ಮಂಗಳವಾರ, ಜನವರಿ 21, 2020
27 °C

₹ 50,000 ವೇತನ: ಐಡಿಬಿಐ ಬ್ಯಾಂಕಿನಲ್ಲಿ ಪದವೀಧರರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು :ಐಡಿಬಿಐ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಹುದ್ದೆಗಳ ವಿವರ: ಡಿಜಿಎಂ 2 ಹುದ್ದೆ, ಎಜಿಎಂ 5 ಹುದ್ದೆ, ಮ್ಯಾನೆಜರ್‌ 54 ಹುದ್ದೆಗಳು

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ಅಥವಾ ತೋಟಗಾರಿಕ ಪದವಿ, ಎಂಬಿಎ, ವಾಣಿಜ್ಯ ಪದವಿ ಅಥವಾ ಸಿಎ ಪಡೆದಿರಬೇಕು. ವಿದ್ಯಾರ್ಹತೆಯ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು. 

ವೇತನ ಶ್ರೇಣಿ

1) ಡಿಜಿಎಂ–)-₹ 59170

2) ಎಜಿಎಂ– -₹ 51490 

3) ಮ್ಯಾನೇಜರ್–₹ 45950 

ವಯಸ್ಸು: ಡಿಸೆಂಬರ್ 12,  2019ಕ್ಕೆ ಅನ್ವಯವಾಗುವಂತೆ 18 ರಿಂದ 45 ವರ್ಷದೊಳಗಿನವರಾಗಿರಬೇಕು. (ಮೀಸಲಾತಿ ನಿಯಮಗಳು ಅನ್ವಯಿಸುತ್ತವೆ).

ವಯೋಮಿತಿ ಸಡಿಲಿಕೆ:  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಸೇವಾ ಅನುಭವವನ್ನು ಪರಿಗಣಿಸಿ ಸಂದರ್ಶನಕ್ಕೆ ಕರೆಯಲಾಗುವುದು. ನೇಮಕಾತಿಯು ಸಂದರ್ಶನದ ಮೂಲಕ ನಡೆಯಲಿದೆ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹700, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹150.

ಉದ್ಯೋಗ ಸ್ಥಳ: ದೇಶದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 12–12–2019

ಅಧಿಸೂಚನೆಯ ಲಿಂಕ್‌: https://bit.ly/33SItyH

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ನೋಡಿ: www.idbibank.in.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು