ಗುರುವಾರ , ಮೇ 28, 2020
27 °C

ಗುಣಮಟ್ಟದ ಶಿಕ್ಷಣವೇ ‘ದೀಕ್ಷಾ’ ಗುರಿ

ಪ್ರಭಾಕರ ಆರ್‌. Updated:

ಅಕ್ಷರ ಗಾತ್ರ : | |

ಇಂದು ಶಿಕ್ಷಣದ ಮೂಲಉದ್ದೇಶ ಕಲಿಕೆ ಎಂಬುದು ಮರೆಯಾಗಿ ಕೇವಲ ಸ್ಪರ್ಧೆಯಂತಾಗಿದೆ. ಇದಕ್ಕೆ ಭಿನ್ನವೆಂಬಂತೆ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಸ್ನೇಹಿ ಬೋಧನಾ ವಿಧಾನಗಳನ್ನು ಮೇಳೈಸಿಕೊಂಡು ಸ್ಥಾಪನೆಯಾದ ಸಂಸ್ಥೆಯೇ ‘ದೀಕ್ಷಾ’.

ಕೈತುಂಬ ಸಂಬಳ ಸಿಗುವ ಉದ್ಯೋಗವನ್ನು ತೊರೆದು, ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಷೇತ್ರವನ್ನು ಆಯ್ದುಕೊಂಡ ಶ್ರೀಧರ್ ಅವರ ಕನಸಿನ ಕೂಸು ಈ ದೀಕ್ಷಾ. 

‘ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಆಲೋಚನೆಗಳನ್ನು ಬೆಳೆಸಿ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಉತ್ತಮ ಕಲಿಕೆಯ ವಾತಾವರಣ ಕಲ್ಪಿಸಿ, ಅವರ ಭವಿಷ್ಯಕ್ಕೆ ದಾರಿ ದೀಪವಾಗುವ ಮೂಲಕ ಉತ್ತಮ ಸಮಾಜದ ನಿರ್ಮಾಣವೇ ದೀಕ್ಷಾ ಸಂಸ್ಥೆಯ ಗುರಿ’ ಎನ್ನುತ್ತಾರೆ. ಸಂಸ್ಥೆಯ ಸಂಸ್ಥಾಪಕ ಡಾ. ಜಿ. ಶ್ರೀಧರ್ 

‘ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ’ಯ ಪ್ರಾಯೋಜಕತ್ವವನಿನು ವಹಿಸಿಕೊಂಡಿರುವ ‘ದೀಕ್ಷಾ’ ವಿದ್ಯಾರ್ಥಿಗಳಲ್ಲಿರುವ ಬೌದ್ಧಿಕ ಪ್ರತಿಭೆಯನ್ನು ಗುರುತಿಸಲು ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಪ್ರತಿವರ್ಷದಂತೆ ಈ ವರ್ಷವೂ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌–2019’ 5ನೇ ಆವೃತ್ತಿ ಇದೇ ಜನವರಿ 8ರಿಂದ 24 ರವರೆಗೆ ನಡೆಯಲಿದೆ. ವಲಯಮಟ್ಟದಲ್ಲಿ ನಡೆಯುವ ಕ್ವಿಜ್‌ನ ಸೆಮಿಫೈನಲ್‌ ಹಂತದ ಮೊದಲ ಮೂರು ಸ್ಥಾನ ನಡೆಯುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವಂತೆ, ವೃತ್ತಿಜೀವನದ ಅಸೆಸ್‌ಮೆಂಟ್ ಪರೀಕ್ಷೆಗಳನ್ನು ದೀಕ್ಷಾ ಸಂಸ್ಥೆ ಉಚಿತವಾಗಿ ನಡೆಸಲಿದೆ. 

ದೀಕ್ಷಾ ಸಂಸ್ಥೆಯ ಬಗ್ಗೆ
ವಿನೂತನ ಕಲಿಕಾ ವಿಧಾನಗಳು ಮತ್ತು ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಸಂಸ್ಥೆ ಸ್ಥಾಪನೆಯಾದಾಗಿನಿಂದ 20 ವರ್ಷಗಳ ಅವಧಿಯಲ್ಲಿ ಸುಮಾರು 51 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಸಂಸ್ಥೆಯು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲೂ ಶಿಕ್ಷಣಕೇಂದ್ರಗಳನ್ನು ವಿಸ್ತರಿಸಿದೆ. 

ವಿನೂತನ ಬೋಧನಾ ವಿಧಾನ
‘ಹ್ಯಾರಿಸನ್ ಅಸೆಸ್‌ಮೆಂಟ್’ ವಿಧಾನದ ಮೂಲಕ ಮಕ್ಕಳಲ್ಲಿ, ವಿಷಯವನ್ನು ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಅವರಿಗೆ ಶಿಕ್ಷಣ ನೀಡಲಾಗುತ್ತದೆ. ಅವರ ಮುಂದಿನ ಭವಿಷ್ಯದ ದೃಷ್ಠಿಯಿಂದ ದೀಕ್ಷಾ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದುವ ಅವಧಿಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. 

ಡಿಕೇರ್‌ (dCARE), ಡಿಲೈಫ್ (dLife) ಮುಂತಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದೆ.

ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಎನ್‌ಇಇಟಿ, ಸಿಇಟಿ, ಜಿಇಇ ಮುಂತಾದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಹಾಯಕವಾಗುವಂತೆ ತರಬೇತಿ ನೀಡಲಾಗುತ್ತದೆ. ಓದಿನ ಜೊತೆಗೆ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಅನುಭವಿ ಬೋಧನಾ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು, ಕಲಿಕಾ ಆ್ಯಪ್‌ಗಳು ಹಾಗೂ ಅಧ್ಯಯನ ಪರಿಕರಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ. 


ಡಾ. ಜಿ. ಶ್ರೀಧರ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು