ಯುವತಿಯರ ನೆರವಿಗೆ ‘ಚಾಣಕ್ಯ’..!

7
ಮಹಿಳಾ ಕಾನ್‌ಸ್ಟೆಬಲ್‌, ಪಿಎಸ್‌ಐ ಹುದ್ದೆ ಆಕಾಂಕ್ಷಿಗಳಿಗೆ 7 ವರ್ಷಗಳಿಂದ ಉಚಿತ ತರಬೇತಿ

ಯುವತಿಯರ ನೆರವಿಗೆ ‘ಚಾಣಕ್ಯ’..!

Published:
Updated:
Deccan Herald

ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಪರೀಕ್ಷೆ ತೆಗೆದುಕೊಳ್ಳುವ ಯುವತಿಯರಿಗೆ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಉಚಿತ ತರಬೇತಿಯನ್ನು ನೀಡುತ್ತಿದೆ. ಇಲ್ಲಿ ತರಬೇತಿ ಪಡೆಯುವ ಎಲ್ಲಾ ವರ್ಗದ ಯುವತಿಯರಿಗೂ ಕೋಚಿಂಗ್‌ಗೆ ಉಚಿತ ಪ್ರವೇಶವಿದೆ. ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ.

ಮೊದಲೆಲ್ಲಾ ಯುವತಿಯರು ಪೊಲೀಸ್ ಇಲಾಖೆಯಲ್ಲಿನ ತಳಹಂತದ ಹುದ್ದೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದರು. ಆ ಕಾರಣಕ್ಕಾಗಿ ಅಕಾಡೆಮಿ ಉಚಿತ ತರಬೇತಿ ನೀಡುತ್ತಿದ್ದು, ತನ್ನ ಯತ್ನದಲ್ಲಿ ಯಶಸ್ವಿ ಆಗಿದೆ. 

‘ಏಳು ವರ್ಷಗಳ ಅವಧಿಯಲ್ಲಿ ಎರಡರಿಂದ ಮೂರು ಸಾವಿರ ಯುವತಿಯರಿಗೆ ತರಬೇತಿ ನೀಡಲಾಗಿದೆ. ಅವರ ಪೈಕಿ ಶೇ 10ಕ್ಕೂ ಹೆಚ್ಚು ಮಂದಿ ನೌಕರಿ ಗಿಟ್ಟಿಸಿದ್ದಾರೆ. ಸದ್ಯ 40 ಯುವತಿಯರು ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕದವರೇ ಹೆಚ್ಚಿದ್ದಾರೆ’ ಎನ್ನುತ್ತಾರೆ, ಅಕಾಡೆಮಿಯ ಸಂಸ್ಥಾಪಕ ಎನ್‌.ಎಂ. ಬಿರಾದಾರ.

ನೌಕರಿ ಸಿಕ್ತು

‘ಸರ್ಕಾರಿ ನೌಕರಿ ಗಿಟ್ಟಿಸಲೇಬೇಕು ಎಂಬ ಕನಸು ಕಂಡಾಕೆ ನಾನು. ಇದಕ್ಕಾಗಿ ಮಹಿಳಾ ಕಾನ್‌ಸ್ಟೆಬಲ್‌ ಹುದ್ದೆಗೆ ಮಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದೆ. ಆದರೆ ಕೆಲಸ ಸಿಗಲಿಲ್ಲ. ಊರ ಹಿರಿಯರೊಬ್ಬರ ಸಲಹೆಯಂತೆ, ಎರಡು ತಿಂಗಳು ಕೋಚಿಂಗ್‌ ಪಡೆಯಲಿಕ್ಕಾಗಿ ಚಾಣಕ್ಯ ಅಕಾಡೆಮಿ ಸೇರಿದೆ. ಅಲ್ಲಿಗೆ ಹೋದಾಗಲೇ ಯುವತಿಯರಿಗೆ ಉಚಿತ ತರಬೇತಿ ಕೊಡುತ್ತಾರೆ ಎಂಬುದು ಗೊತ್ತಾಗಿದ್ದು. ಪರೀಕ್ಷೆ ತಯಾರಿ ಹೇಗೆ ಎಂಬುದನ್ನು ಕಲಿಸಿಕೊಟ್ಟರು. ಅದರಿಂದ ಅನುಕೂಲ ಆಯಿತು. ನಾನೀಗ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್‌’ ಎಂದು ಮುಧೋಳ ತಾಲ್ಲೂಕಿನ ಜುನ್ನೂರಿನ ರಾಧಾ ದುರ್ಗನ್ನವರ ಹೇಳುವಾಗ ಮುಖದಲ್ಲಿ ಸಂತಸದ ನಗು.

ಸಂಪರ್ಕಕ್ಕೆ: 08352 222197, 08352 240197

*
ನನ್ನ ಕನಸು ಪಿಎಸ್‌ಐ ಹುದ್ದೆಯತ್ತ ನೆಟ್ಟಿದೆ. ನೌಕರಿ ನಿರ್ವಹಿಸುವ ಜತೆಗೆ, ಗುರಿಯತ್ತ ಸಾಗುವೆ. ಇದಕ್ಕಾಗಿ ಈಗಾಗಲೇ ತರಬೇತಿ ಪಡೆದಿದ್ದೇನೆ.
-ರಾಧಾ ದುರ್ಗನ್ನವರ, ಚಾಣಕ್ಯ ಕರಿಯರ್‌ ಅಕಾಡೆಮಿ ವಿದ್ಯಾರ್ಥಿ

*
ಕುಟುಂಬಕ್ಕೆ ಆರ್ಥಿಕ ಹೊರೆಯಾಗಲಿದೆ ಎಂದು ಹೆಣ್ಣುಮಕ್ಕಳನ್ನು ಕೋಚಿಂಗ್‌ಗೆ ಕಳುಹಿಸಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಇದರಿಂದ ಉಚಿತ ತರಬೇತಿ ನೀಡುತ್ತಿದ್ದೇವೆ.
-ಎನ್‌.ಎಂ.ಬಿರಾದಾರ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !