್ ವಿವರಗಳು ಹಾಗೂ ಸೀಟ್ ಆಯ್ಕೆ ಸಮಯದಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳ ಕುರಿತು ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವರವಾಗಿ ಮಾಹಿತಿ ನೀಡಿದರು.

ಪ್ರಾಂಶುಪಾಲೆ ಮೇಧಾ ಕರ್ಪೂರಮಠ, ಸಂಯೋಜಕ ಪ್ರಣೀತ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-26-1134448725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.