ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಆನ್‌ಲೈನ್‌ ಕ್ರ್ಯಾಶ್‌ ಕೋರ್ಸ್‌

Last Updated 18 ಜೂನ್ 2020, 20:00 IST
ಅಕ್ಷರ ಗಾತ್ರ

ಮಂಗಳೂರು: ನಗರದ ಎಕ್ಸಾಮ್ಸ್‌ 24X7 ಸಂಸ್ಥೆಯು ಪ್ರಸಕ್ತ ಸಾಲಿನ ನೀಟ್‌ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ಕ್ರ್ಯಾಶ್‌ ಕೋರ್ಸ್‌ ನಡೆಸಲಿದೆ. ವಿದ್ಯಾರ್ಥಿಗಳ ನೋಂದಣಿ ಆರಂಭವಾಗಿದೆ.

ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳ ಪೂರ್ಣ ಪಠ್ಯಕ್ರಮವನ್ನು ಆಧರಿಸಿ ಕೋರ್ಸ್‌ ನಡೆಯಲಿದೆ. ಸಂಪೂರ್ಣ ನೋಟ್ಸ್‌ ಒದಗಿಸಲಾಗುವುದು. ಪಠ್ಯದ ಪ್ರತಿ ಅಧ್ಯಾಯಕ್ಕೂ (ಚಾಪ್ಟರ್‌) ತಲಾ ಮೂರು ಕಿರು ಪರೀಕ್ಷೆ,
ಯೂನಿಟ್‌ ಟೆಸ್ಟ್‌ ನಡೆಸಲಾಗುವುದು. ಸುಮಾರು 160 ಗಂಟೆಗಳಷ್ಟು ಅವಧಿಯ ವಿವರಣಾತ್ಮಕ ವಿಡಿಯೊ ಒದಗಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜುಲೈ 15 ರಿಂದ 29 ಮಾಡೆಲ್ ಟೆಸ್ಟ್‌ಗಳು ಆರಂಭವಾಗಲಿವೆ. ಪರೀಕ್ಷೆ ಮುಗಿದ ಕೂಡಲೇ ವಿದ್ಯಾರ್ಥಿಗಳಿಗೆ ಅವರು ಗಳಿಸಿರುವ ಅಂಕಗಳು ಮತ್ತು ಸರಿ ಉತ್ತರಗಳ ಮಾಹಿತಿ ನೀಡಲಾಗುತ್ತದೆ. ‌ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೀಟ್‌ ಪರೀಕ್ಷೆಯಲ್ಲಿ ದೊರೆಯಬಹುದಾದ ರ‍್ಯಾಂಕಿಂಗ್‌ ಕುರಿತು ಮಾಹಿತಿ ಒದಗಿಸಲಾಗುವುದು. ಆನ್‌ಲೈನ್ ಕೋರ್ಸ್‌ಗಾಗಿ ಪ್ರತ್ಯೇಕ ವಾಟ್ಸ್‌ ಆ್ಯಪ್ ಗ್ರೂಪ್‌ ರಚಿಸಲಿದ್ದು, ವಿದ್ಯಾರ್ಥಿಗಳ ಸಂಶಯಗಳನ್ನು ಪ್ರಾಧ್ಯಾಪಕರು ನಿವಾರಿಸುತ್ತಾರೆ ಎಂದು ಎಕ್ಸಾಮ್ಸ್‌ 24X7 ಹೇಳಿದೆ.

ಶುಲ್ಕದಲ್ಲಿ ರಿಯಾಯಿತಿ: ಆನ್‌ಲೈನ್‌ ಕ್ರ್ಯಾಶ್‌ ಕೋರ್ಸ್‌ಗೆ ಸೇರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ಲಾಗ್‌ಇನ್‌ ಐಡಿ ನೀಡಲಾಗುವುದು. ಈ ಐಡಿ ಮೂಲಕ ದಿನದ 24 ಗಂಟೆಯೂ ಕಲಿಯಲು ಅವಕಾಶವಿರುತ್ತದೆ.

ಈ ಕೋರ್ಸ್‌ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲ 40 ವಿದ್ಯಾರ್ಥಿಗಳಿಗೆ ಶೇ 50ರಷ್ಟು ರಿಯಾಯಿತಿ (₹ 2,500) ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಮತ್ತು ಪ್ರವೇಶಾತಿಗೆ exams24X7.com ವೆಬ್‌ಸೈಟ್‌ ಅಥವಾ ದೂರವಾಣಿ ಸಂಖ್ಯೆ 7760077722 ಮತ್ತು 7795777722 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT