ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ.

7

ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ.

Published:
Updated:

ನಾನು ಬಿ.ಎಸ್ಸಿ. ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಜೆನಿಟಿಕ್ಸ್ ನನ್ನ ಇಚ್ಛೆಯ ವಿಷಯಗಳು. ನಾನು ವೈದ್ಯಕೀಯ ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಬೇಕೆಂದಿದ್ದೇನೆ. ನನಗೆ ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ಇರುವ ಒಳ್ಳೆಯ ಕಾಲೇಜುಗಳನ್ನು ತಿಳಿಸಿ ಮತ್ತು ಈ ಕೋರ್ಸ್‌ನ ಬಗ್ಗೆ ಮಾಹಿತಿ ನೀಡಿ.

-ಮೃಣಾಲಿನಿ ಗೌಡ, ಊರು ಬೇಡ

ನಿಮ್ಮ ಮುಂದಾಲೋಚನೆಯನ್ನು ಮೆಚ್ಚುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಮುಂದೆ ಏನು ಮಾಡಬೇಕೂಂತ ಕೊನೆಯ ವರ್ಷದಲ್ಲೇ ನಿರ್ಧರಿಸಬೇಕು. ‘ಪ್ಲಾನಿಂಗ್’ ಬಹಳ ಮುಖ್ಯ.

‘ಎಂಬ್ರಿಯಾಲಜಿ’ ಬಯಾಲಜಿಯ ಒಂದು ಕವಲು. ಇದು ಭ್ರೂಣದ ಬೆಳವಣಿಗೆ ರಿಪ್ರೊಡಕ್ಟಿವ್‌ ಸೆಲ್ (Reproductive cells) ಹೇಗೆ ಬೆಳೆಯುತ್ತದೆ ಫರ್ಟಿಲೈಜೇಷಷನ್‌ನಿಂದ ಸಿಂಗಲ್ ಸೆಲ್ ಜೈಗೋಟ್‌ (Zygote) ನಿಂದ ಒಂದು ‘ಜೀವಿ’ ಆಗುವ ಬಗ್ಗೆ ತಿಳಿವಳಿಕೆ ಮತ್ತು ಜ್ಞಾನವನ್ನು, ನೀವು ಈ ಶಾಸ್ತ್ರದಲ್ಲಿ ಗಳಿಸುತ್ತೀರಿ.

ಬಿ.ಎಸ್ಸಿ. ಮಾಡಿದವರಿಗೆ ಈ 2 ವರ್ಷದ ಎಂ.ಎಸ್ಸಿ. ಕೋರ್ಸ್ ಸೇರುವ ಅರ್ಹತೆ ಇದೆ.

ಹಲವು ಕಾಲೇಜುಗಳು:

1. Kasturba Medical College, Manipal: www.manipal.edu

2. All India Institute of Medical Science (AIIMS), New Delhi: www.aiims.edu

3. Bangalore University, Bangalore: www.bangaloreuniversity.ac.in

4. Sri Ramachandra Institute of Higher education and Research, Chennai: www.sriramachandra.edu.in

5. JSS University, Mysuru: www.jssuniedu.in 

ಇನ್ನೂ ಅನೇಕ....

ಗಮನವಿಡಿ: ಕರ್ನಾಟದಲ್ಲೇ ಮಾಡಬೇಕು ಎಂಬ ನಿರ್ಧಾರವನ್ನು ಬದಲಿಸಿಕೊಂಡು, ಯಾವ ಪ್ರಖ್ಯಾತ ಇನ್ಸ್‌ಟಿಟ್ಯೂಟ್‌ ಅಥವಾ ಮೆಡಿಕಲ್ ಕಾಲೇಜ್‌ನಲ್ಲಿ ಮಾಡಿದರೆ ಒಳ್ಳೆಯ ಉದ್ಯೋಗ ಸಿಗುತ್ತದೆ ಎನ್ನುವುದನ್ನು ಗಮನಿಸಿ.

ಐ.ವಿ.ಎಫ್. ಸೆಂಟರ್‌ಗಳು ಬಹಳ ಬಂದಿದೆ. ಎಗ್, ಸ್ಪರ್ಮ್ ಮತ್ತು ಎಂಬ್ರಿಯೋ ಪ್ರಿಸೆರ್ವೇಷನ್‌ಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಉದ್ಯೋಗಾವಕಾಶದ ಬಗ್ಗೆ ಚಿಂತಿಸಬೇಕಾಗಿಲ್ಲ.

**

ನನ್ನ ಮಗ ಬಿ.ಎಚ್.ಎಂ.ಎಸ್. ವೃತ್ತಿಶಿಕ್ಷಣ 4ನೇ ವರ್ಷದಲ್ಲಿ ಓದುತ್ತಿದ್ದಾನೆ. ನಾವು ಒಬಿಸಿ 2ನೇ ವರ್ಗಕ್ಕೆ ಸೇರಿರುತ್ತೇವೆ. ನನಗೆ ಮಗನ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಯಾವ ಮಾರ್ಗ ತಿಳಿಸಿ ಮತ್ತು ಅದಕ್ಕೆ ಸಂಬಂಧಪಟ್ಟ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡಿ.

-ಸುಧೀಂದ್ರ, ತಿಪಟೂರು

ನಿಮ್ಮ ಮಗ ಬಿ.ಎಚ್.ಎಂ.ಎಸ್. ಕೋರ್ಸ್ ಮುಗಿದ ನಂತರ, ಎಂ.ಡಿ. ಇನ್ ಹೋಮಿಯೋಪತಿ ಮೆಡಿಸಿನ್‌ ಮಾಡಬಹುದು. ಇದು 3 ವರ್ಷದ ಕೋರ್ಸ್.

ಕೆಲವು ಕಾಲೇಜುಗಳು:

1. Government Medical College/Rajendra Hospital (GMCP) Patiala: www.gmcpatiala.com

2. Maharaja Institute of Medical Science (MIMS), Andrapradesh: www.mimsvzm.org  

3. Baba Farid University of Health Sciences (BFUHS) Punjab: www.bfuhs.ac.in

4. Maharashtra University of Health Science (MUHS) Nashik: www.muhs.ac.in

5. Nehra Homeopathic Medical College and Hospital, New delhi: www.nhmc.delhigovt.nic.in

ಇನ್ನೂ ಹಲವು....‌

ಹೊರದೇಶದಲ್ಲೂ ಪಿ.ಜಿ. ಇನ್ ಹೋಮಿಯೋಪತಿ ಮಾಡಬಹುದು.

ಉದಾಹರಣೆಗೆ:

1. Cyberjaya University College of Medical Sciences CYBERJAYA, Selangor, Malaysia - 63000: www.Cybermed.edu.my

2. College of Natural Health and Homeopathy, Auckland Campus, 382, 386, Manukau Rd, Epsom, Auckland, Newzealand 1023: www.cnhh.ac.in

3. Hannemann College of Homeopathy Regal Court 42-44 High St, Slough SL1 1EL, UK,: www.hchuk.com

4. London College of Homeopathy Hounslow, London, UK: www.chehimeopathy.com

5. Canadian College of Homeopathic Medicine, 1881 Yonge St #500, Toronto, ON M4S 3C4, Canada: www.homeopathycanada.com

ಇನ್ನೂ ಅನೇಕ ಹಲವಾರು ದೇಶಗಳಲ್ಲಿ... ನ್ಯಾಷನಲ್ ಲೆವೆಲ್ ಮತ್ತು ರಾಜ್ಯ ಸರ್ಕಾರ ಕೂಡ ಹಲವಾರು ಸ್ಕಾಲರ್‌ಶಿಪ್‌ ಯೋಜನೆಗಳನ್ನು ಹಮ್ಮಿಕೊಂಡಿದೆ.

ಈ ಕೆಳಗಿನ ವೆಬ್‌ಸೈಟ್‌ನಿಂದ ಪೂರ್ಣ ಮಾಹಿತಿ ಪಡೆಯಿರಿ:

‌1. Vidyasiri Scholarships: www.backwardclasses.kar.nic.in

2. Devaraj Urs backward classes development Corporation: www.karnataka.gov.in/dbcdc

3. MHRD dept of Higer Education: www.scholorships.gov.in

4. National Commission for Backward classes.cgg.gov.in: 

ಇನ್ನೂ ಅನೇಕ....

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !