ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋಬಿಕ್ಸ್‌ ಥಳಕು–ಬಳುಕು

Last Updated 13 ಜನವರಿ 2019, 20:00 IST
ಅಕ್ಷರ ಗಾತ್ರ

‘ಫಿಟ್ ಆಂಡ್ ಫೈನ್’ ಇದೀಗ ಆರೋಗ್ಯ ವಿಚಾರದಲ್ಲಿ ಮುನ್ನಲೆಯಲ್ಲಿರುವ ಪದ. ಇದಕ್ಕೆ ಯುವಜನರಿಂದ ಹಿಡಿದು ಎಲ್ಲಾ ವಯೋಮಾನದವರು ಯೋಗ, ಜುಂಬಾ, ಜಿಮ್, ಈಜು, ಟ್ರಕ್ಕಿಂಗ್...ಹೀಗೆ ನಾನಾ ಕಸರತ್ತಿನಲ್ಲಿ ತೊಡಗಿ ದೇಹಕ್ಕೊಂದು ಸುಂದರ ಆಕಾರ ಕೊಟ್ಟು, ಫಿಟ್‌ ಆಗಿ, ಆಕರ್ಷಕವಾಗಿ ಕಾಣಲು ಹವಣಿಸುತ್ತಾರೆ. ಇಂತಹ ಫಿಟ್‌ನೆಸ್‌ ಎಂಬ ಜಗತ್ತಿನಲ್ಲಿ ಮನಕ್ಕೆ ಉಲ್ಲಾಸ ನೀಡುವ ಜೊತೆಗೆ ದೇಹವನ್ನು ಫಿಟ್‌ ಆಗಿ ಇಡುವಲ್ಲಿ ಏರೋಬಿಕ್ಸ್ ಪಾಲು ಬಲು ದೊಡ್ಡದು.

ಇದರಲ್ಲಿ ಹಾಡು, ಹೆಜ್ಜೆಗಳೇ ಪ್ರಧಾನ. ಕೇಳುವ ಹಾಡುಗಳಿಗೆ ದೇಹ, ಮನಸ್ಸುಗಳು ಪ್ರಯಾಸವಿಲ್ಲದೇ ಸಂತೋಷದಿಂದ ಹಾಕುವ ನೂರಾರು ಹೆಜ್ಜೆಗಳು ಸಾಥ್ ಕೊಟ್ಟರೆ ಅಲ್ಲೊಂದು ಉಲ್ಲಸಿತ, ಉತ್ಸಾಹದ ಸ್ವರ್ಗ ತೆರೆದುಕೊಳ್ಳುತ್ತದೆ ಅದುವೇ ಏರೋಬಿಕ್ಸ್. ಒಟ್ಟಿನಲ್ಲಿ ಇದೊಂದು ಲಯ, ತಾಳಬದ್ಧ ಕುಣಿತ. ಸಂಗೀತ, ಹೆಜ್ಜೆಗಳು ಇದರ ಜೀವಾಳ.

ಇತ್ತೀಚೆಗೆ ಎಲ್ಲಾ ವಯೋಮಾನದವರನ್ನು‌ ಸೆಳೆಯುತ್ತಿರುವ ಫಿಟ್‌ನೆಸ್‌ ಮಂತ್ರವಾದ ಏರೋಬಿಕ್ಸ್‌ನಲ್ಲಿ ವಯಸ್ಸಿನ ಹಂಗಿಲ್ಲದೇ (ನಿಯಮದ ಪ್ರಕಾರ 12ವರ್ಷ ಮೇಲ್ಪಟ್ಟವರು) ಪಾಲ್ಗೊಳ್ಳಬಹುದು. ಅಂದರೆ ಕುಣಿತದ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳ ಬಯಸುವವರೆಲ್ಲರೂ ಇದರ ಭಾಗವಾಗಿ ಖುಷಿ ಅನುಭವಿಸಬಹುದು. ದೇಹದ ಎಲ್ಲಾ ಭಾಗಗಳಿಗೆ ಸುಲಭವಾಗಿ ವ್ಯಾಯಾಮ ನೀಡುವ ಏರೋಬಿಕ್ಸ್ ನೃತ್ಯದಂತೆ ಕಂಡರೂ ಇದರಲ್ಲಿನ ಕಸರತ್ತುಗಳು ವಿಭಿನ್ನ.

ಆರೋಗ್ಯ ಸಮಸ್ಯೆಗಳು ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯ ದೇಹವನ್ನು ಬಾಧಿಸುತ್ತಲೇ ಇವೆ. ಇದನ್ನು ನಿಯಂತ್ರಿಸಲು ವ್ಯಾಯಾಮ ಬಹುಮುಖ್ಯ. ಆದರೆ ಕೆಲವರಿಗೆ, ವಾಕಿಂಗ್, ಓಟ, ವ್ಯಾಯಾಮವೆಂದರೆ ಅಯಾಸ. ಜೊತೆಗೆ ಸೋಮಾರಿತನದ ಅಡ್ಡಗಾಲು. ಇಂತಹವರು ಏರೋಬಿಕ್ಸ್‌ನಿಂದ ದೇಹದಲ್ಲಿನ ಕ್ಯಾಲೋರಿಯನ್ನು ಕರಗಿಸುವ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂಬುದು ವಿಜಯನಗರದ ಈಗಲ್ ಫಿಟ್‌ನೆಸ್‌ನ ಏರೋಬಿಕ್ಸ್ ತರಬೇತುದಾರ ಸಂತೋಷ್. ಎಸ್ ಅವರ ಸಲಹೆ.

ಸಂಗೀತದಿಂದ ಪ್ರಾರಂಭವಾಗಿ ಸಂಗೀತದಿಂದಲೇ ಮುಕ್ತಾಯವಾಗುವ ಏರೋಬಿಕ್ಸ್ ಮೊದಲು ಸಣ್ಣ ವ್ಯಾಯಾಮದ ಮೂಲಕ ಆರಂಭವಾಗುತ್ತದೆ. ಹಾಡಿನೊಳಗಿನ ತಾಳದಂತೆ ಹೆಜ್ಜೆಗಳನ್ನು ಹಾಕಲಾಗುತ್ತದೆ. ಕುಣಿಯುವವರಿಗೆ ಬೇಸರ ಮೂಡದಂತೆ ನಿಭಾಯಿಸುವುದು ಇದಕ್ಕೆ ಏದುರಾಗುವ ಸವಾಲು ಹೌದು.

ಏರೋಬಿಕ್ಸ್ ವಿಧಗಳು

ಇದರಲ್ಲಿ ಹೈ ಲೂ, ಸ್ಟೆಪ್ ಏರೋಬಿಕ್ಸ್, ಜುಂಬಾ, ಡ್ಯಾನ್ಸ್ ಏರೋಬಿಕ್ಸ್ ಎಂಬ ವಿಧಗಳಿವೆ. ಡಾನ್ಸ್ ಏರೋಬಿಕ್ಸ್‌ನಲ್ಲಿ ಹಾಡುಗಳು ಮುಖ್ಯವಾದರೆ, ಸ್ಟೆಪ್‌ ಏರೋಬಿಕ್ಸ್ ನಲ್ಲಿ ಹೆಜ್ಜೆಗಳು, ಎತ್ತರ ಮುಖ್ಯವಾಗುತ್ತದೆ. ಜುಂಬಾ ಇದು ಏರೋಬಿಕ್ಸ್‌ ಶೈಲಿ ಹಾಗೂ ನೃತ್ಯದ ಸಮ್ಮಿಳಿತ.

ಪ್ರಯೋಜನಗಳು

l ಮನಸು ಆಹ್ಲಾದಕರವಾಗಿಸುತ್ತದೆ.

l ದೇಹದ ಸದೃಢತೆ ಕಾಯ್ದುಕೊಳ್ಳಬಹುದು

l ಮಾಂಸಖಂಡಗಳಿಗೆ ಬಲ ತುಂಬುತ್ತದೆ

l ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು

l ತೂಕ ಇಳಿಸಲು ಸಹಾಯಕ

l ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ

l ದೇಹದಲ್ಲಿನ ಅನಾವಶ್ಯಕ ಕೊಬ್ಬು ನಿವಾರಿಸಬಹುದು

l ರೋಗ ನಿರೋಧಕ ಶಕ್ತಿ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT