ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕನಸನ್ನು ಬೆಸೆಯುತ್ತಿರುವ ‘ಬೆಸುಗೆ’ ತಂಡ!

Last Updated 8 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬಣ್ಣಗಳಿಂದ ಕಂಗೊಳಿಸುತ್ತಿರುವ ಶಾಲೆಯ ಕಾಂಪೌಂಡ್‌, ತರಗತಿ ಒಳಗೆ ಮಕ್ಕಳಿಗೆ ಉಪಯುಕ್ತವಾಗುವ ಮಾಹಿತಿಗಳ ಬಣ್ಣದ ಚಿತ್ರಾಲಂಕಾರ, ಕೊಠಡಿಯ ಹೊರಗೆ ಹಕ್ಕಿಗಳ ಚಿತ್ರ... ಹೊರಗಿನಿಂದ ನೋಡಿದೊಡನೆಯೇ ಸೆಳೆಯುತ್ತದೆ ಈ ಸರ್ಕಾರಿ ಶಾಲೆ.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆನೇಕಲ್‌ ವ್ಯಾಪ್ತಿಯ ತಾಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆ. ಈ ಶಾಲೆಯ ಪರಿಸರದಲ್ಲಿ ಈ ಪರಿ ಬದಲಾವಣೆ ಬರಲು ಉದ್ಯಾನನಗರಿಯ ಸಮಾನ ಮನಸ್ಕರೇ ರಚಿಸಿಕೊಂಡಿರುವ ‘ಬೆಸುಗೆ’ ತಂಡ ಕಾರಣ.

ಕೆಲವೇ ದಿನಗಳಲ್ಲಿ ಶಾಲೆಯ ಚಹರೆಯನ್ನೇ ಈ ತಂಡ ಬದಲಾಯಿಸಿದೆ. ಮಾಸಿದ ಗೋಡೆ, ಕಿತ್ತು ಹೋದ ನೆಲದವರೆಗು ಎಲ್ಲವೂ ಬದಲಾಗಿದೆ. ಮಕ್ಕಳಿಗೆ ಉಪಯುಕ್ತವಾಗುವ ಮತ್ತು ಆಸಕ್ತಿಕರ ಮಾಹಿತಿಗಳನ್ನು ಗೋಡೆಗಳ ಮೇಲೆ ಮೂಡಿಸಲಾಗಿದೆ.

ಇವರು ಶೇಷಾದ್ರಿಪುರಂನ ‘ಕೆನ್‌ಕಲಾ ಶಾಲೆಯ’ 2000ನೇ ಸಾಲಿನ (ಕಲಾ ಆಧಾರಿತ ಕೋರ್ಸ್‌) ತಂಡದ ಸದಸ್ಯರು. ತಾವು ಕಲಿತ ಕಲೆಯ ಮೂಲಕವೇ ಮಕ್ಕಳಿಗೆ ಏನಾದರು ಸಹಾಯ ಮಾಡಬೇಕು ಎಂದು ಚಿಂತಿಸಿದ ಅವರು ‘ಬೆಸುಗೆ’ ತಂಡ ಕಟ್ಟಿಕೊಂಡರು.

ಈ ತಂಡದಲ್ಲಿ 12 ಜನರಿದ್ದು, ಬೆಂಗಳೂರಿನ ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲಾ ಮಕ್ಕಳ ಕನಸುಗಳನ್ನು ಬೆಸೆಯುವಲ್ಲಿ ಅವರು ನಿರತರಾಗಿದ್ದಾರೆ.

‘ನಮ್ಮ ತಂಡದಲ್ಲಿರುವವರೆಲ್ಲರೂ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಓದಿದವರು’ ಎನ್ನುತ್ತಾರೆತಂಡದ ಸದಸ್ಯರಾಗಿರುವ ಭರತ್‌ ಕುಮಾರ್.

ನಗರದಲ್ಲಿ ಅಷ್ಟೆಲ್ಲ ಶಾಲೆಗಳಿದ್ದರೂ ನಗರದಿಂದ ದೂರವಿರುವ ಸರ್ಕಾರಿ ಶಾಲೆಗಳನ್ನು ತಂಡ ಆಯ್ಕೆ ಮಾಡಿಕೊಂಡಿರುವುದೇಕೆ ಎನ್ನುವುದಕ್ಕೆ ತಂಡದ ಸದಸ್ಯರು ಉತ್ತರಿಸುವುದು ಹೀಗೆ, ‘ನಗರದೊಳಗಿನ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಎನ್‌ಜಿಒಗಳು ಕೆಲಸ ಮಾಡುತ್ತಿವೆ. ಆದರೆ ನಗರದಿಂದ ದೂರವಿರುವ ಮಕ್ಕಳಿಗೆ ಯಾವುದೇ ಕಾರ್ಯಾಗಾರ ಮಾಡುವ ಚಿಂತನೆ

ಸರ್ಕಾರಿ ಶಾಲಾ ಮಕ್ಕಳಿಗೆ ವಿಷಯ ಆಧಾರಿತ ಕಾರ್ಯಾಗಾರ ಆಯೋಜಿಸುವ ಚಿಂತನೆಯನ್ನು ಈ ತಂಡ ಮಾಡುತ್ತಿದೆ. ಶಾಲೆಯ ಶಿಕ್ಷಕರ ಆಸಕ್ತಿ ಮತ್ತು ಅನುಭವ ಆಧರಿಸಿ ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ಬೆಸುಗೆ ತಂಡದ ಸದಸ್ಯರು. ಮನರಂಜನೆ ಇಲ್ಲ. ಹೊಸ ಪ್ರಯತ್ನಗಳಿಂದ ಮಕ್ಕಳು ತಮ್ಮ ಶಾಲೆಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ’ ಎನ್ನುತ್ತಾರೆ.

ಶಾಲೆಯ ಕಟ್ಟಡ ದುರಸ್ತಿ ಪಡಿಸುವುದರ ಜೊತೆಗೆ ಶಾಲಾ ಮಕ್ಕಳಿಗೆ ಗುಣಮಟ್ಟದ ಬ್ಯಾಗ್‌ಗಳನ್ನೂ ಈ ತಂಡ ವಿತರಿಸಿದೆ.

‘ಶಾಲೆಯಲ್ಲಿ ಆಗಿರುವ ಬದಲಾವಣೆಗಳಿಂದ ಮಕ್ಕಳ ಕಲಿಕಾ ಆಸಕ್ತಿಯೂ ಹೆಚ್ಚಾಗಿದೆ. ಬಿಡುವಿನ ಸಮಯದಲ್ಲಿ ಮಕ್ಕಳು ಗೋಡೆಗಳ ಮೇಲಿರುವ ಬರಹಗಳನ್ನು ಓದಿಕೊಳ್ಳುತ್ತಿದ್ದಾರೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಶಾಲೆಯ ಶಿಕ್ಷಕ ವಿವೇಕ್‌.

ಕಾರ್ಯಾಗಾರ ಮಾಡುವ ಚಿಂತನೆ

ಸರ್ಕಾರಿ ಶಾಲಾ ಮಕ್ಕಳಿಗೆ ವಿಷಯ ಆಧಾರಿತ ಕಾರ್ಯಾಗಾರ ಆಯೋಜಿಸುವ ಚಿಂತನೆಯನ್ನು ಈ ತಂಡ ಮಾಡುತ್ತಿದೆ. ಶಾಲೆಯ ಶಿಕ್ಷಕರ ಆಸಕ್ತಿ ಮತ್ತು ಅನುಭವ ಆಧರಿಸಿ ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ಬೆಸುಗೆ ತಂಡದ ಸದಸ್ಯರು.

ಬೆಸುಗೆ ಸಂಪರ್ಕಕ್ಕೆ: ‌9845395554
ತಂಡದ ವೆಬ್‌ ಲಿಂಕ್: http://www.besugetrust.com/demo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT