ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ: ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ

7

ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ: ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ

Published:
Updated:

ಬಸವನಬಾಗೇವಾಡಿ: ತಾಲ್ಲೂಕಿನ ಗ್ರಾಮೀಣ ವಿದ್ಯಾರ್ಥಿಗಳು ಪಿಯುಸಿ ನಂತರ ಪದವಿ ವ್ಯಾಸಂಗ ಅರಸಿ ವಿಜಯಪುರ, ಧಾರವಾಡ, ಬೆಳಗಾವಿಗೆ ಹೋಗುತ್ತಿದ್ದ ಕಾಲವೊಂದಿತ್ತು. ಬಿಎಲ್‌ಡಿಇ ಸಂಸ್ಥೆ ಪಟ್ಟಣದಲ್ಲಿ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವನ್ನು ಆರಂಭಿಸಿದ ಬಳಿಕ, ಇದು ಗ್ರಾಮೀಣರ ಪಾಲಿನ ಆಶಾಕಿರಣವಾಗಿದೆ. ಓದಬೇಕು ಎಂಬ ಕನಸುಳ್ಳವರಿಗೆ ಆಸರೆಯಾಗಿದೆ. ವಿದ್ಯೆ ನೀಡಿದೆ. ಉದ್ಯೋಗವನ್ನೂ ಕೊಡಿಸಿದೆ.

ವಿಜಯಪುರದಲ್ಲಿ 1906ರಲ್ಲಿ ಫ.ಗು.ಹಳಕಟ್ಟಿ ಬಿಎಲ್‌ಡಿಇ ಸಂಸ್ಥೆ ಸ್ಥಾಪಿಸಿದರು. ಬಂಥನಾಳದ ಶಿವಯೋಗಿಗಳು ಅವಿಭಜಿತ ಜಿಲ್ಲೆಯಲ್ಲಿ ಇದರ ಬೆಳವಣಿಗೆಗೆ ಶ್ರಮಿಸಿದರು. ರಾಜಕೀಯ ಮುತ್ಸದ್ಧಿಯಾಗಿದ್ದ ಬಿ.ಎಂ.ಪಾಟೀಲ ಇತರರ ಪರಿಶ್ರಮದಿಂದ ಮತ್ತಷ್ಟು ಬೆಳವಣಿಗೆ ಹೊಂದಿರುವ ಈ ಸಂಸ್ಥೆ, ಇದೀಗ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

1982ರಲ್ಲಿ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜ್ಞಾನಯೋಗಾಶ್ರಮದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ ಅಮೃತ ಹಸ್ತದಿಂದ ಆರಂಭವಾದ ಪದವಿ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಹೊಂದಿದೆ. 1994ರಲ್ಲಿ ವಿಜಯಪುರ ರಸ್ತೆಯಲ್ಲಿ 16 ಎಕರೆ ಜಾಗದಲ್ಲಿದ್ದ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕನುಗುಣವಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಯುಜಿಸಿ ಸಹಯೋಗದಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಮ್‌ ವ್ಯವಸ್ಥೆ ಇದೆ. 60ಕ್ಕೂ ಹೆಚ್ಚು ಕಂಪ್ಯೂಟರ್‌ ಹೊಂದಿದ ಕೊಠಡಿ, ಪಠ್ಯ ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಹಾಗೂ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 25 ಸಾವಿರಕ್ಕೂ ಹೆಚ್ಚು ಪುಸ್ತಕ ಭಂಡಾರ ಹೊಂದಿದ ಸುಸಜ್ಜಿತ ಗ್ರಂಥಾಲಯ, ಭಾಷಾ ಗ್ರಂಥಾಲಯ, ಇ–ಲೈಬ್ರರಿ, ವ್ಯಾಯಾಮ ಶಾಲೆಯೂ (ಜಿಮ್‌) ಇಲ್ಲಿದೆ.

ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಕುರಿತು ವಿಶೇಷ ತರಗತಿ ನಡೆಯುತ್ತಿವೆ. ಕಾಲೇಜು ವಿಶಾಲವಾದ ಸಭಾಭವನ ಹಾಗೂ ತರಗತಿ ಕೊಠಡಿಗಳನ್ನು ಹೊಂದುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯುವ ಕೇಂದ್ರವಾಗಿದೆ.

ಕೊಕ್ಕೊ, ಬಾಲ್‌ಬ್ಯಾಡ್ಮಿಂಟನ್‌, ವಾಲಿಬಾಲ್‌, ಕಬಡ್ಡಿ ಹಾಗೂ ಅಥ್ಲೆಟಿಕ್ಸ್‌ಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯೂನಿರ್ವಸಿಟಿ ಬ್ಲ್ಯೂಗಳಾಗಿ ಕ್ರೀಡೆಯಲ್ಲಿ ಸಾಧನೆಗೈದಿದ್ದಾರೆ. ಕಾಲೇಜು ಆವರಣದಲ್ಲಿ 400 ಮೀಟರ್‌ ವಿಸ್ತಾರದ ಕ್ರೀಡಾಂಗಣವನ್ನು ₹ 70 ಲಕ್ಷ ವೆಚ್ಚದಲ್ಲಿ ಯುಜಿಸಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸೇವಾ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್‌ ಮತ್ತು ಗೈಡ್‌ ವಿಭಾಗದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಜ್ಞಾನಾರ್ಜನೆಯೊಂದಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸುವ ಕಾರ್ಯವೂ ಕಾಲೇಜಿನಲ್ಲಿ ನಡೆದಿದೆ. ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮೌಲ್ಯಾಂಕನ ಪರಿಷತ್ (ನ್ಯಾಕ್‌)ನಿಂದ ಸತತ ಎರಡು ಸಾರಿ ‘ಬಿ’ ಶ್ರೇಣಿ ಕಾಲೇಜು ಎಂದು ಪರಿಗಣಿಸಲ್ಪಿಟ್ಟಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !