ಸಿಬಿಎಸ್‌ಇ ಹೊಸ ಕೋರ್ಸ್‌ಗಳು

ಸೋಮವಾರ, ಮೇ 27, 2019
29 °C

ಸಿಬಿಎಸ್‌ಇ ಹೊಸ ಕೋರ್ಸ್‌ಗಳು

Published:
Updated:

12ನೇ ತರಗತಿ ಅಥವಾ ಪಿಯುಸಿ ನಂತರ ಮುಂದೇನು ಓದುವುದು ಎಂಬುದರ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಮುಂದಿನ ಅಧ್ಯಯನಕ್ಕೆ ಸಾಕಷ್ಟು ವಿಭಾಗಗಳಿವೆ. ಅವುಗಳ ಜೊತೆಗೆ ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿ ಹೊಸ ಕೋರ್ಸ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.

ವಿವಿಧ ವಿಷಯಗಳ ಕಾಂಬಿನೇಶನ್‌, ಅವುಗಳಿರುವ ಕಾಲೇಜುಗಳು, ಅಗತ್ಯವಿರುವ ಅರ್ಹತೆಗಳ ಬಗ್ಗೆ ಮಾಹಿತಿ ನೀಡಿರುವ ಸಿಬಿಎಸ್‌ಇ, ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ದೇಶದಲ್ಲಿರುವ 900ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳು ಹಾಗೂ ಸುಮಾರು 41 ಸಾವಿರ ಕಾಲೇಜುಗಳಲ್ಲಿ ಪಟ್ಟಿಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಓದಬಹುದು. ಪಟ್ಟಿಯಲ್ಲಿ ಎಂಜಿನಿಯರಿಂಗ್‌, ಸಮೂಹ ಮಾಧ್ಯಮ ಭಾಷಾಶಾಸ್ತ್ರ, ಸಾರ್ವಜನಿಕ ಸಂಪರ್ಕ ಮೊದಲಾದ ಈಗಾಗಲೇ ಇರುವ ವಿಷಯಗಳ ಜೊತೆ ಕೆಲವು ಹೊಸ ವಿಷಯಗಳನ್ನೂ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ ಅವರು ತಮಗೆ ಬೇಕಾದ ಕೋರ್ಸ್‌ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರೇರೇಪಿಸುವುದು ಇದರ ಉದ್ದೇಶ. ಒಟ್ಟಿನಲ್ಲಿ ಈ ಪಟ್ಟಿ ಸಾಂಪ್ರದಾಯಕ, ಜನಪ್ರಿಯ ಹಾಗೂ ಹೊಸ ಕೋರ್ಸ್‌ಗಳ ಮಿಶ್ರಣವಾಗಿದೆ.

ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌, ಮಾಂಟೆಸ್ಸರಿ ಟೀಚಿಂಗ್‌, ಲಿಬರಲ್‌ ಸ್ಟಡೀಸ್‌, ಡಿಟೆಕ್ಟಿವ್‌, ಕಾರ್ಪೊರೇಟ್‌ ಇಂಟೆಲಿಜೆನ್ಸ್‌, ಆ್ಯಕ್ಚುರಿಯಲ್‌ ಸೈನ್ಸ್‌, ಮ್ಯೂಸಿಯೋಲಜಿ, ರೊಬೊಟಿಕ್ಸ್‌, ಸೈಬರ್‌ ಸೆಕ್ಯುರಿಟಿ ಮೊದಲಾದ ಕೋರ್ಸ್‌ಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು. ವಿವರಗಳಿಗೆ cbse.nic.in. ನಲ್ಲಿ ನೋಡಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !