ಯಾದಗಿರಿ: ‘ತಾಲ್ಲೂಕಿನ ಕಡೇಚೂರು ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೊಮಾ ಕೋರ್ಸ್ಗಳ ಪ್ರವೇಶ ಆರಂಭವಾಗಿದೆ’ ಎಂದು ಪ್ರಾಂಶುಪಾಲ ಶಿವಕುಮಾರ ಪಿ. ತಿಳಿಸಿದರು.

‘ತರಬೇತಿ ಕೇಂದ್ರದಲ್ಲಿ 2026- 27ನೇ ಸಾಲಿನ ಡಿಪ್ಲೊಮಾ ಪ್ರವೇಶಾತಿ ಆರಂಭವಾಗಿದ್ದು, 3 ವರ್ಷದ ಡಿಪ್ಲೊಮಾ ನಂತರ ಒಂದು ವರ್ಷದ ಶಿಷ್ಯವೇತನ ಸಹಿತ ಕಡ್ಡಾಯ ಕೈಗಾರಿಕಾ ತರಬೇತಿ ಇರುತ್ತದೆ. ಎಸ್ಎಸ್ಎಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಈ ಕೋರ್ಸ್ಗಳನ್ನು ಪೂರ್ಣಗೊಳಿಸಿದರೆ ಶೇ 100ರಷ್ಟು ಉದ್ಯೋಗ ಸಿಗಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಮತ್ತು ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನುಪ್ಯಾಕ್ಟರಿಂಗ್ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭವಾಗಿವೆ. ವಿದ್ಯಾರ್ಥಿಗಳು 3 ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಂತರ ಒಂದು ವರ್ಷ ಕಡ್ಡಾಯವಾಗಿ ಕೈಗಾರಿಕಾ ತರಬೇತಿಗೆ ನಿಯೋಜಿಸಲಾಗುವುದು. ಈ ಅವಧಿಯಲ್ಲಿ ಶಿಷ್ಯ ವೇತನ ನೀಡಲಾಗುವುದು’ ಎಂದರು.

‘ಒಂದು ವರ್ಷ, ಮೂರು ತಿಂಗಳು ಹಾಗೂ 6 ತಿಂಗಳ ಅಲ್ಪ ಅವಧಿಯ ಕೋರ್ಸ್ಗಳನ್ನು ಸಹ ಆರಂಭಿಸಲಾಗಿದೆ. ಪ್ರವೇಶಾತಿ ಪಡೆಯಲು ಇಚ್ಛಿಸುವವರು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿಯು ವಿಜ್ಞಾನ ಮತ್ತು ಐಟಿಐ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು’ ಎಂದರು.

ಪ್ರವೇಶಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6362883923, 9742502602, 8106563928ಗೆ ಸಂಪರ್ಕಿಸಲು ಕೋರಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕರಾದ ಪ್ರದೀಪ ಕುಮಾರ್, ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-30-1166770441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.