ಪ್ರಜಾವಾಣಿ ಕ್ವಿಜ್

7

ಪ್ರಜಾವಾಣಿ ಕ್ವಿಜ್

Published:
Updated:

1. ಬೇಕ್‍ಲೈಟ್ ಅನ್ನು ಇವುಗಳಲ್ಲಿ ಯಾವುದರ ತಯಾರಿಕೆಗೆ ವಿಶೇಷವಾಗಿ ಉಪಯೋಗಿಸಲಾಗುತ್ತದೆ?

ಅ) ಹಾಲಿನ ಕವರ್ ಆ) ಬಿಂದಿಗೆಗಳು ಇ) ಗುಂಡಿಗಳು ಈ) ಪಾತ್ರೆಗಳ ಹಿಡಿಕೆಗಳು

2. ಆಕಾಶವಾಣಿಯ ‘ಸಿಗ್ನಲ್ ಟ್ಯೂನ್ ’ ಆಗಿ ಯಾರ ವಯಲಿನ್‌ ವಾದನದ ತುಣುಕನ್ನು ಬಳಸಲಾಗುತ್ತಿದೆ?

ಅ) ಪಿಟೀಲು ಚೌಡಯ್ಯ
ಆ) ಕುನ್ನಕುಡಿ ವೈದ್ಯನಾಥನ್ 
ಇ) ದ್ವಾರಂ ವೆಂಕಟಸ್ವಾಮಿ ನಾಯ್ಡು
ಈ) ಲಾಲ್ಗುಡಿ ಜಯರಾಮನ್

3. ಗಾಂಧೀಜಿಯವರು ಮೈಸೂರು ಸಂಸ್ಥಾನಕ್ಕೆ ಬಂದಿದ್ದಾಗ ಯಾವ ಬೆಟ್ಟದಲ್ಲಿ ತಂಗಿದ್ದರು?

ಅ) ನಂದಿಬೆಟ್ಟ
ಆ) ಮುಳ್ಳಯ್ಯನ ಗಿರಿ
ಇ) ಕುದುರೆಮುಖ ಈ) ಶ್ರವಣಬೆಳಗೊಳ

4. ಸಲಿಂಗಕಾಮವನ್ನು ಕುರಿತಾದ ಐ.ಪಿ.ಸಿ.ಯ ಎಷ್ಟನೇ ಸೆಕ್ಷನ್ ಅನ್ನು ಸುಪ್ರೀಂಕೋರ್ಟ್ ಭಾಗಶಃ ರದ್ದು ಮಾಡಿದೆ?

 ಅ) 267 ಆ) 377 ಇ) 307 ಈ) 357

5. ‘ಹೇಳತೇನ ಕೇಳ ’ ಯಾರು ಬರೆದ ಕೃತಿ?

ಅ) ಚಂದ್ರಶೇಖರ ಪಾಟೀಲ
ಆ) ಚಂದ್ರಶೇಖರ ಕಂಬಾರ
ಇ) ಚಂದ್ರಕಾಂತ ಕುಸನೂರ
ಈ) ಚಂದ್ರಶೇಖರ ಹಳೆಮನಿ

6. ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಬೇಕಾದರೆ ಆಹಾರದಲ್ಲಿ ಯಾವುದರ ಪ್ರಮಾಣ ಸಾಕಷ್ಟಿರಬೇಕು?

ಅ) ಉಪ್ಪು ಆ) ಸಕ್ಕರೆ
ಇ) ನಾರು ಈ) ಅಯೋಡಿನ್

7. ವಿಕ್ಟೋರಿಯಾ ಗೌರಮ್ಮ ಕೊಡಗಿನ ಯಾವ ಅರಸನ ಮಗಳು?

ಅ) ಲಿಂಗರಾಜ ಆ) ದೊಡ್ಡ ವೀರರಾಜ
ಇ) ಚಿಕ್ಕ ವೀರರಾಜ
ಈ) ಮುದ್ದು ರಾಜ

8. ಇವುಗಳಲ್ಲಿ ಯಾವುದು ಮುಖ್ಯ ಉಪನಿಷತ್ತುಗಳ ಪಟ್ಟಿಯಲ್ಲಿ ಸೇರಿಲ್ಲ?

ಅ) ಕೇನ ಆ) ಮುಂಡಕ
ಇ) ಸ್ಕಂದ ಈ) ಛಾಂದೋಗ್ಯ

9. ಕಾಡು ಕಡಿದು ಮಾಡುವ ‘ವರ್ಗಾವಣೆ ಬೇಸಾಯ ಪದ್ಧತಿ’ಯನ್ನು ಹೀಗೂ ಕರೆಯುತ್ತಾರೆ.

ಅ) ಸ್ಥಿರ ಬೇಸಾಯ ಆ) ಕುಮರಿ ಬೇಸಾಯ
ಇ) ಮಿಶ್ರ ಬೇಸಾಯ
ಈ) ಜೀವನಾಧಾರ ಬೇಸಾಯ

10. ಇವುಗಳಲ್ಲಿ ಯಾವುದು ಹನ್ನೊಂದು ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರವಲ್ಲ?

ಅ) ದ ಲಾರ್ಡ್ ಆಫ್ ದ ರಿಂಗ್ಸ್
ಆ) ಗ್ಲೇಡಿಯೇಟರ್
ಇ) ಟೈಟಾನಿಕ್ ಈ) ಬೆನ್‍ಹರ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. 1986 2. ಐಹೊಳೆ 3. ಡ್ಯಾನಿಯಲ್ ರ್ಯಾಡ್‍ಕ್ಲಿಫ್ 4. ಥೈರಾಯ್ಡ್‌ 5. ಡಿ. ಆರ್. ನಾಗರಾಜ್
6. ಚೌರಿಚೌರ 7. 13ನೇ ಪೋಪ್ ಗ್ರೆಗೊರಿ 8. ವಿಶಿಷ್ಟಾದ್ವೈತ 9. ನವಿಲುಕೋಸು 10. ಸಸ್ಯಶಾಸ್ತ್ರ

 

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !