7

ಮಾಧ್ಯಮಗಳಲ್ಲಿ ಅವಕಾಶಗಳು ಬೇಕೆ? ಇಲ್ಲಿದೆ ಅವಕಾಶ...

Published:
Updated:

ಪತ್ರಕರ್ತ/ಪತ್ರಕರ್ತೆಯಾಗಬೇಕು ಎಂಬ ಕನಸು ಹಲವರಿಗಿರುತ್ತದೆ. ಅದರಲ್ಲೂ ಟಿ.ವಿ.ಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇಂದು ಹೆಚ್ಚು. ಇಂಥ ಉತ್ಸಾಹಿಗಳಿಗೆ ಪತ್ರಿಕೋದ್ಯಮದಲ್ಲಿ ತರಬೇತಿಯನ್ನು ನೀಡಿ, ವೃತ್ತಿಪರರನ್ನಾಗಿಸಲು ಬೆಂಗಳೂರಿನಲ್ಲಿ ಸಂಸ್ಥೆಯೊಂದು ಹುಟ್ಟಿಕೊಂಡಿದೆ. ಅದುವೇ ‘ಅಲ್ಮಾ ಸೂಪರ್ ಮಿಡಿಯಾ ಸ್ಕೂಲ್‌’. 

ಪತ್ರಕರ್ತ ಗೌರೀಶ್ ಅಕ್ಕಿ ನೇತೃತ್ವದಲ್ಲಿ ಈ ಸಂಸ್ಥೆ ಆರಂಭವಾಗಿದೆ. ಯಾವುದೇ ವಿಷಯದಲ್ಲಿ ಡಿಗ್ರಿ ಪಡೆದು, ಆಂಗ್ಲಭಾಷಾ ಜ್ಞಾನವಿರುವವರು ಈ ಸಂಸ್ಥೆಗೆ ಪ್ರವೇಶವನ್ನು ಪಡೆಯಬಹುದು. ಟಿ.ವಿ., ರೇಡಿಯೊ, ಮುದ್ರಣಮಾಧ್ಯಮ, ಅಂತರ್ಜಾಲ ವಿಭಾಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೋರ್ಸ್‌ಗೆ ಸೇರಬಹುದು.

ಈ ಕೋರ್ಸ್‌ನ ಅವಧಿ ಒಂದು ವರ್ಷ; ಎರಡು ಸೆಮಿಸ್ಟರ್‌ಗಳಿರುತ್ತವೆ. ಕೋರ್ಸ್‌ ಮುಗಿದ ಮೇಲೆ ರಾಜ್ಯದ ಹೆಸರಾಂತ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಇಂಟರ್ನಶಿಪ್‌ಗೆ ಅವಕಾಶವಿರುತ್ತದೆ. ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.

ಕೋರ್ಸ್‌ನ ವಿಷಯಗಳು
ಟಿ.ವಿ./ದೃಶ್ಯಮಾಧ್ಯಮ
: ಕಾಪಿ ಎಡಿಟರ್‌, ವರದಿಗಾರಿಕೆ, ಪ್ರೊಡ್ಯೂಸರ್ ಮತ್ತು ನ್ಯೂಸ್ ಆ್ಯಂಕರ್.

ಮುದ್ರಣಮಾಧ್ಯಮ: ಕಾಪಿ ಎಡಿಟರ್‌, ವರದಿಗಾರಿಕೆ, ನುಡಿಚಿತ್ರ ಬರಹಗಳು ಹಾಗೂ ಅಂಕಣ ಬರಹ

ರೇಡಿಯೊ: ಕಾಪಿ ಎಡಿಟರ್, ವರದಿಗಾರಿಕೆ, ನ್ಯೂಸ್ ರೀಡರ್, ನ್ಯೂಸ್ ಬುಲೆಟಿನ್ ‍ಪ್ರೊಡ್ಯುಸರ್‌

ಅಂರ್ತಜಾಲ: ಕಾಪಿ ಎಡಿಟರ್ ಮತ್ತು ವರದಿಗಾರಿಕೆ. ಬೇರೆ ಬೇರೆ ವಿಭಾಗಕ್ಕೆ ಅನುಗುಣವಾಗಿ ತರಗತಿಗಳನ್ನು ನಡೆಸಲಾಗುವುದು. 

ಲೋಕಾಯುಕ್ತ, ಸೈಬರ್ ಕ್ರೈಂ ವಿಭಾಗ, ಫೊರೆನಿಕ್ಸ್ ಲ್ಯಾಬ್, ಎಫ್‌ಐಸಿಸಿಐ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜೊತೆ ವಿದ್ಯಾರ್ಥಿಗಳಿಗೆ ಸಂವಾದವನ್ನು ಏರ್ಪಡಿಸುವುದು ಈ ಕೋರ್ಸಿನ ವಿಶೇಷ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಅನುಭವೀ ‍ಪತ್ರಕರ್ತರು ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಲಿದ್ದಾರೆ.  

ಪ್ರವೇಶಕ್ಕೆ ಕೊನೆಯ ದಿನಾಂಕ: ಜುಲೈ 21

ಸಂಪರ್ಕಕ್ಕೆ: 7618746667

* home page: www.almasupermedia.com

* email: contact@almasupermedia.com

* FB: www.facebook.com/Alma-super-media-school-611392509195592

* Twitter: https://twitter.com/media_alma

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !