ಗುರುವಾರ , ಅಕ್ಟೋಬರ್ 17, 2019
28 °C

ಉದ್ಯೋಗಶೀಲರಾಗಲು ಅನಿಮೇಷನ್‌, ಮಲ್ಟಿಮೀಡಿಯ ಕೋರ್ಸ್‌

Published:
Updated:

ಪ್ರಚಲಿತ ಉದ್ಯಮ ಕ್ಷೇತ್ರಗಳಲ್ಲಿ ಅನಿಮೇಷನ್ ತಂತ್ರಜ್ಞಾನವು ಹೆಚ್ಚು ಮುಂದುವರಿದಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶವನ್ನು ನೀಡುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಈ ತಂತ್ರಜ್ಞಾನವು ದೃಶ್ಯ ಮಾಧ್ಯಮದಲ್ಲಿ ಅನಿವಾರ್ಯವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಬೇಡಿಕೆ ಕೂಡ ಹೆಚ್ಚಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಈ ಕ್ಷೇತ್ರದಲ್ಲಿ ರೂಪಿಸಿಕೊಂಡು ಉತ್ತಮ ಉದ್ಯೋಗಾವಕಾಶವನ್ನು ಹೊಂದಬಹುದು.

ಮಲ್ಟಿಮೀಡಿಯ ಕೋರ್ಸ್‌

ಹಾಗೆಯೇ ಮಲ್ಟಿಮೀಡಿಯ ಕ್ಷೇತ್ರ ಕೂಡ. ಇದರಲ್ಲಿ ಉದ್ಯೋಗಗಳಿಗೆ ಬರವಿಲ್ಲ. ಆದರೆ, ಬಹುತೇಕ ವಿದ್ಯಾರ್ಥಿಗಳು ಮತ್ತು ಪಾಲಕರು ಸಾಂಪ್ರದಾಯಕ ಕೋರ್ಸ್‌ಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದು, ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿದ್ದರೂ ಸಾವಿರಾರು ಉದ್ಯೋಗಗಳು ಭರ್ತಿಯಾಗದೇ ಖಾಲಿ ಉಳಿಯುತ್ತಿವೆ.

ಹೀಗಾಗಿ ಮಲ್ಟಿಮೀಡಿಯ ಅಂಡ್ ಅನಿಮೇಷನ್, ಫಿಲಂ ಮೇಕಿಂಗ್‌ನಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ (ಉದ್ಯೋಗಾಧಾರಿತ) ಕೋರ್ಸ್‌ಗಳನ್ನು ಮಾಡಿಕೊಂಡ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು.

ಕ್ರಿಯಾತ್ಮಕ ಕಲ್ಪನೆಯೊಂದಿಗೆ ಹೊಸತನವನ್ನು ಪ್ರಸ್ತುತಪಡಿಸುವ ಸಾಮರ್ಥ್ಯ ಹೊಂದಿರುವ 15 ವರ್ಷದಿಂದ ಮೇಲ್ಪಟ್ಟು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಫೇಲಾಗಿರುವವರೂ ಕೂಡ ಪ್ರವೇಶ ಪಡೆಯಬಹುದು. ಅಲ್ಲದೇ, ಬಿ.ಇ., ಬಿ.ಕಾಂ. ಮತ್ತು ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಗಳು ಕೂಡ ತರಬೇತಿ ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು.

ಪಠ್ಯೇತರ ಚಟುವಟಿಕೆಗಳು

ಅನಿಮೇಷನ್ ಪಠ್ಯದ ಜತೆಗೆ ಕ್ಲೇ ಮಾಡಲಿಂಗ್, ಪೇಂಟಿಂಗ್, ಛಾಯಾಗ್ರಹಣ ಕಾರ್ಯಾಗಾರ, ಒಂದೇ ನಿಮಿಷದಲ್ಲಿ ರೇಖಾಚಿತ್ರ, ಮೂಲ ನಟನ ತರಗತಿಗಳು, ಹೊರಾಂಗಣ ರೇಖಾಚಿತ್ರ ಸಂವಹನ, ಟೀಂ ಬಿಲ್ಡಿಂಗ್‌ ಚಟುವಟಿಕೆ, ಟೈಂ ಮ್ಯಾನೇಜ್‌ಮೆಂಟ್, ಗೋಲ್ ಸೆಟ್ಟಿಂಗ್ ಚಟುವಟಿಕೆ, ಇಂಗ್ಲೀಷ್ ಭಾಷೆ ಕಲಿಕೆಗಳೊಂದಿಗೆ ಪ್ರಾಯೋಗಿಕ ತರಗತಿಗಳು ಕೂಡ ಇರುತ್ತವೆ. ಇದರಿಂದ ಶೇ 90 ರಷ್ಟು ಬಾಹ್ಯ ಕಲಿಕೆ ಹೆಚ್ಚಾಗುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.

ಯಾರು ಮಾಡಬಹುದು?

ಎಸ್‌ಎಸ್‌ಎಲ್‌ಸಿ/ಪಿ‌ಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳೂ ತಮ್ಮ ಮುಂದಿನ ಪ್ರಯತ್ನಗಳಲ್ಲಿ ಸಫಲತೆಯನ್ನು ಹೊಂದಿದ ಉದಾಹರಣೆಗಳಿವೆ. ಹಾಗಾಗಿ ಎಸ್‌ಎಸ್‌ಎಲ್‌ಸಿ/ಪಿ‌ಯುಸಿ ಅನುತ್ತೀರ್ಣರಾದವರು ನಿರಾಶೆ ಹೊಂದುವ ಅಗತ್ಯವಿಲ್ಲ. ಈ ಕ್ಷೇತ್ರವು ನಿಮ್ಮ ಕಲ್ಪನೆ, ಕ್ರಿಯಾತ್ಮಕ ಹಾಗೂ ಕಲಾತ್ಮಕ ಕೌಶಲವನ್ನು ಬಯಸುವುದರಿಂದ ಯಾರು ಬೇಕಾದರೂ ಕಲಿಯಬಹುದು.

**

ಕೆಲವು ಪಾಲಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಿರ್ಧರಿಸುವ ಒಂದು ಗೊಂದಲವಿರುತ್ತದೆ. ಕೆಲವು ಪಾಲಕರು ತಮ್ಮ ಅಪೂರ್ಣ ಸಾಧನೆಯ ಆಸೆಯನ್ನು ತಮ್ಮ ಮಕ್ಕಳಲ್ಲಿ ಕಾಣುವುದು ಸಹಜ. ಆದರೆ ತಮ್ಮ ಮಕ್ಕಳ ಆಸೆ ಏನು, ಅವರ ಗುರಿ ಏನು, ಅವರಲ್ಲಿ ಇರುವ ಸಾಮರ್ಥ್ಯದ ಅರಿವು ಏನು ಎಂಬುದನ್ನು ತಿಳಿಯದೆ ಯಾವುದೋ ಒಂದು ಸಾಂಪ್ರದಾಯಕ ಕಲಿಕೆಗೆ ಕಳಿಸುತ್ತಾರೆ. ಆದರೆ ಪ್ರಗತಿಯತ್ತ ದಾಪುಗಾಲು ಇಡುತ್ತಿರುವ ಅನಿಮೇಷನ್ ಕ್ಷೇತ್ರದಲ್ಲಿ ಪ್ರತಿಶತ ನೂರರಷ್ಟು ಯಶಸ್ಸು ಕಾಣುವುದು ಖಚಿತ.

 ರಘುವೀರ್‌ ನಾಯಕ್ ದಾಮಿ ನಿರ್ದೇಶಕರು, ಅನಿಫ್ರೇಮ್ಸ್‌- ಕಾಲೇಜ್ ಆಫ್ ಆರ್ಟ್ಸ್, ಅನಿಮೇಷನ್ ಅಂಡ್ ಮಲ್ಟಿಮೀಡಿಯ, ಮೈಸೂರು

Post Comments (+)