ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಕಥನ

Last Updated 8 ಜನವರಿ 2019, 19:45 IST
ಅಕ್ಷರ ಗಾತ್ರ

ಇತಿಹಾಸವನ್ನು ತಿಳಿಯದಿದ್ದರೆ ನಾವು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಾಗದು – ಎಂಬ ಮಾತಿದೆ. ಇತಿಹಾಸ ಎಂದರೆ ನೆನ್ನೆಯ ಕಥೆ; ನೆನ್ನೆ ಹೀಗಿತ್ತು – ಎಂದು ತಿಳಿದುಕೊಳ್ಳುವ ವಿವರ.

ಈ ವಿವರಗಳನ್ನು ತಿಳಿದುಕೊಳ್ಳುವುದಾದರೂ ಹೇಗೆ?

ಆಗಿಹೋದ ಕಾಲಕ್ಕೆ ಸೇರಿದ ವಸ್ತುಗಳಿಂದ ‘ನೆನ್ನೆ’ ಏನಾಗಿತ್ತು ಎಂದು ನಾವು ‘ಇಂದು’ ತಿಳಿದುಕೊಳ್ಳಬೇಕಿದೆ. ಈ ವಸ್ತುಗಳು ಕೂಡ ವೈವಿಧ್ಯಮಯವಾಗಿರುತ್ತವೆ. ಪ್ರಾಚೀನ ನಾಣ್ಯಗಳು, ಶಾಸನಗಳು, ಪುಸ್ತಕಗಳು, ಸಮಾಧಿಗಳು, ಪಾತ್ರೆಗಳು, ಶಿಲ್ಪಗಳು – ಹೀಗೆ ಹಲವು ರೀತಿಯ ವಸ್ತುಗಳು ಇತಿಹಾಸದ ರಹಸ್ಯವನ್ನು ಬಯಲು ಮಾಡುತ್ತವೆ. ಪ್ರಪಂಚದ ಇತಿಹಾಸವನ್ನು 100 ವಸ್ತುಗಳ ಮೂಲಕ ವಿವರಿಸುವ ಪುಸ್ತಕವೇ ‘ಎ ಹಿಸ್ಟರಿ ಆಫ್‌ ದಿ ವರ್ಲ್ಡ್ ಇನ್‌ 100 ಅಬ್ಜೆಕ್ಟ್ಸ್‌’. ಇದರ ಲೇಖಕರು ನೀಲ್‌ ಮ್ಯಾಕ್‌ಗ್ರೆಗರ್‌. ಮಾನವನ ಇತಿಹಾಸವನ್ನು ತಿಳಿಯಲು ನೆರವಾಗುವ 100 ವಸ್ತುಗಳ ಮೂಲಕ ಅವರು ಪ್ರಪಂಚ ಇತಿಹಾಸಕಥನವನ್ನು ಮಾಡಿದ್ದಾರೆ. ಮನುಷ್ಯನು ಮಾಡಿರುವ ಸಾಧನಗಳಲ್ಲಿ ಇದುವರೆಗೂ ದೊರೆತಿರುವುದರಲ್ಲಿ ಅತ್ಯಂತ ಪ್ರಾಚೀನವಾದುದೆಂದರೆ ಕಲ್ಲಿನ ಆಯುಧವಾದ ‘ಕೊಡಲಿ’.

ತಾನ್ಸೇನಿಯಾದಲ್ಲಿ ದೊರೆತ ಈ ಕೊಡಲಿಯ ನಿರ್ಮಾಣಕಾಲ ಸುಮಾರು 10 ಲಕ್ಷ ವರ್ಷಗಳಿಗೂ ಹಿಂದೆ ಎಂದು ಊಹಿಸಲಾಗಿದೆ. ಈ ಪುಸ್ತಕದಲ್ಲಿ ಇಂಥ ಹಲವು ಸಾಮಗ್ರಿಗಳ ಕುತೂಹಲಕಾರಿಯಾದ ಚರಿತ್ರೆಯಿದೆ; ಅದರ ಜೊತೆಗೆ ಮಾನವನ ವಿಕಾಸಪಥದ ಇತಿಹಾಸವೂ ತಿಳಿಯುತ್ತಹೋಗುತ್ತದೆ. ಪ್ರಪಂಚದ ಇತಿಹಾಸದ ಮೈಲುಗಲ್ಲುಗಳಲ್ಲಿ ಭಾರತೀಯ ಇತಿಹಾಸದ ಹೆಜ್ಜೆಗಳೂ ಸಾಕಷ್ಟಿವೆ. ಅಶೋಕಸ್ತಂಭ, ಗಾಂಧಾರ ಬುದ್ಧನ ಪ್ರತಿಮೆ, ಶಿವ–ಪಾರ್ವತಿಯ ಶಿಲ್ಪ – ಇವು ಮಾನವನ ಇತಿಹಾಸದಲ್ಲಿ ಮೂಡಿಸಿರುವ ನೆಲೆಗಳ ಬಗ್ಗೆ ಮಾಹಿತಿಯಿದೆ. ಇತಿಹಾಸದಲ್ಲಿಯೂ ಮಾನವನ ವಿಕಾಸದ ಚರಿತ್ರೆಯಲ್ಲೂ ಆಸಕ್ತಿ ಇರುವ ಎಲ್ಲರಿಗೂ ಪ್ರಿಯವಾಗಬಲ್ಲ ಕೃತಿಯೆಂದರೆ ‘ಎ ಹಿಸ್ಟರಿ ಆಫ್‌ ದಿ ವರ್ಲ್ಡ್ ಇನ್‌ 100 ಅಬ್ಜೆಕ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT