ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಮುಚ್ಚಿವೆ 179 ವೃತ್ತಿಪರ ಕಾಲೇಜುಗಳು

ಕಳೆದ 9 ವರ್ಷಗಳಲ್ಲಿಯೇ ಗರಿಷ್ಠ: ಎಐಸಿಟಿಇ
Last Updated 28 ಜುಲೈ 2020, 11:48 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಬೋಧಿಸುವ179 ಕಾಲೇಜುಗಳು 2020–21ರಸಾಲಿನ ಶೈಕ್ಷಣಿಕ ವರ್ಷದಿಂದ ಮುಚ್ಚಿವೆ.

ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದುಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ತಿಳಿಸಿದೆ.

179 ಸಂಸ್ಥೆಗಳಲ್ಲಿ ಕನಿಷ್ಠ 134 ಕಾಲೇಜುಗಳಲ್ಲಿ ಕೆಲವೇ ಮಂದಿ ಪ್ರವೇಶ ಬಯಸಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಅತಿ ಹೆಚ್ಚು ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಅಲ್ಲದೆ, ಕನಿಷ್ಠ 44 ಕಾಲೇಜುಗಳು ನಿಯಾಮಾವಳಿ ಮತ್ತು ದಂಡನಾ ಕ್ರಮಗಳಿಂದಾಗಿ ಪ್ರವೇಶಾತಿ ಪ್ರಕ್ರಿಯೆಯಿಂದ ದೂರ ಸರಿದಿವೆ. ಇದಲ್ಲದೇ, 92 ತಾಂತ್ರಿಕ ಸಂಸ್ಥೆಗಳು 2019–20ರ ಅವಧಿಯಲ್ಲಿ ಸಂಪೂರ್ಣ ಮುಚ್ಚಿವೆ.

ಹೊಸ ಪ್ರವೇಶಾತಿಗಳು ನಡೆಯುತ್ತಿಲ್ಲ. ಈಗಾಗಲೇ ಪ್ರವೇಶ ಪಡೆದು ದ್ವಿತೀಯ ಮತ್ತು ತೃತೀಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕೋರ್ಸ್‌ಗಳಿಗೆ ಯಾವುದೇ ಅಡ್ಡಿಯಾಗದು. ವಿವಿಧ ಕಾರಣಗಳಿಗಾಗಿ 2020–21ರ ಅವಧಿಯಲ್ಲಿ ವಿವಿಧ ಕೋರ್ಸ್‌ಗಳ ಸೀಟುಗಳನ್ನು 1.09 ಲಕ್ಷಕ್ಕೆ ಇಳಿಸಲಾಗಿದೆ ಎಂದು ಎಐಸಿಟಿಇ ಹೇಳಿದೆ.

ಅಂಕಿ ಅಂಶ

164 – 2020–21ರ ಅವಧಿಯಲ್ಲಿ ಅನುಮೋದನೆ ಪಡೆದ ಹೊಸ ಕಾಲೇಜುಗಳು

39,000 – ಹೊಸ ಕಾಲೇಜುಗಳಲ್ಲಿನ ಲಭ್ಯ ಸೀಟ್‌ಗಳು

69,000 – 762 ಕಾಲೇಜುಗಳಲ್ಲಿ ಲಭ್ಯ ಇರುವ ಸೀಟ್‌ಗಳು

ಶೈಕ್ಷಣಿಕ ವರ್ಷ;ಮುಚ್ಚಿದ ಕಾಲೇಜುಗಳು

2019-20 – 92

2018-19 – 89

2017–18 – 134

2016–17 – 163

2015–16 – 126

2014–15 – 77

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT