ಸೋಮವಾರ, ಫೆಬ್ರವರಿ 24, 2020
19 °C

ಮಾರ್ಚ್‌ 16ರಿಂದ 7ನೇ ತರಗತಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಪಠ್ಯದಂತೆ ಪಾಠ ನಡೆಯುತ್ತಿರುವ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಾರ್ಚ್‌ 16ರಿಂದ 21ರವರೆಗೆ 7ನೇ ತರಗತಿಯ ‘ಸಾಮಾನ್ಯ ಮೌಲ್ಯಾಂಕನ’ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್‌ ತಿಳಿಸಿದೆ.

ಈ ಮೊದಲು ಮಾರ್ಚ್‌ 9ರಿಂದ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಈ ವೇಳಾಪಟ್ಟಿಯನ್ನು ಬದಲಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿದಿನ ಬಳಿಗ್ಗೆ 10.30ರಿಂದ 12ರವರೆಗೆ ಪರೀಕ್ಷೆ ನಡೆಯಲಿದೆ. ಮಾರ್ಚ್‌ 16ರಂದು ಪ್ರಥಮ ಭಾಷೆ, 17ರಂದು ದ್ವಿತೀಯ ಭಾಷೆ, 18ರಂದು ತೃತೀಯ ಭಾಷೆ, 19ರಂದು ಗಣಿತ, 20ರಂದು ವಿಜ್ಞಾನ ಹಾಗೂ 21ರಂದು ಸಮಾಜ ವಿಜ್ಞಾನ ಪರೀಕ್ಷೆ ಇದೆ. ದೈಹಿಕ ಶಿಕ್ಷಣ ಪರೀಕ್ಷೆ 23ರಂದು ಶಾಲಾ ಹಂತದಲ್ಲೇ ನಡೆಯಲಿದೆ.

ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆಯ ಮುಖ್ಯಸ್ಥರು 7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಕುರಿತು ಪ್ರತಿರೋಧ ವ್ಯಕ್ತಪಡಿಸಿರುವ ಕಾರಣ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತದೆ ಎಂಬ ವದಂತಿ ಈ ಮೊದಲು ಹಬ್ಬಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು