ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕಾಲದಲ್ಲಿ ಕನ್ನಡ

Last Updated 2 ನವೆಂಬರ್ 2018, 19:45 IST
ಅಕ್ಷರ ಗಾತ್ರ

ರಾಜ್ಯೋತ್ಸವ ಹೊಸ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಿದೆ ಎಂದು ಅನ್ನಿಸುತ್ತದೆ.‌ ಕನ್ನಡದ ಕುರಿತು ಅಭಿಮಾನ ತಾಳುವುದು ರಾಜ್ಯೋತ್ಸವದ ಒಂದು ಭಾಗ. ಕನ್ನಡದ ಡಿಂಡಿಮ ಹೊಸ ಕಾಲದ ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಮಾರ್ದನಿಸುತ್ತಿದೆ ಎಂದು ನೋಡಿದರೆ ತೀರಾ ನಿರಾಶದಾಯಕವಾದ ವಾತಾವರಣವೇನೂ ಇಲ್ಲ.

ಪ್ರಮುಖ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ಅನೇಕ ಕನ್ನಡ ಗುಂಪುಗಳು ಇವೆ. ಕನ್ನಡ ಕಥಾಗುಚ್ಛ (ಬರಹಗಳ ಕೈಪಿಡಿ), ಕನ್ನಡ, ಕನ್ನಡ, ಕನ್ನಡ, ಮಂದಹಾಸ - ಗಂಧದ ಗುಡಿ ಕನ್ನಡ ನುಡಿ ಮೊದಲಾದ ಗುಂಪುಗಳು ಸಕ್ರಿಯವಾಗಿವೆ. ಕನ್ನಡ, ಕನ್ನಡ ಕನ್ನಡಿಗರು, ಪ್ರತಿಲಿಪಿ ಕನ್ನಡ, ಕನ್ನಡ ಮಧುರ ಚಿತ್ರಗೀತೆಗಳು, ಕನ್ನಡ ನಾಡಿ, ಕನ್ನಡ ಚಿತ್ರ ಬರಹಗಳು... ಹೀಗೆ ಅನೇಕ ಫೇಸ್‌ಬುಕ್‌ ಪುಟಗಳು ಇವೆ. ಇಲ್ಲೆಲ್ಲ ಕನ್ನಡ ಕುರಿತ ನುಡಿಮುತ್ತುಗಳು, ಕನ್ನಡ ಚಿತ್ರಗೀತೆಗಳು, ಕನ್ನಡದ ಕುರಿತ ಅಪರೂಪದ ಬರಹಗಳು, ಕಥೆಗಳು, ಕವನಗಳು ಇವೆ.

ಇದೇ ರೀತಿ ಪ್ರಮುಖ ಮಾಧ್ಯಮವಾದ ‘ಯುಟ್ಯೂಬ್‌’ನಲ್ಲೂ ಕನ್ನಡ ಪರ ಧ್ವನಿ ಹೆಚ್ಚು ಪ್ರಬಲವಾಗಿಯೇ ಕೇಳಿ ಬರುತ್ತಿದೆ. ಕನ್ನಡ ರಾಜ್ಯೋತ್ಸವ, ಜಯ ಜಯ ಕನ್ನಡ, ಕನ್ನಡ ರಾಜ್ಯೋತ್ಸವದ ಹಾಡುಗಳು, ಕನ್ನಡ ನಾಡು ನುಡಿಗಳ ಹಾಡುಗಳು ಈ ಎಲ್ಲವೂ ಕನ್ನಡ ಕುರಿತ ಭಾವಗೀತೆಗಳು ಹಾಗೂ ಸಿನಿಮಾ ಗೀತೆಗಳನ್ನು ಒಂದು ಸೂರಿನಡಿ ಕೇಳುವ ಹಾಗೂ ನೋಡುವ ಭಾಗ್ಯವನ್ನು ಕರುಣಿಸಿವೆ.

ಇವೆಲ್ಲವೂ ಯುವಕರಿಗೆ, ದೊಡ್ಡವರಿಗೆ, ಹಿರಿಯರಿಗೆ ತೀರಾ ಅಪ್ಯಾಯಮಾನವಾಗಿ ಕಂಡು ಬಂದರೆ, ಮಕ್ಕಳಲ್ಲೂ ಕನ್ನಡ ಜಾಗೃತಿ ಮೂಡಿಸುವ ಹಲವು ವಿಡಿಯೊಗಳು, ಹಾಡುಗಳು ಯೂಟ್ಯೂಬ್‌ನಲ್ಲಿವೆ. ‘ಇನ್ಫೋಬೆಲ್ಸ್’ ಹೆಸರಿನಡಿ ನೂರಾರು ಕನ್ನಡ ಗೀತೆಗಳು, ವಿಡಿಯೊಗಳು, ಕಾರ್ಟೂನ್‌ಗಳು ಇಲ್ಲಿವೆ. ಶಿಶುವಿಹಾರದ ಪದ್ಯದಿಂದ ಹಿಡಿದು ಅನೇಕ ಹಾಡುಗಳಿಗೆ ಕಾರ್ಟೂನ್‌ಗಳನ್ನು ಇಲ್ಲಿ ಸೇರಿಸಲಾಗಿದೆ. ಇವು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಇದರಲ್ಲಿನ ‘ಚಿನ್ನುಮುನ್ನು’ ಎಂಬ ಪರಿಕಲ್ಪನೆಯ ಕಾರ್ಟೂನ್‌ಗಳು ಕನ್ನಡತನವನ್ನು ಬಡಿದೆಬ್ಬಿಸುವಂತಿವೆ. ಇಂಗ್ಲೀಷ್‌ ಗೀತೆಗಳು, ಹಿಂದಿ ಹಾಡುಗಳ ಜಮನಾದಲ್ಲಿ ಕನ್ನಡದ ಕಂಪನ್ನು ಉಳಿಸುವ ಕೆಲಸವನ್ನು ಇವು ಸಮರ್ಥವಾಗಿ ನಿರ್ವಹಿಸುತ್ತಿವೆ.

ಒಮ್ಮೆ ಮಕ್ಕಳಿಗೆ ಇದರ ಗೀಳು ಹತ್ತಿದರೆ ಸುಲಭವಾಗಿ ಅವರು ಇದನ್ನು ಬಿಡಲೊಲ್ಲರು. ಈ ಮೂಲಕವಾದರೂ ಕನ್ನಡದ ಹಾಡುಗಳು ಮಕ್ಕಳ ಕಿವಿಯ ಮೇಲೆ ಬೀಳುತ್ತಿದ್ದರೆ ಕನ್ನಡತನವನ್ನು ಅವರು ಸುಲಭವಾಗಿ ಬಿಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT