ತನಿಷ್ಕ್‌ನಿಂದ ಆಕರ್ಷಕ ಆಭರಣ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ತನಿಷ್ಕ್‌ನಿಂದ ಆಕರ್ಷಕ ಆಭರಣ

Published:
Updated:
Prajavani

ತನಿಷ್ಕ್‌ ಮಿಯಾ ಸಂಸ್ಥೆ ಇತ್ತೀಚೆಗೆ ವಿನೂತನ ಆಭರಣಗಳ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಆಕರ್ಷಕ ಆಭರಣಗಳು ಫ್ಯಾಷನ್‌ ವಲಯವನ್ನು ಆಕರ್ಷಿಸುವಂತಿವೆ. ಚಾರ್ಮ್ಡ್‌ ಹೆಸರಿನ ಈ ಆಭರಣ ಸಂಗ್ರಹ ಹೆಚ್ಚು ಜನರನ್ನು ಸೆಳೆಯುತ್ತಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಮಹಿಳೆಯರು ಇಷ್ಟಪಡುವಂತಹ ಹೊಸ ವಿನ್ಯಾಸಗಳನ್ನು ಈ ಆಭರಣಗಳು ಹೊಂದಿವೆ. ಧರಿಸುವವರ ಭಾವನೆಗಳಿಗೆ ತಕ್ಕಂತೆ ಆಭರಣಗಳನ್ನು ರೂಪಿಸಲಾಗಿದೆ. ₹1600 ರಿಂದ ಕಿವಿಯೋಲೆಗಳು ಸಿಗಲಿವೆ. ಎಲ್ಲಾ ಮಿಯಾ ಸ್ಟೋರ್ಸ್‌ ಹಾಗೂ ಆನ್‌ಲೈನ್‌ನಲ್ಲೂ ಕೊಳ್ಳಬಹುದು.

ಫ್ಯಾಷನ್‌ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಉದ್ದದ  ಕಿವಿಯೋಲೆಗಳನ್ನು ತಯಾರಿಸಲಾಗಿದೆ. ಸೀರೆ, ಸ್ಕರ್ಟ್‌ ಸೇರಿದಂತೆ ವಿವಿಧ ಮಾದರಿಯ ಉಡುಗೆಗಳಿಗೂ ಇವು ಸರಿ ಹೊಂದಲಿವೆ. 14 ಕ್ಯಾರೆಟ್‌ ಚಿನ್ನದಿಂದ ರೂಪಿಸಿದ ಆಭರಣಗಳು 500ಕ್ಕೂ ಹೆಚ್ಚು ವಿನ್ಯಾಸಗಳನ್ನು ಹೊಂದಿವೆ.

**

ವಾಯ್ಲಾ ಬ್ರಾಂಡ್ ತನ್ನ ನೂತನ ಸರಣಿ ಆಭರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 

ಪ್ರೇಮಿಗಳ ದಿನದ ಸಂದರ್ಭದಲ್ಲಿ ಫ್ಯಾಷನ್‌ಗೆ ತಕ್ಕ ಆಭರಣಗಳನ್ನು ಈ ಸಂಗ್ರಹ ಹೊಂದಿದೆ. 

ಬೆರಗು ಮೂಡಿಸುವಂತಹ ಆಭರಣಗಳು ಇವೆ. ಕಪ್ಪು ಬಿಳುಪು ಬಣ್ಣದ ಅನನ್ಯ ವಿನ್ಯಾಸ ಹೊಂದಿವೆ. ಅತ್ಯಂತ ಹಗುರವಾದ ಆಭರಣಗಳು ಇವಾಗಿದ್ದು, ಮಹಿಳೆಯರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ₹ 1999ರಿಂದ ಆಭರಣಗಳು ಸಿಗಲಿವೆ. ಕಿವಿಯೋಲೆಗಳ ಅತ್ಯುತ್ತಮ ಸಂಗ್ರಹ ಇದೆ. ಹರಳುಗಳ ಆಯ್ಕೆ ಕೂಡ ವಿಭಿನ್ನವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !