ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 908 ಹುದ್ದೆಗಳು

7

ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 908 ಹುದ್ದೆಗಳು

Published:
Updated:

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ (ಎಎಐ) ಖಾಲಿ ಇರುವ 908 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ಹೆಸರು: ಮ್ಯಾನೇಜರ್–496, ಜ್ಯೂನಿಯರ್ ಎಕ್ಸಿಕ್ಯುಟೀವ್–412

ಒಟ್ಟು ಹುದ್ದೆಗಳು: 908

ಉದ್ಯೋಗ ಸ್ಥಳ: ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.

ವಿದ್ಯಾರ್ಹತೆ: ಮ್ಯಾನೇಜರ್ ಹುದ್ದೆ– ಬಿ.ಕಾಂ ಪದವಿ ಜತೆಗೆ ಐಸಿಡಬ್ಯುಎ/ಸಿಎ/ಎಂಬಿಎ/ ಅತವಾ ಬಿಇ/ಬಿ.ಟೆಕ್ ಅಥವಾ ಸ್ನಾತಕೋತ್ತರ/ಪದವಿ ಪಡೆದಿರಬೇಕು. 

ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆ– ಪದವಿ/ಬಿಎಸ್‌ಸಿ/ಬಿಇ/ಬಿ.ಟೆಕ್/ಬಿ.ಕಾಂ/ಐಸಿಡಬ್ಯುಎ/ಸಿಎ/ಎಂಬಿಎ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವೇತನ ಶ್ರೇಣಿ: ಮ್ಯಾನೇಜರ್‌ ಹುದ್ದೆ– ₹60,000 ರಿಂದ ₹ 1,80,000 (ತಿಂಗಳಿಗೆ)

ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆ– ₹40,000 ರಿಂದ ₹1,40,000 

ವಯೋಮಿತಿ: ದಿನಾಂಕ: ಜೂನ್ 30, 2018ಕ್ಕೆ ಅನ್ವಯವಾಗುವಂತೆ ಮ್ಯಾನೇಜರ್ ಹುದ್ದೆಗೆ 32 ವರ್ಷ, ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 27 ವರ್ಷ ನಿಗದಿ ಪಡಿಸಲಾಗಿದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 16, 2018

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಹಿಂದುಳಿದ ವರ್ಗದವರಿಗೆ ₹1,000 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು ಮತ್ತು ಅಂಗವಿಕಲರಿಗೆ ಯಾವುದೇ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ

ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ 166 ಹುದ್ದೆಗಳು

ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಖಾಲಿ ಇರುವ 166 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆ ಹೆಸರು: ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಜನರಲ್–127 , ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಇಪಿಆರ್–22, ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಎಸ್ಐಎಮ್– 17

ಒಟ್ಟು ಹುದ್ದೆಗಳು: 166

ಉದ್ಯೋಗ ಸ್ಥಳ: ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧವಾಗಿರಬೇಕು.

ವಿದ್ಯಾರ್ಹತೆ: ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಜನರಲ್ ಹುದ್ದೆ– ಶೇ 60ರಷ್ಟು ಅಂಕಗಳೊಂದಿಗೆ ಪದವಿ, ಪಿಯುಸಿ/ಡಿಪ್ಲೊಮಾ/ ಮತ್ತು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು.

ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಇಪಿಆರ್ ಹುದ್ದೆ– ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ, ಮ್ಯಾಥಮೆಟಿಕಲ್ ಎಕಾನಿಮಿಕ್ಸ್, ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ55ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ: ₹35,150 ರಿಂದ ₹62,400 

ವಯೋಮಿತಿ: 1 ಜುಲೈ 2018ಕ್ಕೆ ಅನ್ವಯವಾಗುವಂತೆ 21 ರಿಂದ 30 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 23, 2018

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 850, ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ₹100.

 

Tags: 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !