ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ 18ರಂದು

7

ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ 18ರಂದು

Published:
Updated:

ಹುಬ್ಬಳ್ಳಿ: ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೊಟೆಕ್ ಆಡಿಟೋರಿಂನಲ್ಲಿ ಡಿಸೆಂಬರ್ 18ರಂದು ಆಯೋಜಿಸಿದೆ.

ಈ ಬಗ್ಗೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ‌ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ , ಸಂಘವು 50 ವರ್ಷ ಪೂರೈಸಿದ್ದು, ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಡಯುವ ಶೈಕ್ಷಣಿಕ ಸಮ್ಮೇಳನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಕಿರಣ ಕುಮಾರ್ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿಸುವರು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾ ಸಂಘದ (ಎಬಿಆರ್‌ಎಸ್ ಎಂ) ಅಧ್ಯಕ್ಷ ಡಾ. ಜೆ.ಪಿ. ಸಿಂಘಾಲ್, ಪೋಷಕರಾದ ಕೃ.ನರಹರಿ, ದಕ್ಷಿಣ ಮಧ್ಯ ಕ್ಷೇತ್ರ ಪ್ರಮುಖ್ ಕೆ. ಬಾಲಕೃಷ್ಣ ಭಟ್ ಉಪಸ್ಥಿರಿರುವರು ಎಂದರು.

'ಒಂದು ರಾಷ್ಟ್ರ ಒಂದು ಶಿಕ್ಷಣ, ಒಂದು ವೇತನ'ಕ್ಕೆ ಕರೆ ನೀಡಲಾಗುವುದು. ರಾಷ್ಟ್ರೀಯ ವಿಚಾರಧಾರೆಯ ಹೊಸ ಶಿಕ್ಷಣ ನೀತಿಗೆ ಆಗ್ರಹ, ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಹಾಗೂ ಸ್ಥಳೀಯ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ಮಾತನಾಡಿ, ಎನ್‌ಪಿಎಸ್ ವಿರೋಧಿಸಿ ಬೆಳಗಾವಿ ಅಧಿವೇಶನದ ವೇಳೆ 12 ಮತ್ತು 13ರಂದು ನಡೆಯುವ ಹೋರಾಟದಲ್ಲಿ ಸಂಘ ಪಾಲ್ಗೊಳ್ಳಲಿದೆ. ಅನುದಾನಿತ ಶಾಲೆಗಳ ಸಿಬ್ಬಂದಿಗೂ ಪಿಂಚಣಿ ಸೌಲಭ್ಯ ಸಿಗಬೇಕು ಎಂದರು.

ಎಬಿಆರ್‌ಎಸ್‌ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಮಾತನಾಡಿ, ಯುಜಿಸಿ ಮಾದರಿಯಲ್ಲಿ ಸ್ಕೂಲ್ ಗ್ರ್ಯಾಂಟ್ ಕಮಿಷನ್ ಸ್ಥಾಪಿಸಬೇಕು ಎಂದರು. ಸಹ ಪ್ರಧಾನ ಕಾರ್ಯದರ್ಶಿ ಗಂಗಾಧರಚಾರಿ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಕುಲಕರ್ಣಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !