ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲವಿನ ಜಾಗ

Last Updated 18 ಡಿಸೆಂಬರ್ 2018, 19:33 IST
ಅಕ್ಷರ ಗಾತ್ರ

ನಾನಂತೂ ಯಾವತ್ತೂ ಕಾಲೇಜಿಗೆ ಇಂಥದ್ದೇ ಕಾರಣಕ್ಕೆ ಹೋಗಬೇಕು ಎಂದುಕೊಂಡು ಹೋಗಿರಲಿಲ್ಲ. ಎಲ್ಲರೂ ಹೋಗುತ್ತಾರೆ, ಕಾಲೇಜಿನ ಜೀವನವನ್ನು ಎಷ್ಟು ಎಂಜಾಯ್ ಮಾಡುತ್ತಾರಲ್ಲ; ನಾನೇಕೆ ಆ ಖುಷಿಯಿಂದ ವಂಚಿತಳಾಗಬೇಕು ಎಂದುಕೊಂಡು ಕ್ಯಾಂಪಸ್‌ನ ಮೆಟ್ಟಿಲು ತುಳಿದೆ. ಕಾಲೇಜಿಗೆ ಹೋದ ಕ್ಷಣದಿಂದ ನನ್ನ ಕಾಲುಗಳು ಕ್ಲಾಸ್ ರೂಮ್‌ಗಿಂತ ಕಾರಿಡಾರ್‌ನಲ್ಲಿ ನಿಲ್ಲುವುದೇ ಹೆಚ್ಚಾಗಿತ್ತು.

ಕಾರಿಡಾರ್ ನನಗೆ ಆತ್ಮೀಯ ಸ್ನೇಹಿತನಂತಿತ್ತು. ಆ ಪದ ಕೇಳಿದಾಕ್ಷಣ ಮುಖದಲ್ಲಿ ಹೊಸ ಹೊಳ‍ಪು ಮೂಡುತ್ತಿತ್ತು. ಆ ಜಾಗ ಅದೆಷ್ಟೋ ಒಲವಿನ ಘಟನೆಗಳಿಗೆ ಸಾಕ್ಷಿಯಾಗಿದೆ. ಎಷ್ಟೋ ಮನಸ್ಸುಗಳಲ್ಲಿ ಪ್ರೀತಿ ಹುಟ್ಟಿದ್ದು, ಜಗಳವಾಡಿ ಮತ್ತೆ ಒಂದಾಗಿದ್ದು, ಟೀಚರ್ ಬಳಿ ಬೈಸಿಕೊಂಡಿದ್ದು, ಹೊಗಳಿಕೆ ಪಡೆದು ಅವಾರ್ಡ್ ಗಳಿಸಿದ್ದು – ಎಲ್ಲವೂ ಇದೇ ಜಾಗದಲ್ಲಿ.

ತರ್ಲೆ, ಕೀಟಲೆ ಮಾಡಲು ಇದು ಆಟದ ಮೈದಾನಕ್ಕಿಂತಲೂ ಹೆಚ್ಚು ಅನುಕೂಲಕರವಾಗಿತ್ತು. ಸಣ್ಣ–ಪುಟ್ಟ ಯಾವುದೇ ಸಂತಸದ ವಿಷಯ ಇರಲಿ ಅತ್ಯಂತ ಉಲ್ಲಾಸದಿಂದ ಸಂಭ್ರಮಿಸುವುದು, ಆ ಮೂಲೆಯಿಂದ ಈ ಮೂಲೆಗೆ ಓಡಾಡುವುದು, ಒಂದೇ ಡಬ್ಬದಲ್ಲಿ ಎಲ್ಲರೂ ಹಂಚಿ ಹರಿದು ತಿನ್ನುವುದು – ಈ ಎಲ್ಲದಕ್ಕೂ ಈ ಜಾಗವೇ ಶ್ರೇಷ್ಠ ಜಾಗ ಎನ್ನಿಸಿಕೊಂಡಿತ್ತು.

ಸೆಲ್ಫೀ ಸ್ಪಾಟ್‌ನಂತೆ ಆಗಿದ್ದ ಆ ಜಾಗದಲ್ಲಿಒಮ್ಮೆ ಫೋಟೊ ತೆಗೆಸಲು ಆರಂಭಿಸಿದರೆ ಕನಿಷ್ಠ 25-30 ತೆಗೆಯುವವರೆಗೂ ನಿಲ್ಲಿಸುತ್ತಲೇ ಇರಲಿಲ್ಲ. ಪ್ರತಿಯೊಬ್ಬರ ಪೋನ್‌ಗಳಿಗೂ ಬೇರೆ ಬೇರೆ ರೀತಿಯ ಪೋಸ್ ಕೊಡುತ್ತಾ ನಿಂತು ಬಿಡುತ್ತಿದ್ದೆವು. ಮತ್ತೆ ತೆಗೆದ ಫೋಟೊಗಳನ್ನು ಶೇರ್ ಮಾಡಿಕೊಂಡು ಅದನ್ನು ಫೇಸ್‌ಬುಕ್ಕಿಗೆ ಅಪ್‌ಲೋಡ್ ಆಗುವವರೆಗೂ ಕಾರಿಡಾರ್‌ ಬಿಟ್ಟು ಸರಿಯುತ್ತಿರಲಿಲ್ಲ.

ಕಾರಿಡಾರ್‌ನಲ್ಲಿ ಕುಳಿತಿದ್ದಾಗ ಸುಂದರ ಚಿಟ್ಟೆಯಂತೆ ಮನದೊಳಗೆ ಮಧುರ ಕಲ್ಪನೆಗಳು ಹಾರಾಡುತ್ತಿದ್ದವು. ಅದನ್ನೇ ಯೋಚಿಸುತ್ತಾ ಕವನ, ಕಥೆ ಬರೆಯೋಣಾ ಎಂದುಕೊಂಡು ಬರವಣಿಗೆಗೆ ನಾಂದಿ ಹಾಡಿದ್ದು ಕೂಡ ಇಲ್ಲಿಯೇ. ಒಟ್ಟಿನಲ್ಲಿ ಕಾರಿಡಾರ್ ನನ್ನ ಜೀವನದಲ್ಲಿ ಒಂದು ಉತ್ತಮ ಸಂಗಾತಿ.

ಕೆ. ಎಸ್‌. ಎಸ್‌. ಕಾಲೇಜು,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT