ಜಗಲಿಕಟ್ಟೆಯ ಬಂಧನ

7

ಜಗಲಿಕಟ್ಟೆಯ ಬಂಧನ

Published:
Updated:
Prajavani

‘ಗೋಲ್ಡನ್‌ ಲೈಫ್ ಯಾವುದು’ ಎಂದು ಯಾರನ್ನು ಕೇಳಿದರೂ ಸಾಮಾನ್ಯವಾಗಿ ಬರುವ ಉತ್ತರ: ‘ಕಾಲೇಜ್’. ಆ ದಿನಗಳ ಬಗ್ಗೆ ಕೇಳಿದರೆ ಪ್ರತಿಯೊಬ್ಬರ ಮೊಗದಲ್ಲೂ ಸಂತಸ ಮೂಡುತ್ತದೆ. 

ಹಾಗೆಯೇ ಪ್ರತಿಯೊಬ್ಬರಿಗೂ ಕಾಲೇಜಿನಲ್ಲಿ ನಿಮ್ಮ ನೆಚ್ಚಿನ ಜಾಗ ಯಾವುದೆಂದು ಕೇಳಿದರೆ ಒಬ್ಬೋಬ್ಬರು ಒಂದೊಂದು ಜಾಗದ ಹೆಸರು ಹೇಳುತ್ತಾರೆ. ಉದಾ: ಕ್ಯಾಂಟಿನ್, ಕ್ಲಾಸ್‌ರೂಮ್‌, ಕಾರಿಡಾರ್, ಗ್ರಂಥಾಲಯ – ಹೀಗೆ. ಅದೇ ರೀತಿ ನನ್ನ ನೆಚ್ಚಿನ ಜಾಗವೆಂದರೆ ಕಾಲೇಜು ಉದ್ಯಾನವನದ ಬೆಂಚುಗಳು. ಅವು ನಮಗೆ ಹರಟೆಯ ಜಗಲಿಕಟ್ಟೆಯೂ ಆಗಿದ್ದವು. ಕ್ಲಾಸಿನ ವಿರಾಮದ ವೇಳೆ ಅಥವಾ ಕ್ಲಾಸ್ ಮುಗಿದ ಮೇಲೆ ಸೀನಿಯರ್, ಜ್ಯೂನಿಯರ್ ಎಂಬ ಭೇದಭಾವವಿಲ್ಲದೇ ಅಲ್ಲಿ ಕುಳಿತು ಎಲ್ಲರನ್ನೂ ರೇಗಿಸುತ್ತ, ಕಾಮಿಡಿ ಮಾಡುತ್ತಾ ಹರಟೆ ಹೊಡೆಯುತ್ತಿದ್ದೆವು. 

ನಮ್ಮ ಸಾವಿರ ಸೆಲ್ಫೀ ಫೋಟೊಗಳಿಗೂ ಈ ಕಟ್ಟೆಗಳು ಸಾಕ್ಷಿಯಾಗಿದ್ದವು. ಅಷ್ಟೆ ಅಲ್ಲ, ನಮ್ಮ ಕ್ಯಾಂಟಿನ್ ಈ ಕಟ್ಟೆಗಳಿಗೆ ಸ್ಪಲ್ಪ ಅಣತಿ ದೂರದಲ್ಲಿದಿದ್ದರಿಂದ ನಮ್ಮ ಭೋಜನವು ಇಲ್ಲೇ ನಡೆಯುತ್ತಿತ್ತು. ಇನ್ನೂ ಸೆಮಿಸ್ಟರ್ ಪರೀಕ್ಷೆ ಬಂತೆಂದರೆ ಸಾಕು ಎಲ್ಲರೂ ಪರೀಕ್ಷೆ ದಿನ ಒಂದು ಗಂಟೆ ಮೊದಲೇ ಇಲ್ಲಿ ಹಾಜರಾಗಿ ಆಯಾ ಆಯಾ ವಿಷಯಗಳ ಬಗ್ಗೆ ವಿಚಾರ ವಿನಿಮಯವನ್ನು ಮಾಡಿಕೊಳ್ಳುತ್ತಿದ್ದೆವು. ಆರು ತಿಂಗಳಲ್ಲಿ ಎಂದೂ ನಡೆಯದ ಚರ್ಚೆ ಅಂದು ನಡೆಯುತ್ತಿತ್ತು. ಇದರ ಮಧ್ಯೆ ಯಾರಾದರೂ ಓದಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ದೂರದ ಕಟ್ಟೆಯ ಮೇಲೆ ಕುಳಿತು ಓದುತ್ತಿದ್ದರೆ ಅವರೇ ಈ ಸೆಮಿಸ್ಟರ್ ಟಾಪರ್ ಎಂದು ಎಲ್ಲರೂ ಸೇರಿ ರೇಗಿಸಿದ್ದೂ ಇದೆ. ಈ ಕಟ್ಟೆಗಳು ಕ್ಲಾಸ್ ರೂಂಗೆ ಸ್ವಲ್ಪ ಹತ್ತಿರವಿದಿದ್ದರಿಂದ ಎಷ್ಟೋ ಸಾರಿ ಹೆಚ್ಚು ಗಲಾಟೆ ಮಾಡಿ ಬೈಸಿಕೊಂಡಿದ್ದು ಇದೆ. ಒಟ್ಟಿನಲ್ಲಿ ನಮ್ಮ ಕಾಲ ಕಳೆಯುವ ಹರಟೆಗೆ ಈ ಕಟ್ಟೆಗಳು ನೆಚ್ಚಿನ ತಾಣಗಳಾಗಿದ್ದವು. ಹಾಗೆ ನಮ್ಮ ಸೆಮಿನಾರ್ ತಯಾರಿ, ಅಸೈನ್‌ಮೆಂಟ್‌, ಕ್ಲಾಸ್ ಫಂಕ್ಷನ್‌, ಟ್ರಿಪ್‌ ಪ್ಲಾನಿಂಗ್ – ಎಲ್ಲವೂ ಇಲ್ಲಿಯೇ ನಡೆಯುತ್ತಿದ್ದವು. 

ಇನ್ನೂ ಕಾಲೇಜು ಕೊನೆಯ ದಿನ ಅಂದು ಕಾಲೇಜ್ ಬಿಟ್ಟು ಬರುವಾಗ ಹಿಂದೆ ತಿರುಗಿ ನೋಡಿದರೆ ಈ ಕಟ್ಟೆಗಳು ನಮ್ಮನ್ನು ಅಳುತ್ತ ಕರೆಯುತ್ತಿರುವಂತೆ ಭಾಸವಾಗಿದ್ದು ನನಗೆ ಇಂದಿಗೂ ಸ್ಮೃತಿಪಟಲದಲ್ಲಿ ಹಸಿರಾಗಿದೆ. 

ಮೇಘನಾ ಎಂ. ಎನ್‌., ಜಿಎಫ್‌ಜಿ ಕಾಲೇಜು, ಹೊಸದುರ್ಗ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !