ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ ಎದುರಿಸುತ್ತಿರುವ ಕೇಪ್‍ಟೌನ್‍ ನಗರಕ್ಕೆ ಧನಸಹಾಯ ಮಾಡಿದ ಟೀಂ ಇಂಡಿಯಾ

Last Updated 28 ಫೆಬ್ರುವರಿ 2018, 11:55 IST
ಅಕ್ಷರ ಗಾತ್ರ

ಜೋಹನ್ಸ್‌ಬರ್ಗ್‌: ಭೀಕರ ನೀರಿನ ಸಮಸ್ಯೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಕೇಪ್‍ಟೌನ್‍ ನಗರಕ್ಕೆ ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧನಸಹಾಯ ಮಾಡಿದೆ.

ಕೇಪ್‍ಟೌನ್‌ನಗರದಲ್ಲಿ ನೀರಿನ ಬಾಟಲಿ ಹಾಗೂ ಕೊಳವೆ ಬಾವಿ ತೋಡಿಸಲು ಭಾರತ ಕ್ರಿಕೆಟ್‌ ತಂಡ ‘ದಿ ಗಿಫ್ಟ್ ಆಫ್ ಗಿವರ್ಸ್’ ಪ್ರತಿಷ್ಠಾನಕ್ಕೆ ₹5.5 ಲಕ್ಷ ಸಹಾಯ ಮಾಡಿತು. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನಾಯಕ ಫಾಫ್ ಡುಪ್ಲೆಸಿ ಉಪಸ್ಥಿತರಿದ್ದರು.

ಕಳೆದ ತಿಂಗಳು ಕೇಪ್‍ಟೌನ್‍ ನಿವಾಸಿಗಳಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಮಾತ್ರ ಬಳಕೆ ಮಾಡಲು ನಗರದ ಆಯುಕ್ತರು ಕರೆ ನೀಡಿದ್ದರು.

ಕೇಪ್‍ಟೌನ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಪಂದ್ಯವೊಂದರ ವೇಳೆ ಟೀಂ ಇಂಡಿಯಾದ ಆಟಗಾರರಿಗೂ 2 ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡದಂತೆ ಮನವಿ ಮಾಡಲಾಗಿತ್ತು. ನಗರದಲ್ಲಿ ನೀರಿನ ಕೊರತೆ ಇರುವುದರಿಂದ ನೀರನ್ನು ಮಿತವಾಗಿ ಬಳಸುವಂತೆ ಅಲ್ಲಿನ ನಿವಾಸಿಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT