ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್‌ ಎಂಜಿನಿಯರಿಂಗ್ವಿದೇಶದಲ್ಲಿ ವ್ಯಾಸಂಗ

ಶಿಕ್ಷಣ
Last Updated 12 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

* ನಾನು ಸಿವಿಲ್‌ ಎಂಜಿನಿಯರಿಂಗ್‌ ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಜರ್ಮನಿಯ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸಿದ್ದೇನೆ. ನಾನು ಐಇಎಲ್‌ಟಿಎಸ್‌ ಪರೀಕ್ಷೆ ಕೂಡ ತೆಗೆದುಕೊಂಡಿದ್ದೇನೆ. ಜರ್ಮನ್‌ ಕೂಡಾ ಕಲಿತಿದ್ದೇನೆ. ಆದರೆ ಸಿವಿಲ್‌ನಲ್ಲಿ ಯಾವ ಯಾವ ಸ್ನಾತಕೋತ್ತರ ಕೋರ್ಸ್‌ಗಳಿವೆ ಹಾಗೂ ಸಿವಿಲ್‌ ಎಂಜಿನಿಯರ್‌ಗಳಿಗೆ ಯಾವ ಉದ್ಯೋಗ ಸಿಗಬಹುದು ಎಂಬುದನ್ನು ತಿಳಿಸಿ.

- ಸಂಜೀವಿನಿ, ಮೈಸೂರು

ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ತಜ್ಞತೆ ಪಡೆಯುವ ಅನೇಕ ಸ್ನಾತಕೋತ್ತರ ಪದವಿಗಳಿವೆ ಅವುಗಳಲ್ಲಿ ಕೆಲವು.

1. ಮಾಸ್ಟರ್ ಆಫ್ ಎಂಜಿನಿಯರಿಂಗ್ ಇನ್ ಸಿವಿಲ್ ಮತ್ತು ಸ್ಟ್ರಕ್ಚರಲ್‌ ಎಂಜಿನಿಯರಿಂಗ್

2. ಮಾಸ್ಟರ್ ಡಿಗ್ರಿ ಇನ್ ಸ್ಟ್ರಕ್ಚರಲ್‌ ಎಂಜಿನಿಯರಿಂಗ್

3. ಮಾಸ್ಟರ್ಸ್ ಆಫ್ ನ್ಯಾಚುರಲ್ ಹಜ್ವಾರ್ಡ್ ಅಂಡ್ ರಿಸ್ಕ್ಸ್ ಇನ್ ಸ್ಟ್ರಕ್ಚರಲ್‌ ಎಂಜಿನಿಯರಿಂಗ್

4. ಮಾಸ್ಟರ್ಸ್ ಇನ್ ಸಿವಿಲ್ ಎಂಜಿನಿಯರಿಂಗ್ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ಸ್.

ಈ ಮೇಲ್ಕಂಡ ಎಲ್ಲಾ ಆಯ್ಕೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ, ಅವುಗಳಿಂದ ನಿಮ್ಮ ಮುಂದಿನ ಕೆಲಸ ಸಿಗುವ ಅವಕಾಶಗಳನ್ನು ವಿಚಾರ ಮಾಡಿ ಆಯಾಯಾ ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ನಿಮಗೆ ಆಸಕ್ತಿ ಇರುವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಸಿವಿಲ್ ಎಂಜಿನಿಯರ್‌ಗಳಿಗೆ ಕನ್ಸ್‌ಸ್ಟ್ರಕ್ಷನ್ ಕಂಪನಿಗಳಲ್ಲಿ, ಸಲಹೆಗಾರರಾಗಿ, ಎಂಜಿನಿಯರಿಂಗ್ ಯೋಜನೆಗಳ ಕಂಪನಿಗಳಲ್ಲಿ, ಸೇಲ್ಸ್ ಅಂಡ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಹಾಗೂ ಭೋದಕರಾಗಿ ಅಥವಾ ಸಂಶೋಧಕರಾಗಿ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳಲ್ಲಿಯೂ ಅವಕಾಶವಿರುತ್ತದೆ. ಒಟ್ಟಾರೆ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ.

ವಿದೇಶಗಳಲ್ಲಿ ಸಿಗುವ ಅವಕಾಶಗಳಿಗೆ ‘ಓವರ್ಸಿಸ್ ಎಜುಕೇಷನ್’ ಸಂಪರ್ಕಿಸಿ.

* ನಾನು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವೆ. ನನಗೆ 17 ವಯಸ್ಸು. ನಾನು ಭವಿಷ್ಯದಲ್ಲಿ ಐ.ಪಿ.ಎಸ್. ಅಧಿಕಾರಿ ಆಗಬೇಕೇಂದಿದ್ದೇನೆ. ಅದಕ್ಕೆ ಬೇಕಾದ ಮಾರ್ಗದರ್ಶನ ನೀಡಿ.

-ಹರೀಶ್, ಊರು ಬೇಡ

ನೀವು ಐ.ಪಿ.ಎಸ್. ಅಧಿಕಾರಿಯಾಗಬೇಕಾದರೆ ಯು.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಪರೀಕ್ಷೆಗಳಿಗೆ ಬಹಳಷ್ಟು ಪರಿಶ್ರಮ ಮತ್ತು ಸಾಧನೆ ಬೇಕಾಗುತ್ತದೆ. ಪಿ.ಯು.ಸಿ. ಪರೀಕ್ಷೆಗಳಾದ ನಂತರದಲ್ಲಿ ನೀವು ಪದವೀಧರರಾಗಿ ಅದರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರೆ ಒಳ್ಳೆಯದು. ಯು.ಪಿ.ಎಸ್.ಸಿ. ಪರೀಕ್ಷೆಗಳಲ್ಲಿ ನೀವು ಐಚ್ಛಿಕ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕನುಸಾರವಾಗಿ ನಿಮ್ಮ ಐಚ್ಛಿಕ ವಿಷಯಗಳನ್ನು ಮತ್ತು ಸೂಕ್ತ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಸುಮಾರು ಒಂದರಿಂದ ಎರಡು ವರ್ಷಗಳ ತಯಾರಿಯೇ ಬೇಕಾಗುತ್ತದೆ. ನಿಮ್ಮ ಕಾಲೇಜು ಡಿಗ್ರಿ ಮುಗಿದ ತಕ್ಷಣ ಒಳ್ಳೆಯ ತರಬೇತಿಯನ್ನು ನೀಡುವ ಶಿಕ್ಷಣ ಸಂಸ್ಥೆಗೆ ಸೇರಬೇಕು. ನಿಮ್ಮ ದೈಹಿಕ ಕ್ಷಮತೆ ಕೂಡ ಪರಿಗಣಿಸಲ್ಪಡುತ್ತದೆ.

* ನಾನು ಎಂ.ಕಾಂ. ಓದುತ್ತಿದ್ದೇನೆ. ಎಂ.ಕಾಂ. ಮುಗಿದ ನಂತರ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಯಾವ್ಯಾವ ಉದ್ಯೋಗಾವಕಾಶಗಳಿವೆ ಎಂಬುದನ್ನು ತಿಳಿಸಿ.

- ಸುಧಾ, ಊರು ಬೇಡ

ನೀವು ‘ಎಂ.ಕಾಂ’‍ ಪೂರ್ಣಗೊಳಿಸಿದ ತಕ್ಷಣವೇ ನಿಮಗೆ ಹಲವಾರು ಕೆಲಸಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಉದಾಹರಣೆಗೆ ‘ಅಕೌಂಟಿಂಗ್ ಮತ್ತು ಆಡಿಟಿಂಗ್’ ಸಂಸ್ಥೆಗಳು. ಸೂಕ್ತ ಕಂಪನಿಗಳಲ್ಲಿ ‘ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ಗಳು’, ‘ಸ್ಟಾಕ್ ಬ್ರೋಕಿಂಗ್ ಸಂಸ್ಥೆಗಳು’ ಇತ್ಯಾದಿ.

ಕೆಲವು ಬ್ಯಾಂಕ್‌ಗಳಲ್ಲಿ ಕೂಡ ನಿಮಗೆ ಅವಕಾಶವಿರುತ್ತದೆ. ಹಣಕಾಸು ವ್ಯವಹಾರ ಮಾಡುವ, ಇನ್ಸೂರೆನ್ಸ್ ಕಂಪನಿಗಳಲ್ಲಿ ಕೂಡ ಅವಕಾಶ ಸಿಗುತ್ತದೆ. ನೀವು ಎಚ್‌ಆರ್ ಡಿಪಾರ್ಟ್‌ಮೆಂಟಿಗೆ ಸಾಧ್ಯತೆಗಳೂ ಇರುತ್ತವೆ.

* ನನ್ನ ಅಣ್ಣನ ಮಗಳು ಈಗ ಎಸ್‌ಎಸ್‌ಎಲ್‌ಸಿ ಕೇಂದ್ರೀಯ ವಿದ್ಯಾಲಯಸಿಬಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದಾಳೆ, ಅವಳು ಎಲ್ಲ ಪಠ್ಯೇತರದಲ್ಲೂ ಸಮ ಇದ್ದಾಳೆ, ಜೊತೆಗೆ ಯಾವುದು ಆಯ್ಕೆ ಮಾಡುವುದು ಅನ್ನೋ ಗೊಂದಲ ಇದೆ. ಅದಕ್ಕೆ ಮುಂದೆ ಅವಳಿಗೆ ಬೇಗ ಒಳ್ಳೆ ಕೆಲಸ ಸಿಗಬೇಕು ಎನ್ನುವುದು ನನ್ನ ಬಯಕೆ, ಹೆಣ್ಣು ಹುಡುಗಿ ಅಲ್ವ ಒಳ್ಳೆ ಕೆಲಸ ಇದ್ದರೆ ಅನುಕೂಲ, ಪಿಯುಸಿ ಅಲ್ಲದೆ ಬೇರೆ ಯಾವ ಮಾರ್ಗದಲ್ಲಿ ಹೋಗುವುದು ಉತ್ತಮ ಮತ್ತು ಪಿಯುಸಿ ತೆಗೆದುಕೊಂಡರೆ ಯಾವುದು ಉತ್ತಮ ಎರಡನ್ನೂ ತಿಳಿಸಿ.

- ಸೌಭಾಗ್ಯ, ಬೆಂಗಳೂರು

ನಿಮಗೆ ಬೇಗ ಕೆಲಸ ಸಿಗಬೇಕೆಂದರೆ ಮೊದಲು ಪದವೀಧರರಾಗಿ. ಕಾಲೇಜುಗಳಲ್ಲಿ ನಡೆಯುವ ಕ್ಯಾಂಪಸ್ ಇಂಟರ್‌ವ್ಯೂಗಳಲ್ಲಿ ಭಾಗಿಯಾಗಿ ಉತ್ತಮ ಅನುಭವವನ್ನು ಪಡೆಯಬೇಕು.

10ನೇ ತರಗತಿ ಆದ ತಕ್ಷಣದಲ್ಲಿ ನೀವು ಅತ್ಯುತ್ತಮವಾದ ‘ವೃತ್ತಿ ಮಾರ್ಗದರ್ಶನ’ (ಕೆರಿಯರ್ ಗೈಡೆನ್ಸ್) ನೀಡುವ ಸಂಸ್ಥೆಗೆ ನೋಂದಾಯಿಸಿಕೊಂಡು ಉತ್ತಮ ಕೌನ್ಸೆಲರ್‌ನ ಬಳಿ ನಿಮ್ಮ ಆಸಕ್ತಿ, ಶ್ರದ್ಧೆ, ದೃಷ್ಟಿಕೋನ, ಯೋಗ್ಯತೆ ಎಲ್ಲವುಗಳನ್ನು ಪರಿಶೀಲಿಸಿ ಸೂಕ್ತ ವೃತ್ತಿಯನ್ನು ಗುರುತಿಸುವಂತೆ ಮಾರ್ಗದರ್ಶನವನ್ನು ಪಡೆಯಿರಿ. ಒಂದು ವೇಳೆ ನೀವು ಪದವೀಧರರಾಗುವ ಮುಂಚೆಯೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದರೆ, ಡಿಪ್ಲೊಮಾ ಮತ್ತು ವೃತ್ತಿ‍ಪ‍ರ ಕೋರ್ಸ್‌ಗಳಿಗೆ ಸೇರಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT