ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತದ ಒಟನಾಟದಲ್ಲಿ

Last Updated 13 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಶ್ರೀನಿವಾಸ ರಾಮಾನುಜನ್‌ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು. ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದ ಸಾಧನೆಯನ್ನು ಮಾಡಿದವರು. ಕಡುಬಡತನದಲ್ಲೂ ಅವರು ತಮ್ಮ ಗಣಿತಪ್ರೇಮವನ್ನು ಬಿಡಲಿಲ್ಲ. ಅನಾರೋಗ್ಯದ ನಡುವೆಯೂ ಅವರು ಅಧ್ಯಯನದ ನಿಷ್ಠೆಯನ್ನು ಕಳೆದುಕೊಳ್ಳಲಿಲ್ಲ.ರಾಬರ್ಟ್‌ ಕಾನಿಗೆಲ್‌ ಬರೆದಿರುವ ರಾಮಾನುಜನ್‌ ಜೀವನಚರಿತ್ರೆ ‘ದಿ ಮ್ಯಾನ್‌ ಹು ನ್ಯೂ ಇನ್‌ಫಿನಿಟಿ: ಎ ಲೈಫ್‌ ಆಫ್‌ ದಿ ಜೀನಿಯಸ್‌ ರಾಮಾನುಜನ್‌’ ಲೋಕಪ್ರಸಿದ್ಧಿಯನ್ನು ಪಡೆದಿರುವ ಕೃತಿ. ಇದು ಕನ್ನಡಕ್ಕೂ ಅನುವಾದಗೊಂಡಿದೆ.

ಗಣಿತಜ್ಞರೇ ಆಗಿರುವ ಸಿ.ಎಸ್‌. ಅರವಿಂದ ಅನುವಾದಿಸಿರುವ ಈ ಕೃತಿಯನ್ನು ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದೆ. ಐನೂರಕ್ಕೂ ಹೆಚ್ಚು ಪುಟಗಳ ಈ ಗ್ರಂಥ ಹಲವು ವರ್ಷಗಳ ಸಂಶೋಧನೆಯ ಫಲ. ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಪೋಷಕರಿಗೂ ಆದರ್ಶವಾಗಬಲ್ಲ ವ್ಯಕ್ತಿತ್ವ ರಾಮಾನುಜನ್‌ ಅವರದ್ದು. ಗಣಿತ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ. ಆದರೆ ಗಣಿತವೇ ಜೀವನದ ಉಸಿರನ್ನಾಗಿಸಿಕೊಂಡು ಬಾಳಿದ ಗಣಿತಜ್ಞನ ಜೀವನ ನಮ್ಮಲ್ಲಿ ಗಣಿತಪ್ರೀತಿಯನ್ನೂ ಹುಟ್ಟಿಸುತ್ತದೆ; ಜೊತೆಗೆ ಜೀವನಕ್ಕೊಂದು ಆದರ್ಶವನ್ನೂ ಕಟ್ಟಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT