ಗುರುವಾರ , ನವೆಂಬರ್ 21, 2019
20 °C

ಕ್ಯಾಟ್‌ ಪರೀಕ್ಷೆ 2019: ಅ.23ರಿಂದ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಿ

Published:
Updated:

ನವದೆಹಲಿ: ದೇಶದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳ (ಬಿ–ಸ್ಕೂಲ್‌) ಪ್ರವೇಶಕ್ಕಾಗಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್ 2019)ಯ ಪ್ರವೇಶ ಪತ್ರವನ್ನು ಇದೇ 23ರಂದು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಬರುವ ನವೆಂಬರ್ 24ರಂದು ಕ್ಯಾಟ್‌ ಪರೀಕ್ಷೆ ನಡೆಯಲಿದೆ. ದೇಶದ 140 ನಗರಗಳಲ್ಲಿನ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್

ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಕ್ಟೋಬರ್ 23 (ಬುಧವಾರ)ರಂದು ಸಂಜೆ 5 ಗಂಟೆಯಿಂದ ಪ್ರವೇಶ ಪತ್ರ (ಅಡ್ಮಿಟ್‌ ಕಾರ್ಡ್‌)ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. 

ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಐಐಎಂನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ. ಪರೀಕ್ಷಾರ್ಥಿಗಳು ಐಐಎಂ ವೆಬ್‌ಸೈಟ್‌ಗೆ ಲಾಗಿನ್‌ ಆದ ಬಳಿಕ ರಿಜಿಸ್ಟರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ನೀಡಿ ಪ್ರವೇಶ ಪತ್ರಗಳನ್ನು ಪಡೆಯಬಹುದು.

ಪರೀಕ್ಷೆ ದಿನಾಂಕ: 2019 ನವೆಂಬರ್‌ 24

ಐಐಎಂ ವೆಬ್‌ಸೈಟ್‌: https://iimcat.ac.in

ಇದನ್ನೂ ಓದಿ: ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ

ಪ್ರತಿಕ್ರಿಯಿಸಿ (+)