ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಾತ್ಮಕ ಶಿಕ್ಷಣಕ್ಕೆ ‘ಡಿಐಯು’ ಪೂರಕ

Last Updated 14 ಡಿಸೆಂಬರ್ 2018, 15:52 IST
ಅಕ್ಷರ ಗಾತ್ರ

*ಯಾವ ವಯೋಮಾನದವರಿಗೆ ಈ ಕಾರ್ಯಕ್ರಮ?
ಇದು ಮಕ್ಕಳಿಗಾಗಿ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ. ಎಲ್ಲ ವರ್ಗದವರಿಗೂ ಇದರಿಂದ ಉಪಯೋಗವಾಗುತ್ತದೆ. ಸೃಜನಾತ್ಮಕ ಕಲೆಗಳಿಗೆ ಈ ಕಾರ್ಯಕ್ರಮದಲ್ಲಿ ನಾನು ಅನುಸರಿಸುವ ಕ್ರಮಗಳು ಹಾಗೂ ಆಲೋಚನೆಗಳು ಕ್ಲಿಷ್ಟವಾಗಿರುವುದಿಲ್ಲ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತವೆ. ನಾನು ಹೇಳಿಕೊಡುವ ಟೆಕ್ನಿಕ್‌ಗಳನ್ನು ಅವರು ಅಷ್ಟೇ ಸುಲಭವಾಗಿ ಅನುಸರಿಸಿ ಕಲಾಕೃತಿಗಳನ್ನು ಮಾಡುತ್ತಾರೆ.

ಆ ಟೆಕ್ನಿಕ್‌ಗಳನ್ನೇ ದೊಡ್ಡವರೂ ಬಳಸಿ, ಬೇರೆ ಬೇರೆ ಕಾಂಪ್ಲೆಕ್ಸ್ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಆದರೆ, ಯುವಕರಿಗೆದೃಢವಾದ ಸೃಜನಾತ್ಮಕ ಅಡಿಪಾಯ ಕಟ್ಟಿಕೊಡಲು ಹಾಗೂ ಅವರ ಕಲ್ಪನಾ ಮಿತಿಯನ್ನು ವಿಸ್ತರಿಸಲು ಅವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿದ್ದೇನೆ.

* ‘ಡಿಐಯು’ ಕಾರ್ಯಕ್ರಮದಿಂದ ಏನು ಉಪಯೋಗ ?
‘ಡಿಐಯು’ ಕಾರ್ಯಕ್ರಮವು ನಮ್ಮನ್ನು ನಾವು ಸೃಜನಾತ್ಮಕವಾಗಿ ತೆರೆದುಕೊಳ್ಳಲು ಸಹಾಯಕವಾಗಿದೆ. ಎಲ್ಲ ವಯೋಮಾನದವರಿಗೆ ಈ ಕಾರ್ಯಕ್ರಮ ಒಂದಲ್ಲ ಒಂದು ರೀತಿಯಲ್ಲಿ ನೆರವಿಗೆ ಬರುತ್ತದೆ. ಆತ್ಮವಿಶ್ವಾಸ ತುಂಬುತ್ತದೆ. ಸೃಜನಾತ್ಮಕವಾದದ್ದನ್ನು ಮಾಡಿದಖುಷಿಯ ಜೊತೆಗೆ ಹೆಮ್ಮೆ ಆಗುತ್ತದೆ.

*ಮಕ್ಕಳನ್ನು ಟಿ.ವಿಯಿಂದ ದೂರವಿಡಲು ‘ಡಿಐಯು’ ಅನುಕೂಲ ಎನ್ನುತ್ತೀರಿ. ‘ಡಿಐಯು’ ನೋಡಲು ಟಿ.ವಿ ಬೇಕಲ್ಲವೇ?
ಮಕ್ಕಳನ್ನು ಆದಷ್ಟು ಮಟ್ಟಿಗೆ ಟಿ.ವಿಯಿಂದ ದೂರವಿಡುವುದು ಒಳ್ಳೆಯದು. ಹಾಗಂತ ಅವರನ್ನು ಟಿ.ವಿಯಿಂದ ಸಂಪೂರ್ಣವಾಗಿ ದೂರು ಮಾಡುವುದು ತಪ್ಪು. ಟಿ.ವಿ ನೋಡಿ ಕಲಿಯುವುದು ಸಾಕಷ್ಟಿದೆ. ಅದರಿಂದಲೂ ಸಾಕಷ್ಟು ಸೃಜನಾತ್ಮಕ ವಿಚಾರಗಳನ್ನು ಕಲಿಯಬಹುದು. ಡಿಐಯು ಕಾರ್ಯಕ್ರಮ ನೋಡಿ ಕಲಿತದ್ದನ್ನು ಮನೆಗಳಲ್ಲಿ ಪದೇ ಪದೇ ಪ್ರಯೋಗ ಮಾಡುತ್ತಿದ್ದರೆ ಟಿ.ವಿಗಳಿಂದ ಅಂತರ ಕಾಯ್ದುಕೊಳ್ಳಬಹುದು ಎಂದಷ್ಟೇ ಹೇಳಬಲ್ಲೆ.

* ಸೃಜನಾತ್ಮಕ ಶಿಕ್ಷಣದ ಕೊರತೆ ಇದೆಯೇ?
ಇಂದಿನ ಕಾಲದಲ್ಲಿ ಸೃಜನಾತ್ಮಕ ಶಿಕ್ಷಣ ತುಂಬಾ ಅನಿವಾರ್ಯ. ದುರಂತವೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಅದರ ಕೊರತೆ ಎದ್ದು ಕಾಣುತ್ತಿದೆ. ಸೃಜನಾತ್ಮಕ ಆಲೋಚನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಇಂದಿನ ಸ್ಪರ್ಧಾಯುಗದಲ್ಲಿ ಮಕ್ಕಳ ಮೇಲೆ ಅದು ಪರಿಣಮ ಬೀರುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಕ್ಕಳನ್ನು ಶಾಲಾ ಶಿಕ್ಷಕರು ಹೆಚ್ಚು ಪ್ರೋತ್ಸಾಹಿಸಬೇಕು.

* ಮಕ್ಕಳು ನಿಜಕ್ಕೂ‘ಡಿಐಯು’ ಪಾಲಿಸುತ್ತಾರೆಯೇ?
ಖಂಡಿತ ಪಾಲಿಸುತ್ತಾರೆ. ನನ್ನ ಕಾರ್ಯಕ್ರಮ ನೋಡಿ ಮನೆಗಳಲ್ಲಿ ಪ್ರಯೋಗ ಮಾಡುವ ಸಾಕಷ್ಟು ಮಕ್ಕಳನ್ನು ನಾನೇ ನೋಡಿದ್ದೇನೆ. ಅವರನ್ನು ಖುದ್ದಾಗಿ ಭೇಟಿಯಾಗಿ ಮಾತನಾಡಿಸಿದ್ದೇನೆ. ನಾನು ಹೇಳಿಕೊಟ್ಟದ್ದನ್ನು ಅಚ್ಚುಕಟ್ಟಾಗಿ ಅನುಸರಿಸುವ ಮಕ್ಕಳನ್ನು ನೋಡಿ ಆನಂದಿಸುವುದೇ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು. ಸೃಜನಾತ್ಮಕ ಶಿಕ್ಷಣಕ್ಕೆ ‘ಡಿಐಯು’ ಪೂರಕವಾಗಿದೆ.

* ‘ಡಿಐಯು’ ಬಗ್ಗೆ ಪುಸ್ತಕವೇನಾದರೂ ಬರೆಯುವ ಆಲೋಚನೆ ಇದಿಯೇ?
ಸದ್ಯಕ್ಕಂತೂ ಅಂತಹ ಯಾವುದೇ ಆಲೋಚನೆಗಳಿಲ್ಲ. ಏಕೆಂದರೆ, ನಾನೀಗ ಬಿಡುವಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪುಸ್ತಕ ಹೊರತರುವ ಆಲೋಚನೆಯಂತೂ ಖಂಡಿತ ಇದೆ.

*ಬೇರೆ ಯಾವೆಲ್ಲ ಕೆಲಸಗಳಲ್ಲಿ ತೊಡಗಿಕೊಂಡಿದ್ದೀರಿ?
ಡಿಐಯು ಹೊರತಾಗಿ ಎರಡು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದೇನೆ. ‘ಮ್ಯಾಡ್ ಸ್ಟಫ್ ವಿಥ್ ರಾಬ್’ ಮತ್ತು ‘ರಾಬ್ ಇನ್ ದ ವುಡ್’ ಅವುಗಳ ಹೆಸರು. ಡಿಐಯು ವಿಡಿಯೊಗಳನ್ನೂ ಯುಟ್ಯೂಬ್‌ನಲ್ಲಿ ಪ್ರತಿವಾರ ತಪ್ಪದೇ ಅಪ್‌ಲೋಡ್ ಮಾಡುತ್ತೇನೆ.ಅನೇಕ ಕಾರ್ಯಾಗಾರಗಳನ್ನು ನಡೆಸಿಕೊಡುತ್ತೇನೆ. ಸದ್ಯ, ‘ಇಮ್ಯಾಜಿನೇರಿಯಮ್’ ಎಂಬ ನೇರ ಕಲಾ ಪ್ರದರ್ಶನದ ಕಾರ್ಯಕ್ರಮ ಮಾಡುತ್ತಿದ್ದೇನೆ.

* ‘ಇಮ್ಯಾಜಿನೆರಿಯಮ್’ ಅಂದರೇನು ಅದರಿಂದ ಅನುಕೂಲವೇನು?
‘ಇಮ್ಯಾಜಿನೆರಿಯಮ್’ ನನ್ನ ಕನಸು. ಆ ಕನಸು ಈಗ ನನಸಾಗಿದೆ. ಇದೊಂದು ದೃಶ್ಯ ಕಲಾಪ್ರದರ್ಶನ ಹಾಗೂ ಸಂವಾದದ ಕಾರ್ಯಕ್ರಮ. ಕಾರ್ಯಕ್ರಮವನ್ನು ಸಂತಸದಿಂದ ವೀಕ್ಷಿಸುವುದರ ಜೊತೆಗೆ ವೀಕ್ಷಕರೂ ಸಹ ವೇದಿಕೆಗೆ ಬಂದು ವಿವಿಧ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಬಹುದು.

‘ಡಿಐಯು’ ಹಾಗೂ ದೃಶ್ಯ ಪ್ರದರ್ಶನದ ಮಿಶ್ರಣ ಹೂರಣ ಈ ಕಾರ್ಯಕ್ರಮ. ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸುವುದರ ಜೊತೆಗೆ ನನ್ನೊಂದಿಗೆ ನೇರವಾಗಿ ಸಂವಾದ ನಡೆಸಲು ಅವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ನೈಜವಾದದ್ದನ್ನು ನೇರವಾಗಿ ನೋಡಿ ಅನುಭವಿಸುವ ಅವಕಾಶವೂ ಸಿಗುತ್ತದೆ. ಇಂತಹ ಅನುಭವ ಅವರಿಗೆ ನಿತ್ಯವೂ ಸಿಗದು. ಇದರಿಂದ ಮಕ್ಕಳು ಕಡಿಮೆ ಬಳಕೆ, ಪುನರ್ಬಳಕೆ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳುತ್ತಾರೆ.

* ಪೋಷಕರಿಗೆ ಏನು ಹೇಳಬಯಸುತ್ತೀರಿ?
ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಸೃಜನಶೀಲತೆಯ ವಾತಾವರಣ ಕಲ್ಪಿಸಿಕೊಡುವುದು ಬಹುಮುಖ್ಯವಾದದ್ದು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪೂರಕವಾದ ವಾತಾವರಣ ಸೃಷ್ಟಿಸಬೇಕು.ಆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅವರ ಮೈಗೂಡಿಸಿಕೊಂಡ ಸೃಜನಶೀಲತೆಯೇ ಮುಂದೊಂದು ದಿನ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಪರಿಹಾರವಾಗಬಹುದು.

* ಬೆಂಗಳೂರಿನ ಬಗ್ಗೆ ಏನಂತೀರಾ...
ಬೆಂಗಳೂರನ್ನು ನಾನು ತುಂಬಾ ಪ್ರೀತಿಸುತ್ತೇನೆ. ಇದು ಅತ್ಯದ್ಭುತ ನಗರ. ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿನ ವಾತಾವರಣ ಆಹ್ಲಾದಕರವಾಗಿದೆ. ಇಲ್ಲಿನ ಜನರ ಆತ್ಮೀಯತೆಯೂ ಮೆಚ್ಚುವಂತಹದ್ದು. ಈ ನಗರದಿಂದ ಸಾಕಷ್ಟು ಪ್ರೀತಿ ಪಡೆದಿದ್ದೇನೆ. ನನ್ನ ಕನಸಿನ ಕಾರ್ಯಕ್ರಮವನ್ನು ಇಲ್ಲಿ ನೀಡಲು ಕಾತುರನಾಗಿದ್ದೇನೆ.

ಅರುಣ್ ರಾಬರ್ಟ್
ಅರುಣ್ ರಾಬರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT