ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗತ್ತಿನ ವಜ್ರದ ರಾಜಧಾನಿ’ ಎಂದು ಹೆಸರಾದ ನಗರ ಯಾವುದು?

Last Updated 20 ನವೆಂಬರ್ 2018, 19:30 IST
ಅಕ್ಷರ ಗಾತ್ರ

1. ‘ಜಗತ್ತಿನ ವಜ್ರದ ರಾಜಧಾನಿ’ ಎಂದು ಹೆಸರಾದ ನಗರ ಯಾವುದು?

ಅ) ಜೈಪುರ

ಆ) ಮುಂಬಯಿ

ಇ) ಲಂಡನ್

ಈ) ಆಂಟ್‌ವರ್ಪ್

2. ಇವುಗಳಲ್ಲಿ ಯಾವುದು ರಕ್ತಕ್ಕೆ ಸಂಬಂಧಿಸಿದ ಕಾಯಿಲೆ ಅಲ್ಲ?

ಅ) ಅನೀಮಿಯಾ

ಆ) ಗೊನೊರಿಯಾ

ಇ) ಹಿಮೋಫೀಲಿಯಾ

ಈ) ಥಾಲಸ್ಮಿಯಾ

3. ಬ್ಯಾಂಕ್‌ಗಳಲ್ಲಿ ಬಳಸುವ ‘ಐ.ಎಫ್.ಎಸ್. ಕೋಡ್’ ಎಂಬುದರ ವಿಸ್ತೃತರೂಪವೇನು?

ಅ) ಇಂಡಿಯನ್ ಫೈನಾನ್ಷಿಯಲ್ ಸಿಸ್ಟಂ ಕೋಡ್

ಆ) ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ಸಿಸ್ಟಂ ಕೋಡ್

ಇ) ಇಂಡಿಯನ್ ಫೈನಾನ್ಷಿಯಲ್ ಸೆಟಪ್ ಕೋಡ್

ಈ) ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ಸೊಸೈಟಿ ಕೋಡ್

4. ‘ಪಿನಾಕಿ’ ಎಂದರೆ ಯಾರು?

ಅ) ಶಿವ

ಆ) ವಿಷ್ಣು

ಇ) ಗರುಡ

ಈ) ದೇವೇಂದ್ರ

5. ಚಲನಚಿತ್ರ ನಟ ಅಂಬರೀಷ್‌ರ ನಿಜವಾದ ಹೆಸರೇನು?

ಅ) ಶ್ರೀನಾಥ್

ಆ) ಲೋಕನಾಥ್

ಇ) ಅಮರನಾಥ್

ಈ) ಗುರುನಾಥ್

6. ಇವುಗಳಲ್ಲಿ ಯಾವುದು ಶಿವರಾಮ ಕಾರಂತರು ಬರೆದ ಕಾದಂಬರಿಯಲ್ಲ?

ಅ) ಇಳೆಯೆಂಬ

ಆ) ಇದ್ದರೂ ಚಿಂತೆ

ಇ) ಗ್ರಾಮಾಯಣ

ಈ) ಕೇವಲ ಮನುಷ್ಯರು

7. ಕರ್ನಾಟಕದಲ್ಲಿ ‘ಭೂ ಸುಧಾರಣಾ ಮಸೂದೆ’ಯನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಯಾರು?

ಅ) ರಾಮಕೃಷ್ಣ ಹೆಗಡೆ

ಆ) ದೇವರಾಜ ಅರಸು

ಇ) ವೀರೇಂದ್ರ ಪಾಟೀಲ್

ಈ) ಕಡಿದಾಳ್ ಮಂಜಪ್ಪ

8) ಗುರಜಾಡ ಅಪ್ಪಾರಾವು ಯಾವ ಭಾಷೆಯ ಹೆಸರಾಂತ ಸಾಹಿತಿ?

ಅ) ಮಲಯಾಳಂ

ಆ) ತೆಲುಗು

ಇ) ಕನ್ನಡ

ಈ) ತಮಿಳು

9. ಹಿಂದೂಸ್ತಾನಿಯ ರಾಗ ‘ಭೈರವ್’ಗೆ ಸಂವಾದಿಯಾದ ಕರ್ನಾಟಕ ಸಂಗೀತದ ರಾಗ ಯಾವುದು?

ಅ) ಆರಭಿ

ಆ) ಮಾಯಾಮಾಳವ ಗೌಳ

ಇ) ವರಾಳಿ

ಈ) ಹಂಸಧ್ವನಿ

10. ಭಾರತೀಯ ಗಣನೆಯ ಪ್ರಕಾರ ಪ್ರತಿ ಋತು ಎಷ್ಟು ಮಾಸಗಳನ್ನು ಹೊಂದಿರುತ್ತದೆ?

ಅ) ಎರಡು

ಆ) ಒಂದು

ಇ) ಮೂರು

ಈ) ನಾಲ್ಕು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಮಹಾಬಲಾದ್ರಿ

2. ಲೈಟ್ ಎಮಿಟಿಂಗ್ ಡೈಯೋಡ್

3. ರಕ್ತದ ಒತ್ತಡ

4. ಅಮೀರ್ ಸಯಾನಿ

5. ಕಂಟ

6. ಗೀತಗೋವಿದಂ

7. ಕ್ವಾಜ್ಡ್

8. ಎಂ.ಎಂ. ಕಲಬುರ್ಗಿ

9. ಲಿರಿಕ್

10. ಅಗಾಥಾ ಕ್ರಿಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT