ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಕ್ಲಾಸ್‌ರೂಮ್‌

Last Updated 24 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಗೂಗಲ್ ಕ್ಲಾಸ್‌ರೂಮ್‌- ಇದು ಶಿಕ್ಷಕರಿಗೆ ನೆರವಾಗುವ ಆ್ಯಪ್‌. ಇದರ ಮೂಲಕ ಮಕ್ಕಳಿಗೆ ಅಸೈನ್‌ಮೆಂಟ್ ಹಾಗೂ ಪರೀಕ್ಷೆಯ ಗ್ರೇಡ್‌ಗಳನ್ನು ನೀಡಬಹುದು. ಅದರೊಂದಿಗೆ ಗೂಗಲ್ ಡ್ರೈವ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ಇಡಬಹುದು. ಜೊತೆಗೆ ಇದರ ಮೂಲಕ ವಿದ್ಯಾರ್ಥಿಗಳೊಂದಿಗೆ ಸುಲಭವಾಗಿ ಸಂಪರ್ಕ ಇರಿಸಿಕೊಳ್ಳಬಹುದು. ಇದರಲ್ಲಿ ಶಾಲೆ ಹಾಗೂ ಪಠ್ಯಕ್ಕೆ ಸಂಬಂಧಿಸಿದ ವೇಳಾಪಟ್ಟಿಗಳು ಹಾಗೂ ಚರ್ಚೆಗಳನ್ನು ಮಾಡಬಹುದಾಗಿದೆ. ಮಕ್ಕಳಲ್ಲಿ ಕ್ಲಾಸ್‌ರೂಮ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಇದರಲ್ಲಿ ಚರ್ಚೆ ಮಾಡಲು ಅವಕಾಶ ನೀಡಬಹುದು.

ರಿಮೈಂಡ್‌

ಇದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಮೂವರಿಗೂ ಸಂಬಂಧಿಸಿದ ಆ್ಯಪ್‌. ಇದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಶಾಲೆಯಲ್ಲಿ ಇಲ್ಲದ ವೇಳೆಯಲ್ಲೂ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂಪರ್ಕ ಇರಿಸಿಕೊಳ್ಳಬಹುದು. ಇದರಲ್ಲಿ ತರಗತಿಗೆ ಸಂಬಂಧಿಸಿದ ವಿಷಯಗಳು, ಗುಂಪು ಚರ್ಚೆ ಹಾಗೂ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ವೈಯಕ್ತಿಕವಾಗಿಯೂ ಸಂಪರ್ಕ ಮಾಡಬಹುದು. ಇದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಷಯಕ್ಕೆ ಫೈಲ್, ಚಿತ್ರ ಹಾಗೂ ಲಿಂಕ್‌ಗಳನ್ನು ಕಳುಹಿಸಬಹುದು. ಜೊತೆಗೆ ಇದರಲ್ಲಿ 90ಕ್ಕೂ ಅಧಿಕ ಭಾಷೆಗಳಿಗೆ ಅನುವಾದ ಮಾಡುವ ಅವಕಾಶವೂ ಇದೆ. ಇದರಿಂದ ಆಂಗ್ಲ ಭಾಷೆ ತಿಳಿಯದ ಪೋಷಕರೊಂದಿಗೂ ಶಿಕ್ಷಕರು ಸುಲಭವಾಗಿ ಸಂಪರ್ಕ ಸಾಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT