ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು

Last Updated 15 ಏಪ್ರಿಲ್ 2019, 8:53 IST
ಅಕ್ಷರ ಗಾತ್ರ

ಮಂಗಳೂರು: ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಒಲಿವಿಟಾ ಅನ್ಸಿಲ್ಲಾ ಡಿಸೋಜವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.‌

ಖುಷಿಯಲ್ಲಿಯೇ ಪ್ರಜಾವಾಣಿ ಜೊತೆ ಮಾತನಾಡಿದ ಅವರು, ‘ಆಳ್ವಾಸ್ ಶಿಕ್ಷ ಸಂಸ್ಥೆ ಮತ್ತು ಸಂಸ್ಥೆಯ ಶಿಕ್ಷಕರು,ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ’ಎಂದರು.

596 ಅಂಕ ಗಳಿಸಲು ಶಿಕ್ಷಕರ ಮಾರ್ಗದರ್ಶನವೇಕಾರಣ. ಮುಂದೆಸಿಎ (ಚಾರ್ಟಡ್‌ ಅಕೌಂಟೆಂಟ್) ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕೆ ಸಿಪಿಟಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡುತ್ತಿದ್ದೇನೆ ಎಂದರು.

ಶ್ರಮವಹಿಸಿ ಓದುವುದು ಮತ್ತು ಅಂದಿನ ಪಾಠಗಳಿಗೆ ಅಂದೇ ಗಮನ ಕೊಟ್ಟು ಅರ್ಥ ಮಾಡಿಕೊಳ್ಳುವುದು ಮುಖ್ಯ. ರಜೆಯಲ್ಲಿಯೂ ನಾನು ಓದುತ್ತಿದ್ದೆ ಎಂದು ಓದಿನ ಬಗ್ಗೆ ಹೇಳಿಕೊಂಡರು. ಕೀ ಬೋರ್ಡ್ ನುಡಿಸುವುದು ಅವರ ಹವ್ಯಾಸ. ತಂದೆ ಒಲಿವರ್ ಉಬಾಲ್ಡ್ ಡಿಸೋಜ, ತಾಯಿ ಅನಿತ ಮರಿಯ ಡಿಸೋಜ ಮಗಳ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT