ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಂಪನ್ಮೂಲ ನಿರ್ವಹಣೆಯೂ ಒಂದು ಕಲೆ

Last Updated 10 ಸೆಪ್ಟೆಂಬರ್ 2019, 11:17 IST
ಅಕ್ಷರ ಗಾತ್ರ

ಇತ್ತೀಚೆಗೆ ನನ್ನ ದೈನಂದಿನ ತರಗತಿಗಳನ್ನು ಮುಗಿಸಿಕೊಂಡು ಹೊರಟಾಗ ಈ ವರ್ಷ ಎಂ.ಬಿ.ಎ.ಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ಗಂಭೀರ ಚರ್ಚೆಯಲ್ಲಿ ತೊಡಗಿತ್ತು. ಅವರ ಒಂದೊಂದೇ ಮಾತುಗಳು ನನ್ನ ಕಿವಿಗಳ ಮೇಲೆ ಬೀಳತೊಡಗಿದವು. ಅವರಲ್ಲಿ ಒಬ್ಬ ವಿದ್ಯಾರ್ಥಿ ಎಂ.ಬಿ.ಎ. ಕೋರ್ಸ್‌ನಲ್ಲಿ ಯಾವ ಐಚ್ಛಿಕ ವಿಷಯ ತೆಗೆದುಕೊಂಡರೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರಣೆ ನೀಡುತ್ತಿದ್ದ. ಆ ವಿದ್ಯಾರ್ಥಿಯು ‘ಬೇರೆ ಸ್ಪೆಷಲೈಜೇಶನ್‌ಗೆ ಕಂಪೇರ್ ಮಾಡಿದ್ರೆ ಎಂ.ಬಿ.ಎ. ಎಚ್.ಆರ್‌.ಗೆ ಜಾಬ್ ಅವಕಾಶ ಕಡಿಮೆ’ ಎನ್ನುತ್ತಿದ್ದ.

ಸುಮಾರು ಐದು ವರ್ಷಗಳ ಹಿಂದೆ ಹೀಗೆಯೇ ಒಬ್ಬ ವಿದ್ಯಾರ್ಥಿನಿಯ ಪಾಲಕರು ‘ನನ್ನ ಮಗಳು ಎಂ.ಬಿ.ಎ. ಎಚ್.ಆರ್. ಮಾಡ್ಬೇಕು ಅಂತಿದ್ದಾಳೆ. ಮಾಡಿದರೆ ಕೆಲಸ ಸಿಗುತ್ತಾ?’ ಎಂದು ಕೇಳಿದ್ದರು. ಅವರಿಗೆ ಸವಿವರವಾಗಿ ಎಂ.ಬಿ.ಎ. (ಎಚ್.ಆರ್.) ಹಾಗೂ ಇತರ ಸ್ಪೆಷಲೈಜೇಶನ್ ಬಗ್ಗೆ ಮಾಹಿತಿ ನೀಡಿದ್ದೆ. ಎರಡು ವರ್ಷಗಳ ನಂತರ ಆ ವಿದ್ಯಾರ್ಥಿನಿಗೆ ಒಂದು ಎಂ.ಎನ್.ಸಿ ಕಂಪನಿಯಲ್ಲಿ ಎಚ್‌.ಆರ್‌. ಆಗಿ ಕೆಲಸ ಸಿಕ್ಕಿತ್ತು. ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯದಲ್ಲಿ ಪರಿಣತಿ ಪಡೆದರೆ, ಕೆಲಸ ಸಿಗುವ ಸಂಭವ ಹೆಚ್ಚು, ಎಂ.ಬಿ.ಎ. (ಎಚ್.ಆರ್.) ಮಾಡಿದರೆ ಕೆಲಸ ಸಿಗುವುದು ಕಷ್ಟ ಎಂಬುದು ತಪ್ಪು ಕಲ್ಪನೆ.

ಇದು ಕೈಗಾರಿಕಾ ಯುಗ. ಜಗತ್ತಿನಾದ್ಯಂತ ಬಹಳಷ್ಟು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಸಂಸ್ಥೆ ಅಥವಾ ಕೈಗಾರಿಕೆ ಉತ್ತಮವಾಗಿ ಕಾರ್ಯನಿರ್ವಹಿಸಿ ಲಾಭ ಪಡೆಯಬೇಕಾದಲ್ಲಿ ಕೌಶಲ ಹೊಂದಿದ ಅಥವಾ ನುರಿತ ಉದ್ಯೋಗಿಗಳು ಅವಶ್ಯಕ. ಉದ್ಯೋಗಿಗಳು ಯಾವುದೇ ಸಂಸ್ಥೆಯ ಆಸ್ತಿ ಇದ್ದಂತೆ. ಈ ಉದ್ಯೋಗಿಗಳು ತಾವು ಮಾಡುವ ಕಾರ್ಯದಲ್ಲಿ ಆಸಕ್ತಿ ಇಟ್ಟುಕೊಂಡರೆ ಅವರಿಂದ ಸಂಸ್ಥೆಯು ಉತ್ಪಾದಕತೆಯನ್ನು ಹೆಚ್ಚಿನ ರೀತಿಯಲ್ಲಿ ಅಪೇಕ್ಷಿಸಬಹುದು.

ಉದ್ಯೋಗಿಗಳ ನಿರ್ವಹಣೆಯೂ ಒಂದು ಕಲೆ

ಇಂತಹ ಉದ್ಯೋಗಿಗಳನ್ನು ನಿರ್ವಹಿಸಲು ಬೇಕಾಗಿರುವ ಕೌಶಲಗಳನ್ನು ಹೊಂದಲು ಎಂ.ಬಿ.ಎ. ಇನ್ ಹ್ಯೂಮನ್‌ ರಿಸೋರ್ಸ್‌ (ಮಾನವ ಸಂಪನ್ಮೂಲ ನಿರ್ವಹಣೆ) ನಂತಹ ಒಂದು ವೃತಿಪರ ಕೋರ್ಸ್‌ನ ಅವಶಕತೆ ಇದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಎಂ.ಬಿ.ಎ.(ಎಚ್.ಆರ್.) ಕೋರ್ಸ್ ಮಾಡಿ ಉದ್ಯಮಗಳಿಗೆ ಬೇಕಾಗಿರುವ ಕೌಶಲಗಳನ್ನು ಕರಗತ ಮಾಡಿಕೊಂಡರೆ, ಒಳ್ಳೆಯ ಕಂಪನಿ ಅಥವಾ ಸಂಸ್ಥೆಯಲ್ಲಿ ಉತ್ತಮ ಉದ್ಯೋಗ ಸಿಗುವ ಸಾಧ್ಯತೆ ಇದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೂಡ ಕೆಲಸ ಗಿಟ್ಟಿಸಿಕೊಳ್ಳಬಹುದು. ಒಬ್ಬ ಮಾನವ ಸಂಪನ್ಮೂಲ ಪ್ರಬಂಧಕ ಯಾವುದೇ ಕಂಪನಿಯಲ್ಲಿ ಯಶಸ್ಸು ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾನೆ.

ಕೋರ್ಸ್ ವಿವರ

ಇದು ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ಸ್ನಾತಕೋತ್ತರ ಕೋರ್ಸ್. ಎಂ.ಬಿ.ಎ. ಪದವಿ ಪಡೆಯಲು ಯಾವುದೇ ಪದವಿಯನ್ನು ಶೇ 50 ಅಂಕಗಳೊಂದಿಗೆ ತೇರ್ಗಡೆ ಹೊಂದುವುದು ಅವಶ್ಯಕ. ಎಂ.ಬಿ.ಎ. ಪ್ರಥಮ ವರ್ಷದ (ಮೊದಲೆರಡು ಸೆಮಿಸ್ಟರ್‌ನ) ತರಗತಿಯಲ್ಲಿ ಸಾಮಾನ್ಯ ಮ್ಯಾನೇಜ್‌ಮೆಂಟ್ ವಿಷಯಗಳಾದ ಸಂಖ್ಯಾಶಾಸ್ತ್ರ, ಸಂವಹನ ಕಲೆ, ಮ್ಯಾನೇಜ್‌ಮೆಂಟ್ ಇನ್‌ಫಾರ್ಮೇಶನ್ ಸಿಸ್ಟಮ್‌, ಮಾರುಕಟ್ಟೆ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ ಮುಂತಾದ ವಿಷಯಗಳ ಮೇಲೆ ನುರಿತ ತರಬೇತಿಯನ್ನು ನೀಡಲಾಗುತ್ತದೆ.

ದ್ವಿತೀಯ ವರ್ಷದಲ್ಲಿ (ಮೂರು ಹಾಗೂ ನಾಲ್ಕನೇ ಸೆಮಿಸ್ಟರ್) ಆಸಕ್ತ ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ನಿರ್ವಹಣೆಯನ್ನು (ಎರಡು ಸೆಮಿಸ್ಟರ್) ತಮ್ಮ ಐಚ್ಛಿಕ ವಿಷಯವಾಗಿ ಆರಿಸಿಕೊಳ್ಳಲು ಅವಕಾಶವಿದೆ.

ಯಾವ ವಿಷಯಗಳನ್ನು ತೆಗೆದುಕೊಳ್ಳಬಹುದು?

ಅಡ್ವಾನ್ಸ್‌ಡ್ ಆರ್ಗನೈಜೇಶನ್ ಬಿಹೇವಿಯರ್

ಉದ್ಯೋಗಕ್ಕೆ ಸಂಬಂಧಪಟ್ಟ ಕಾಯ್ದೆಗಳು

ಕೈಗಾರಿಕಾ ಸಂಬಂಧಗಳು

ನೇಮಕಾತಿ ಹಾಗೂ ಆಯ್ಕೆ

ತರಬೇತಿ ಹಾಗೂ ಅಭಿವೃದ್ಧಿ

ತಂಡದ ಅಭಿವೃದ್ಧಿ

ಸಂಸ್ಥೆಗಳ ಅಭಿವೃದ್ಧಿ

ವೇತನ ಹಾಗೂ ಪರಿಹಾರ ನಿರ್ವಹಣೆ

ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ನಿರ್ವಹಣೆ

ನಾಯಕತ್ವ

ಉದ್ಯೋಗಿ ಸಮಾಲೋಚನೆ

ಕೌಶಲಗಳ ಅಭಿವೃದ್ಧಿ ಹೇಗೆ?

ನಿರಂತರ ಕಲಿಕೆ

ಉದ್ಯಮದೊಂದಿಗೆ ನಿರಂತರ ಸಂಪರ್ಕ ಹಾಗೂ ಸಂವಾದ

ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಪಟ್ಟ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳ ಅಧ್ಯಯನದ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಅವರ ಪ್ರಸ್ತುತ ಕೌಶಲವನ್ನು ಅಭಿವೃದ್ಧಿಪಡಿಸುವುದು.

***

ಕೇಸ್ ಸ್ಟಡಿ ವಿಧಾನ

ಎಲ್ಲೆಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ?

ಪ್ರಮುಖ ತಯಾರಿಕಾ ಹಾಗೂ ಸೇವೆ, ಸಾಪ್ಟ್‌ವೇರ್, ಫಾರ್ಮಾಸ್ಯುಟಿಕಲ್, ಪ್ರಮುಖ ಆಮದು ಹಾಗೂ ರಫ್ತು ಕಂಪನಿಗಳು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳು.

ಕೋರ್ಸ್‌ ನಂತರ ಯಾವ ಯಾವ ಹುದ್ದೆಗಳನ್ನು ಅಪೇಕ್ಷಿಸಬಹುದು?

ಎಚ್.ಆರ್. ಜನರಲಿಸ್ಟ್

ನೇಮಕಾತಿ ನಿರ್ದೇಶಕರು

ಟೆಕ್ನಿಕಲ್ ರಿಕ್ರ್ಯೂಟರ್ ವೇತನ ಹಾಗೂ ಇತರ ಸೌಲಭ್ಯಗಳ ಪ್ರಬಂಧಕರು

ಉದ್ಯೋಗಿ ಸಂಬಂಧಗಳ ಪ್ರಬಂಧಕರು

ಪ್ಲೇಸ್‌ಮೆಂಟ್ ಅಧಿಕಾರಿ

ತರಬೇತಿ ಹಾಗೂ ಅಭಿವೃದ್ಧಿ ನಿರ್ದೇಶಕರು

ಸಂಸ್ಥೆಯ ಅಭಿವೃದ್ಧಿ ಹಾಗೂ ಬದಲಾವಣೆಯ ಸಲಹೆಗಾರರು

ಸಾರ್ವಜನಿಕ ಸಂಬಂಧದ ಅಧಿಕಾರಿ

ಉದ್ಯೋಗಿ ಕಲ್ಯಾಣದ ಅಧಿಕಾರಿ

(ಲೇಖಕರು ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಬಿ.ಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು)

***

ಯಾವ ಕೌಶಲಗಳು ಬೇಕು?

ಅತ್ಯುತ್ತಮ ಸಂವಹನ ಕೌಶಲಗಳು

ಮೇಲ್ವಿಚಾರಣೆ ಕೌಶಲಗಳು

ಯೋಜನಾ ಕೌಶಲಗಳು

ಅಂತರ್‌ವ್ಯಕ್ತಿ ಕೌಶಲಗಳು

ಉತ್ತಮ ಕಂಪ್ಯೂಟರ್ ಹಾಗೂ ಅಂತರ್ಜಾಲ ವಿಶ್ಲೇಷಣಾ ಕೌಶಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT