ಭಾನುವಾರ, ಜನವರಿ 26, 2020
18 °C

SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾವೇರಿ ಮತ್ತು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸ್ಟೆನೊ, ಟೈಪಿಸ್ಟ್‌, ಆದೇಶ ಜಾರಿಕಾರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಹಾವೇರಿ ಜಿಲ್ಲಾ ನ್ಯಾಯಾಲಯ...

ಹಾವೇರಿ ಜಿಲ್ಲಾ ಸತ್ರ ನ್ಯಾಯಾಲಯ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 9 ಸ್ಟೆನೊಗ್ರಾಫರ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. 

ಹುದ್ದೆಗಳ ವಿವರ: ಒಟ್ಟು 9 ಹುದ್ದೆಗಳು

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬೆರಳಚ್ಚು ಮತ್ತು ಶೀಘ್ರ ಲಿಪಿಯ ಕೊರ್ಸ್‌ನಲ್ಲಿ ಪಾಸಾಗಿರಬೇಕು. ಅಥವಾ ಈ ವಿಷಯಗಳಲ್ಲಿ ಡಿಪ್ಲೋಮಾ ಪಡೆದಿರಬೇಕು. 

ವೇತನ ಶ್ರೇಣಿ: 27650-52650ರ ಶ್ರೇಣಿಯಲ್ಲಿ ಮಾಸಿಕ ವೇತನ ನೀಡಲಾಗುವುದು.

ನೇಮಕಾತಿ ವಿಧಾನ: ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ನಿಗದಿತ ನಮೂನೆ ಮೂಲಕವೇ ಅರ್ಜಿ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನಿಗದಿತ ನಮೂನೆಯ ಅರ್ಜಿಗಾಗಿ ಈ ವೆಬ್‌ಸೈಟ್‌ಗೆ ಲಾಗಿನ್‌ ಆಗುವುದು.

ಅಧಿಸೂಚನೆ ಲಿಂಕ್‌: https://bit.ly/36GmOvV

ಅರ್ಜಿ ಸಲ್ಲಿಸುವ ಕೊನೆಯ ದಿನ: 10–2–2020

***

ಬೆಳಗಾವಿ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು

ಹುದ್ದೆಗಳ ಸಂಖ್ಯೆ: 55

ಹುದ್ದೆಗಳ ವಿವರ

1) ಸ್ಟೆನೊ: 28

2) ಟೈಪಿಸ್ಟ್‌: 10

3) ಬೆರಳಚ್ಚು ನಕಲುಗಾರರ: 13

4) ಆದೇಶ ಜಾರಿಕಾರರು: 04

ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿಯ ಮಾಹಿತಿಗಾಗಿ ಈ ಕೆಳಗೆ ನಿಡಿರುವ ಅಧಿಸೂಚನೆಯ ಲಿಂಕ್‌ ನೋಡುವುದು. 

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಈ ಅಧಿಸೂಚನೆ ಲಿಂಕ್‌ ನೋಡಿ

ಅಧಿಸೂಚನೆ ಲಿಂಕ್‌: https://bit.ly/37SuQ4T

ಅರ್ಜಿ ಸಲ್ಲಿಸುವ ಕೊನೆಯ ದಿನ: 21-01-2020

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು