ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ವಾರ್ತೆ

Last Updated 29 ನವೆಂಬರ್ 2019, 7:44 IST
ಅಕ್ಷರ ಗಾತ್ರ
ADVERTISEMENT

* ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಾರ್ಗೊ ಲಾಜಿಸ್ಟಿಕ್ ಆ್ಯಂಡ್ ಅಲೈಡ್‌ ಸರ್ವಿಸ್ ಕಂಪನಿ ಲಿಮಿಟೆಡ್‌, ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ 419 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು.

ವಯೋಮಿತಿ: 15 ನವೆಂಬರ್ 2019ಕ್ಕೆ ಅನ್ವಯವಾಗುವಂತೆ ಗರಿಷ್ಠ 45 ವರ್ಷ.

ನೇಮಕಾತಿ ಪ್ರಕ್ರಿಯೆ: ಲಿಖಿತ, ದೈಹಿಕ ಪರೀಕ್ಷೆ, ಸಂದರ್ಶನ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹500, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಯೋಧ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.

ಅರ್ಜಿಸಲ್ಲಿಸಲು ಕೊನೆಯ ದಿನ: 9 ಡಿಸೆಂಬರ್ 2019.

ಹೆಚ್ಚಿನ ಮಾಹಿತಿಗೆ: https://bit.ly/2KJO9EA

*ಸಿಬಿಎಸ್‌ಇಯಲ್ಲಿ 357 ಹುದ್ದೆಗಳು

ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 357 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಸಹಾಯಕ ಕಾರ್ಯದರ್ಶಿ, ಅನಲಿಸ್ಟ್‌, ಕಿರಿಯ ಭಾಷಾಂತರಕಾರರು, ಹಿರಿಯ ಸಹಾಯಕ, ಕಿರಿಯ ಸಹಾಯಕ, ಅಕೌಂಟೆಂಟ್‌ ಹಾಗೂ ಜೂನಿಯರ್‌ ಅಕೌಂಟೆಂಟ್.

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷ (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ನೇಮಕಾತಿ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ.

ಉದ್ಯೋಗ ಸ್ಥಳ: ದೇಶದ ಯಾವುದೇ ಸಿಬಿಎಸ್‌ಇ ಪ್ರಾಂತೀಯ ಕಚೇರಿಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 16 ಡಿಸೆಂಬರ್2019

ಹೆಚ್ಚಿನ ಮಾಹಿತಿಗೆ: https://bit.ly/2QzLiSh

* ಕೇಂದ್ರ ಗೃಹಸಚಿವಾಲಯದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು 300 ಹೆಡ್‌ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಪೂರ್ಣಗೊಳಿಸಿರಬೇಕು. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ಆದ್ಯತೆ.

ವಯೋಮಿತಿ: 1 ಆಗಸ್ಟ್ 2019ಕ್ಕೆ ಅನ್ವಯವಾಗುವಂತೆ ಕನಿಷ್ಠ 18, ಗರಿಷ್ಠ 23. ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ.

ವೇತನ: ₹25,000 ದಿಂದ ₹81,100

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹100. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆ ಮತ್ತು ಮಾಜಿಯೋಧ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ವಿಧಾನ: ಲಿಖಿತ, ದೈಹಿಕ, ವೈದ್ಯಕೀಯ ಪರೀಕ್ಷೆ.

ಉದ್ಯೋಗ ಸ್ಥಳ: ಭಾರತ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 17 ಡಿಸೆಂಬರ್ 2019.

ಹೆಚ್ಚಿನ ಮಾಹಿತಿಗೆ: https://cisfrectt.in

* ಎಚ್‌ಸಿಎಲ್‌ನಲ್ಲಿ 47 ಹುದ್ದೆಗಳು

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಕಾಪರ್ ಲಿಮಿಟೆಡ್‌ ಸಂಸ್ಥೆಯು (ಎಚ್‌ಸಿಎಲ್‌) ವಿವಿಧ ವಿಭಾಗಗಳಲ್ಲಿನ47 ಟ್ರೇನಿ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಮೆಕಾನಿಕ್, ಎಲೆಕ್ಟ್ಟಿಕ್, ಸಿವಿಲ್, ಫ್ಲ್ಯಾಶ್ ಸ್ಮೆಲ್ಟರ್‌, ಪವರ್‌ ಪ್ಲ್ಯಾಂಟ್‌, ಲ್ಯಾಬೊರೇಟರ್‌ ವಿಭಾಗಗಳಲ್ಲಿ ಅಟೆಂಡರ್‌ ಹಾಗೂ ಟೆಕ್ನಿಷಿಯನ್ ಟ್ರೇನಿ.

ವೇತನ ಶ್ರೇಣಿ: ₹12,800ರಿಂದ ₹15,700

ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಐಟಿಐ, ಮೆಕಾನಿಕಲ್, ಆಟೊಮೊಬೈಲ್‌, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ವಿಷಯಗಳಲ್ಲಿ ಡೊಪ್ಲೊಮಾ ಪೂರ್ಣವಾಗಿರಬೇಕು.

ವಯೋಮಿತಿ: 1 ನವೆಂಬರ್ 2019ಕ್ಕೆ ಅನ್ವಯವಾಗುವಂತೆ ಕನಿಷ್ಠ 18, ಗರಿಷ್ಠ 40 ವರ್ಷ. (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ. (ತಪ್ಪು ಉತ್ತರಗಳಿಗೆ ಋಣಾಂಕವಿರುತ್ತದೆ)

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹500. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ₹250.

ಶುಲ್ಕ ಸಲ್ಲಿಸುವ ವಿಧಾನ: ಭಾರತೀಯ ಸ್ಟೇಟ್‌ಬ್ಯಾಂಕ್‌ನಲ್ಲಿ ಹಿಂದುಸ್ತಾನ್ ಕಾಪರ್ ಲಿಮಿಟೆಡ್, ಇಂಡಿಯನ್ ಕಾಪರ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ: ಸೂಕ್ತದಾಖಲೆಗಳೊಂದಿಗೆ, ಸ್ವ–ವಿವರಗಳು ಇರುವಂತಹ ಎ4 ಅಳತೆಯ ಅರ್ಜಿಯನ್ನು ಸಂಸ್ಥೆಯ ವಿಳಾಸಕ್ಕೆ ಸಹಾಯಕ ವ್ಯವಸ್ಥಾಪಕರ ಹೆಸಿರಿಗೆ ತಲುಪಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಸಹಾಯಕ ನಿರ್ವಾಹಕರು, ಹಿಂದುಸ್ತಾನ್ ಕಾಪರ್ ಲಿಮಿಟೆಡ್, ಇಂಡಿಯನ್ ಕಾಪರ್ ಕಾಂಪ್ಲೆಕ್ಸ್, ಮೌಬಂಧರ್, ಪೂರ್ವ ಸಿಂಗ್‌ಭಮ್ ಜಿಲ್ಲೆ, ಜಾರ್ಖಂಡ್.

ಅರ್ಜಿ ಸಲ್ಲಿಸಲು ಕೊನೆಯ ದಿನ: 16 ಡಿಸೆಂಬರ್ 2019.

ಹೆಚ್ಚಿನ ಮಾಹಿತಿಗೆ: www.hindustancopper.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT