ಗುರುವಾರ , ನವೆಂಬರ್ 21, 2019
27 °C

ಆರಿಗಾಮಿ, ಕಾಗದದಿಂದಲೇ ಅರಳುವ ವಿಶಿಷ್ಟ ಕಲೆ

Published:
Updated:

ಬಣ್ಣ ಬಣ್ಣದ ಹಾಳೆಗಳನ್ನು ಬಳಸಿಕೊಂಡು, ದೋಣಿ ಮಾಡಿ ನೀರಿಗೆ ಬಿಡುವುದು, ರಾಕೆಟ್‌ ಮಾಡಿ ಗಾಳಿಯಲ್ಲಿ ಹಾರಿಸುವುದು, ಗೊಂಬೆಗಳನ್ನು ಮಾಡಿ ಆಡುವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಮೋಜು. ಹಾಳೆಗಳಿಂದ ಈ ರೀತಿ ಕಲಾಕೃತಿಗಳನ್ನು ತಯಾರಿಸುವುದೇ ಆರಿಗಾಮಿ ಕಲೆ. ಚಿಟ್ಟೆಗಳು, ಹಕ್ಕಿಗಳು, ಪ್ರಾಣಿಗಳು, ವಸ್ತು, ಉಪಕರಣಗಳು ಹೀಗೆ ಹಲವು ಆಕೃತಿಗಳನ್ನು ಹಾಳೆಯಲ್ಲಿ ತಯಾರಿಸಬಹುದು.

ಓರಿಗಾಮಿ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಅಮೆರಿಕದಲ್ಲಿ ಮೊದಲ ಬಾರಿಗೆ ಆರಿಗಾಮಿ ಸಂಘ ಸ್ಥಾಪಿಸಿ, ಈ ಕಲೆಯ ಕುರಿತು ಮಾಹಿತಿ ನೀಡಿದ ಲಿಲ್ಲಿಯನ್ ಓಪೆನ್‌ಹೀಮರ್ ಅವರ ಜನ್ಮದಿವನ್ನೇ ಆರಿಗಾಮಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವರು ಬ್ರಿಟಿಷ್‌ ಆರಿಗಾಮಿ ಸೊಸೈಟಿಯನ್ನೂ ಸ್ಥಾಪಿಸಿದರು.

ಓರಿಗಾಮಿ, ಈ ಹೆಸರು ಹೆಚ್ಚು ಜನರಿಗೆ ಪರಿಚಯವಿಲ್ಲದಿದ್ದರೂ, ಓರಿಗಾಮಿ ಎಂದರೆ ಪುಟ್ಟ ಮಕ್ಕಳಿಗೆ ಪ್ರೀತಿ. ಪ್ರತಿ ವರ್ಷ ನವೆಂಬರ್ 11ರಂದು ವಿಶ್ವ ಓರಿಗಾಮಿ ದಿನ ಆಚರಿಸಲಾಗುತ್ತಿದೆ. ಈ ದಿನದ ಅಂಗವಾಗಿ ಓರಿಗಾಮಿ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಶಾಲಾ ದಿನಗಳಲ್ಲಿ ಪುಸ್ತಕಗಳಲ್ಲಿರುವ ಹಾಳೆಗಳನ್ನು ಹರಿದು, ದೋಣಿ ಮಾಡಿ ನೀರಿಗೆ ಬಿಟ್ಟಿದ್ದು, ರಾಕೆಟ್‌ ಮಾಡಿ ಗಾಳಿಯಲ್ಲಿ ಹಾರಿಸಿದ್ದು, ಗೊಂಬೆಗಳನ್ನು ಮಾಡಿ ಆಡಿದ್ದು ಈಗಲೂ ನೆನಪಿರುತ್ತದೆ. ಹಾಳೆಗಳಿಂದ ಈ ರೀತಿ ಕಲಾಕೃತಿಗಳನ್ನು ತಯಾರಿಸುವುದೇ ಓರಿಗಾಮಿ ಕಲೆ. ಚಿಟ್ಟೆಗಳು, ಹಕ್ಕಿಗಳು, ಪ್ರಾಣಿಗಳು, ವಸ್ತು, ಉಪಕರಣಗಳು ಹೀಗೆ ಹಲವು ಆಕೃತಿಗಳನ್ನು ಹಾಳೆಯಲ್ಲಿ ತಯಾರಿಸಬಹುದು.

ಓರಿಗಾಮಿ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಅಮೆರಿಕದಲ್ಲಿ ಮೊದಲ ಬಾರಿಗೆ ಓರಿಗಾಮಿ ಸಂಘ ಸ್ಥಾಪಿಸಿ, ಈ ಕಲೆಯನ್ನು ವಿಸ್ತರಿಸಿದ ಲಿಲ್ಲಿಯನ್ ಓಪೆನ್‌ಹೀಮರ್ ಅವರ ಜನ್ಮದಿವನ್ನೇ ‘ಓರಿಗಾಮಿ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವರು ಬ್ರಿಟಿಷ್‌ ಓರಿಗಾಮಿ ಸೊಸೈಟಿಯನ್ನೂ ಸ್ಥಾಪಿಸಿದರು.

ಇತಿಹಾಸ

ಯುರೋಪ್‌, ಚೀನಾ ಮತ್ತು ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕಲೆ ಹೆಚ್ಚು ಜನಪ್ರಿಯ. ಈ ದೇಶಗಳಲ್ಲಿ ಜನ್ಮದಿನದಿಂದ ಹಿಡಿದು ಜೀವನದ ಅಂತಿಮ ಯಾತ್ರೆಯ ವರೆಗೆ ಎಲ್ಲ ಸಮಾರಂಭಗಳಲ್ಲೂ ಓರಿಗಾಮಿ ಎದ್ದು ಕಾಣುತ್ತದೆ.

ಯುರೋಪ್‌ನಲ್ಲಿ 17ನೇ ಮತ್ತು 18ನೇ ಶತಮಾನದಲ್ಲಿ ಓರಿಗಾಮಿ ಕಲೆ ಹೆಚ್ಚು ಬಳಕೆಗೆ ಬಂತು. 1800ರಲ್ಲಿ ಜಪಾನ್‌ನಲ್ಲಿ ಓರಿಗಾಮಿ ಹೊಸ ರೂಪ ಪಡೆದು ಬಳಕೆಗೆ ಬಂತು. ಪ್ರಸ್ತುತ ವಿಶ್ವದಾದ್ಯಂತ ಓರಿಗಾಮಿ ಬಳಕೆಯಲ್ಲಿದೆ.

ಓರಿಗಾಮಿ ದಿನ ಆಚರಿಸುವುದು ಹೇಗೆ?

ಹಾಳೆಗಳಿಂದ ವಿವಿಧ ಆಕೃತಿಗಳನ್ನು ತಯಾರಿಸಿ ಖುಷಿಪಡುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ. ಹಾಳೆಯಲ್ಲಿ ಚಿತ್ರಗಳನ್ನು ತಯಾರಿಸುವುದು ಸುಲಭ ಎನಿಸಿದರೂ ಕಲಿಯುವವರೆಗೂ ತ್ರಾಸದಾಯಕವೇ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಹಲವು ವಿಡಿಯೋಗಳು ಸಿಗುತ್ತವೆ. ಕೆಲವು ಜಾಲತಾಣಗಳಲ್ಲೂ ಮಾಹಿತಿ ಸಿಗುತ್ತದೆ. ಓರಿಗಾಮಿ ಬಗ್ಗೆ ತಿಳಿಸುವ ಪುಸ್ತಕಗಳೂ ಇವೆ. ಈ ಬಗ್ಗೆ ಹೆಚ್ಚು ತಿಳಿದುಕೊಂಡು ಹೊಸದನ್ನು ಕಲಿಯಬಹುದು.

ಶಾಲೆಯಲ್ಲಿ ಅಥವಾ ಮನೆಗಳಲ್ಲಿ ಸಭೆ–ಸಮಾರಂಭಗಳಿದ್ದರೆ, ನವೇ ಓರಿಗಾಮಿಗಳನ್ನು ತಯಾರಿಸಿ ಅಲಂಕರಿಸಬಹುದು. ಇದನ್ನೇ ವಿಶೇಷ ಹವ್ಯಾಸವಾಗಿ ರೂಢಿಸಿಕೊಂಡು ರಂಜಿಸಬಹುದು.

ಸ್ವಾರಸ್ಯಕರ ಸಂಗತಿಗಳು

ಜಪಾನ್‌ ಓರಿ ಮತ್ತು ಕಾಮಿ ಎಂಬ ಪದಗಳಿಂದ ಓರಿಗಾಮಿ ಶಬ್ದ ರೂಪುಗೊಂಡಿದೆ. ಓರಿ ಎಂದರೆ ಮಡಚಿದ, ಕಾಮಿ ಎಂದರೆ ಹಾಳೆ ಎಂದು ಅರ್ಥ. ಜಪಾನ್‌ನ ಸಮುರೈನಲ್ಲಿ ಓರಿಗಾಮಿ ಕಲಾಕೃತಿಗಳನ್ನೇ ಅದೃಷ್ಟದ ಸಂಕೇತವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.

ಕತ್ತರಿ, ಕತ್ತಿ, ಅಂಟು, ಯಾವುದೇ ವಸ್ತು ಅಥವಾ ಪದಾರ್ಥ ಬಳಸದೇ ಹಾಳೆಯಲ್ಲಿ ಕಲಾಕೃತಿ ತಯಾರಿಸಬೇಕು ಎಂಬುದು ಮೊದಲ ನಿಯಮವಾಗಿತ್ತು. ಆದರೆ ಈಗ ಅಗತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅತಿಹೆಚ್ಚು ಬಾರಿ ಮಡಚಿದ, ಅತಿ ಪುಟ್ಟ ಕಲಾಕೃತಿ, ಅತಿ ದೊಡ್ಡ ಕಲಾಕೃತಿ, ಅತಿ ವೇಗವಾಗಿ ಮಡಚಿ ತಯಾರಿಸಿ ಕಲಾಕೃತಿ... ಹೀಗೆ 12ಕ್ಕೂ ಹೆಚ್ಚು ಓರಿಗಾಮಿ ಕಲಾಕೃತಿ ಕುರಿತ ಗಿನ್ನಿಸ್‌ ದಾಖಲೆಗಳು ಇವೆ.

ದಾಖಲೆಗಳ ಪ್ರಕಾರ 1490ರಲ್ಲಿ ಜಾನ್ಸ್‌ ಡಿ ಸ್ಯಾಕ್ರೊಬೆಸ್ಕೊ ಎಂಬುವವರು ಮೊದಲ ಬಾರಿಗೆ ಓರಿಗಾಮಿ ದೋಣಿಗಳನ್ನು ತಯಾರಿಸಿ ವೆನಿಸ್‌ ನಗರದಲ್ಲಿ ನೀರಿನಲ್ಲಿ ತೇಲಿಬಿಟ್ಟರು ಎಂದು ಹೇಳಲಾಗುತ್ತದೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ‘ಅನಿಮಲ್ಸ್ ಔಟ್‌ ಆಫ್ ಪೇಪರ್ಸ್‌’ ಎಂಬ ವಿಶೇಷ ಓರಿಗಾಮಿ ಉತ್ಸವವನ್ನು ಆಚರಿಸಲಾಗುತ್ತದೆ. ಜಪಾನ್‌ನ ಹಿರೊಶಿಮಾ ನಗರದ ಮೇಲೆ ನಡೆದ ಅಣುಬಾಂಬ್‌ ದಾಳಿಗೆ 50 ವರ್ಷಗಳು ಸಂದ ಸಂದರ್ಭದಲ್ಲಿ ಮೃತರನ್ನು ಸ್ಮರಿಸಲು ಸುಮಾರು 2.5 ಲಕ್ಷ (ಪೇಪರ್‌ ಕ್ರೇನ್‌ಗಳನ್ನು) ತಯಾರಿಸಿದ್ದು ಈ ವರೆಗಿನ ದಾಖಲೆ. ಎಲ್ಲ ಹಾಳೆಗಳಲ್ಲೂ ಶಾಂತಿ ಸಂದೇಶಗಳನ್ನು ಬರೆಯಲಾಗಿತ್ತು.

ಪ್ರತಿಕ್ರಿಯಿಸಿ (+)