ಬೆಂಗಳೂರು: ಅಖಿಲ ಭಾರತಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ನಿರ್ಧರಿಸಿದ 107 ವಿದ್ಯಾರ್ಥಿಗಳೂ ಸೇರಿದಂತೆ 206 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ.
ವೈದ್ಯಕೀಯ ಕೋರ್ಸ್‌ನಲ್ಲಿ 107, ದಂತ ವೈದ್ಯಕೀಯದಲ್ಲಿ 20, ಆಯುಷ್ ಕೋರ್ಸ್‌ನಲ್ಲಿ 33, ಎಂಜಿನಿಯರಿಂಗ್‌ನಲ್ಲಿ ಐದು ಮತ್ತು ನರ್ಸಿಂಗ್‌ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ ಎಂದು ಕೆಇಎ ಹೇಳಿದೆ.
ರದ್ದಾದ ಸೀಟುಗಳನ್ನು ಅರ್ಹತಾ ಪಟ್ಟಿ ಆಧಾರದಲ್ಲಿ ಇತರರಿಗೆ ಹಂಚಿಕೆ ಮಾಡಲಾಗುತ್ತದೆ. ಎರಡನೇ ಸುತ್ತಿನ ಸೀಟುಗಳನ್ನು ಪುನರ್ ಹಂಚಿಕೆ ಮಾಡಲು ಆರಂಭಿಸಿದ್ದು, ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ.