ಪುತ್ರಿಯ ಒತ್ತಾಯಕ್ಕೆ ಮಣಿದು 55ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಶಾಸಕ

7

ಪುತ್ರಿಯ ಒತ್ತಾಯಕ್ಕೆ ಮಣಿದು 55ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಶಾಸಕ

Published:
Updated:

ಉದಯ್‌ಪುರ: ಶಿಕ್ಷಣ ಎಂಬುದು ನಿರಂತರ ಕಲಿಕೆ. ಅದಕ್ಕೆ ಕೊನೆ ಎಂಬುದೇ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ರಾಜಸ್ಥಾನದ ಉದಯಪುರದ ಶಾಸಕ.

ಇವರದ್ದು ಜ್ಞಾನಾರ್ಜನೆಗಾಗಿ ಮಾತ್ರ ಓದಲ್ಲ. ಜತೆಗೆ, ಪದವಿ ಗಳಿಕೆಗಾಗಿ! ಅದಕ್ಕೂ ಮೇಲಾಗಿ ಪುತ್ತಿಯ ಮನವಿ, ಒತ್ತಾಯಕ್ಕೆ ಮಣಿದು ಶಿಕ್ಷಣ ಮುಂದುವರಿಸುವ ನಿರ್ಧಾರ ಮಾಡಿದ್ದಾರೆ.

ಹೌದು, ಉದಯಪುರ ಗ್ರಾಮೀಣ ಕ್ಷೇತ್ರದ ಶಾಸಕ ಪೂಲ್ ಸಿಂಗ್‌ ಮೀನಾ ಅವರು ತಮ್ಮ 55ನೇ ವಯಸ್ಸಿನಲ್ಲಿ ಪದವಿ ಶಿಕ್ಷಣದ ಮೊದಲ ವರ್ಷದ ಪರೀಕ್ಷೆ ಬರೆದಿದ್ದಾರೆ.

ಪೂಲ್‌ ಸಿಂಗ್‌ ಅವರು ಗುರುವಾರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.    

ಈ ವೇಳೆ ಪ್ರತಿಕ್ರಿಯೆ ನೀಡಿರುವ ಪೂಲ್‌ ಸಿಂಗ್‌ ಮೀನಾ ಅವರು, ‘ನನ್ನ ಮಗಳು ಶಿಕ್ಷಣವನ್ನು ಮುಂದುವರಿಸುವಂತೆ ನನ್ನನ್ನು ಕೇಳಿಕೊಂಡಳು. ನನಗೆ ವಯಸ್ಸಾಗಿದೆ ಎಂದು ಹೇಳಿದೆ. ಅಂತಿಮವಾಗಿ ನನ್ನ ಪುತ್ರಿ ಪರೀಕ್ಷೆ ಬರೆಯುವಂತೆ ಮನವರಿಕೆ ಮಾಡಿದಳು’ ಎಂದು ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಮುಂದಿನ ದಿನಗಳಲ್ಲಿ ಪಿ.ಎಚ್‌ಡಿ ಮಾಡಲು ಬಯಸಿದ್ದೇನೆ’ ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !