ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಶವಿಜ್ಞಾನ ಕಲಿಕೆಗೆ ಆ್ಯಪ್‌ಗಳು

Last Updated 20 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಅಂಗಾಂಶಗಳನ್ನು ಅಧ್ಯಯನ ಮಾಡುವ ಜೀವವಿಜ್ಞಾನ ಶಾಖೆಗೆ ಅಂಗಾಂಶವಿಜ್ಞಾನ ಅಥವಾ ಊತವಿಜ್ಞಾನ (ಹಿಸ್ಟಾಲಜಿ) ಎನ್ನುತ್ತಾರೆ. ಒಂದೇ ಮೂಲದಲ್ಲಿ ಹುಟ್ಟಿದ ಒಂದೇ ರೀತಿಯ ರಚನೆಯುಳ್ಳ ಹಾಗೂ ಒಂದೇ ರೀತಿಯ ಕಾರ್ಯವನ್ನು ಮಾಡುವ ಜೀವಕೋಶಗಳ ಸಮೂಹಕ್ಕೆ ಅಂಗಾಂಶ ಎಂದು ಹೆಸರು.

ಇವು ಸಸ್ಯ ಮತ್ತು ಪ್ರಾಣಿ ಎರಡರಲ್ಲೂ ಕಾಣಿಸುವುದರಿಂದ ಸಸ್ಯ ಅಂಗಾಂಶ, ಪ್ರಾಣಿ ಅಂಗಾಂಶ ಎಂದು ವಿಂಗಡಿಸಲಾಗಿದೆ. ಸಸ್ಯ ಅಂಗಾಂಶಗಳು ಪ್ರಾಣಿ ಅಂಗಾಂಶಗಳಿಗಿಂತ ಭಿನ್ನವಾಗಿರುತ್ತವೆ. ಪ್ರತಿ ಅಂಗಾಂಶ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅವುಗಳ ಕಾರ್ಯಕ್ಕೆ ಅನುಗುಣವಾದ ರಚನೆಯನ್ನು ಹೊಂದಿರುತ್ತವೆ.

ಇಂತಹ ಅಂಗಾಂಶಗಳ ಅಧ್ಯಾಯನಕ್ಕೆ ನೆರವಾಗುವ ಹಲವು ಕಿರುತಂತ್ರಾಂಶಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿವೆ. ಗುಣಮಟ್ಟದ ಕಲಿಕಾ ಸಂಪನ್ಮೂಲಗಳನ್ನು ಹೊಂದಿರುವ ಕೆಲವು ಕುರಿತು ನೋಡೋಣ.AnatLab Histology: ಅಲ್ಟ್ರಾ ಹೈ ರೆಸಲ್ಯೂಶನ್ ಹೊಂದಿರುವ ಮೈಕ್ರೊಸ್ಕೋಪಿಕ್ ಸ್ಲೈಡ್ ಚಿತ್ರಗಳನ್ನು ಒಳಗೊಂಡ ಉಪಯುಕ್ತ ಆ್ಯಪ್. ಕೆಲವು ಅಂಗಾಂಶಗಳ ಚಿತ್ರಗಳನ್ನು ಅಳವಡಿಸಲಾಗಿದ್ದು, ಅವುಗಳ ವಿವರಣೆ ಮತ್ತು ಮಾಹಿತಿ ಒಳಗೊಂಡಿದೆ. ಮನುಷ್ಯನ ದೇಹದ ಕೆಲವು ಅಂಗಾಂಗಗಳ ಮಾಹಿತಿಯನ್ನೂ ನೋಡಬಹುದು. ಅಂಗಾಂಶಗಳನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಂತೆ ಅನುಭವ ನೀಡುತ್ತದೆ. ಜೀವವಿಜ್ಞಾನ ಮತ್ತು ಅಂಗಾಂಶವಿಜ್ಞಾನ ಕಲಿಕಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಸಂಶೋಧಕರಿಗೆ ಉಪಯುಕ್ತವಾಗಿವೆ. Eolas Technologies Inc.ಎಂಬ ಕಂಪನಿ ಇದನ್ನು ರಚಿಸಿದೆ.

HistoGrams: ಅಂಗಾಂಶವಿಜ್ಞಾನದ ಹಲವು ವಿಷಯಗಳನ್ನು ಒಳಗೊಂಡಿದ್ದು, ನೋಟ್ಸ್‌ಗಳು ಮತ್ತು ಕೆಲವು ಪ್ರಮುಖ ಚಿತ್ರಗಳು ಹಾಗೂ ರೇಖಾಚಿತ್ರಗಳನ್ನು ಈ ಕಿರುತಂತ್ರಾಂಶದಲ್ಲಿ ಅಳವಡಿಸಲಾಗಿದೆ. 130ಕ್ಕೂ ಹೆಚ್ಚು ರೇಖಾಚಿತ್ರಗಳನ್ನು, ಪುನಾರವರ್ತನೆಗೆ ಕೆಲವು ಟಿಪ್ಪಣಿಗಳು ಮತ್ತು ಪರೀಕ್ಷೆಗೆ ಬೇಕಾದ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಲಾಗಿದೆ. ಪ್ರಾಣಿ ಅಂಗಾಂಶಗಳ ಅದರಲ್ಲೂ ಮನುಷ್ಯನ ಅಂಗಾಂಶಗಳ ಅತ್ಯುತ್ತಮ ಚಿತ್ರಗಳನ್ನು ನೋಡಬಹುದು. ಅಂಗಾಂಶಗಳ ತಜ್ಞ ಡಾ. ವೈರೆನ್ ಕರಿಯಾ (viren kariya) ಇದನ್ನು ರಚಿಸಿದ್ದಾರೆ.

Organ Flashcards Histology: 180ಕ್ಕೂ ಹೆಚ್ಚು ಅಂಗಾಂಗಗಳ ಫ್ಲಾಶ್‌ಕಾರ್ಡ್‌ಗಳ ಮೂಲಕ ಮನುಷ್ಯನ ಅಂಗ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುವ ಉಪಯುಕ್ತ ಆ್ಯಪ್. ಅಂಗಾಂಶ ಚಿತ್ರಗಳ ಜೊತೆಗೆ ಅವುಗಳ ಮಹತ್ವ ಮತ್ತು ಕಾರ್ಯಗಳ ಕುರಿತ ಮಾಹಿತಿಯನ್ನು ನೀಡುತ್ತದೆ. ಜೀರ್ಣಕ್ರಿಯೆ, ಅಂತಃಸ್ರಾವಕ, ಜನನೇಂದ್ರಿಯಗಳು, ದುಗ್ಧರಸ ಮಂಡಲ ವ್ಯವಸ್ಥೆ ಮತ್ತು ಇತ್ಯಾದಿ ಅಂಗಾಂಶಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯುಳ್ಳ ಫ್ಲಾಶ್‌ ಕಾರ್ಡ್‌ಗಳನ್ನು ಅಳವಡಿಸಿದ್ದಾರೆ. ಯೂನಿವರ್ಸಿಟಿ ಆಫ್ ವೆಸ್ಟ್ರನ್ ಆಸ್ಟ್ರೇಲಿಯಾ ಅವರ ಮಾರ್ಗದರ್ಶನದಲ್ಲಿ MedApp Tek ಎಂಬ ಸಂಸ್ಥೆ ಈ ಆ್ಯಪ್‌ ರಚಿಸಿದೆ.

Histology Lite - SecondLook: ಅಂಗಾಂಶ ವ್ಯವಸ್ಥೆ ಮತ್ತು ರಚನೆ ಕುರಿತು ಮಾಹಿತಿ ನೀಡುವ ಆ್ಯಪ್. ಚಿತ್ರಗಳು, ಪ್ರಶ್ನೋತ್ತರಗಳು, ಅಭ್ಯಾಸ ಪರೀಕ್ಷೆಗಳು, ಇತ್ಯಾದಿ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಿದ್ದಾರೆ. ಮನುಷ್ಯನ ಪ್ರಮುಖ ಅಂಗಾಂಶಗಳು ಮತ್ತು ಅಂಗಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆಯಬಹುದು.
Body tissues: ದೇಹದ ಅಂಗಾಂಶಗಳ ವಿವರಣೆಯನ್ನು ನೀಡುವ ಉಪಯುಕ್ತ ಆ್ಯಪ್. ಅಂಗಾಂಗಗಳ ಸಂಪೂರ್ಣ ಮಾಹಿತಿಯನ್ನು ನೀಡುವ ಪುಸ್ತಕವಾಗಿದ್ದು, ಬೇಕಾದ ಪಠ್ಯವನ್ನು ಹುಡುಕಬಹುದು. ಸಸ್ಯ ಮತ್ತು ಮನುಷ್ಯನಲ್ಲಿ ಕಂಡುಬರುವ ಅಂಗಾಂಶಗಳ ಕುರಿತು ಮಾಹಿತಿ ಪಡೆಯಬಹುದು. ಸಸ್ಯಗಳಲ್ಲಿ ಕಂಡುಬರುವ ವರ್ಧನಾ ಅಂಗಾಂಶ ಮತ್ತು ಶಾಶ್ವತ ಅಂಗಾಂಶ ಹಾಗೂ ಪ್ರಾಣಿ, ಮನುಷ್ಯನಲ್ಲಿ ಕಂಡುಬರುವ ಅನುಲೇಪಕ, ಸ್ನಾಯು, ಸಂಯೋಜಕ ಮತ್ತು ನರ ಅಂಗಾಂಶಗಳ ಕುರಿತು ಪಠ್ಯ ಸಂಪನ್ಮೂಲಗಳನ್ನು ಅಳವಡಿಸಲಾಗಿದೆ. Kirill Sidorov ಎಂಬ ಶೈಕ್ಷಣಿಕ ಸಂಸ್ಥೆ ಇದನ್ನು ರಚಿಸಿದೆ.

Connective tissue: ಪ್ರಾಣಿಗಳ ದೇಹದಲ್ಲಿ ಕಂಡುಬರುವ ಅಂಗಾಂಶಗಳಿಗೆ ಸಂಬಂಧಿಸಿದ್ದು, ಅಂಗಾಂಶಗಳನ್ನು ಜೋಡಿಸುವ ಅಥವಾ ಬಂಧಿಸುವ ವಿಷಯಗಳನ್ನು ತಿಳಿಸುವ ಪುಸ್ತಕ ರೂಪದ ಉಪಯುಕ್ತ ಆ್ಯಪ್. ಮೂಳೆ, ಮೃದ್ವಸ್ಥಿ, ಅಂತರಾವಕಾಶೀಯ ಅಂಗಾಂಶ ಇತ್ಯಾದಿ ಸಂಯೋಜಕ ಅಂಗಾಂಶಗಳ ಕಲಿಕೆಗೆ ಉಪಯುಕ್ತ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು referencehunt ಎಂಬ ಕಂಪನಿಯ ಆ್ಯಪ್.
ಇವಷ್ಟೇ ಅಲ್ಲದೆ, ಅಂಗಾಂಶ ವಿಜ್ಞಾನದ ಕಲಿಕೆಗೆ ಇನ್ನೂ ಕೆಲವು ಉಪಯುಕ್ತ ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT