ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನ ಹಬ್ಬ ಐದು ವರ್ಷ ತಿಥಿ!

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‌ರಾಜಕಾರಣ ಎಂಬ ಮರಕ್ಕೆ ಜಾತಿ ಎನ್ನುವ ಬಳ್ಳಿ ಅಂಟಿಕೊಂಡಿದೆ. ಲಂಚವೇ ನೀರಾಗಿದೆ. ಆಸೆ, ಆಮಿಷ, ಮಾದಕ ಮದ್ಯಗಳೇ ಗೊಬ್ಬರವಾಗಿವೆ. ಒಂದು ದಿನದ ಹಬ್ಬಕ್ಕೆ ಐದು ವರ್ಷಗಳ ತಿಥಿ! ಬಾಳುವುದು ಯಾರೋ, ಬದುಕುವುದು ಯಾರೋ...

ಸ್ವಜಾತಿ ಪ್ರೇಮ, ಲಂಚಬಾಕತನ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ರಾಜಕೀಯ ವೈಷಮ್ಯಗಳು ದಿನೇ ದಿನೇ ಹೆಚ್ಚುತ್ತಿರುವುದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಕಂಡಂತಹ ಭಾರತಕ್ಕೆ ಕಪ್ಪುಚುಕ್ಕೆ. ಅಬ್ದುಲ್‌ ಕಲಾಂ ಕನಸು ಕಮರಿದೆ. ಕನ್ನಡಿಗರ ಏಕತೆ ಒಡೆದಿದೆ. ಕೋಮುದ್ವೇಷ ಹರಡಿದೆ.

ನಮ್ಮ ದುರದೃಷ್ಟ; ಇರುವ ಕಳ್ಳರಲ್ಲೇ ಉತ್ತಮರು ಯಾರು ಎಂಬುದನ್ನು ನಾವು ತೀರ್ಮಾನ ಮಾಡಬೇಕಾಗಿದೆ.

–ಬಾಬುರೆಡ್ಡಿ ಎನ್‌. ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT