ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತರಬೇತುದಾರರು ಯಾರು?

Last Updated 25 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

1. ಇತ್ತೀಚೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿ ನೇಮಕಗೊಂಡವರು ಯಾರು?

ಅ) ಗ್ಯಾರಿ ಕ್ರಿಸ್ಟಿ

ಆ) ಡಬ್ಲ್ಯೂ. ವಿ. ರಾಮನ್

ಇ) ವೆಂಕಟೇಶ್ ಪ್ರಸಾದ್

ಈ) ರವಿಶಾಸ್ತ್ರಿ

2. ಯಾವ ಮೂಲವಸ್ತುವು ಕೊಠಡಿಯ ತಾಪಮಾನದಲ್ಲಿ ದ್ರವರೂಪಕ್ಕೆ ಬರುತ್ತದೆ?

ಅ) ಪಾದರಸ

ಆ) ಹೀಲಿಯಂ

ಇ) ಜಲಜನಕ

ಈ) ಇಂಗಾಲ

3. 91ನೇ ಆಸ್ಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿರುವ ಭಾರತೀಯ ಕಿರು ಸಾಕ್ಷ್ಯಚಿತ್ರ ಯಾವುದು?

ಅ) ಪೀಹೂ

ಆ) ಸ್ಕೂಲ್‍ಬ್ಯಾಗ್

ಇ) ಪೀರಿಯೆಡ್‌ ಎಂಡ್ ಆಫ್ ಸೆಂಟೆನ್ಸ್

ಈ) ಮುಲ್ಕ್

4. ಇವರಲ್ಲಿ ಯಾರು ನಾಟಕಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ?

ಅ) ಸಿದ್ದರಾಮ ಜಂಬಲದಿನ್ನಿ

ಆ) ಗರೂಡ ಸದಾಶಿವರಾವ್

ಇ) ಮಹಮದ್ ಪೀರ್

ಈ) ಎಂ. ಗಂಗಾಧರ ರಾಯರು

5. ‘ಅಮ್ಮ ನಿನ್ನ ಎದೆಯಾಳದಲ್ಲಿ...’ ಎಂಬ ಪ್ರಸಿದ್ಧ ಭಾವಗೀತೆ ಯಾರ ರಚನೆ?

ಅ) ಎಚ್.ಎಸ್. ವೆಂಕಟೇಶ ಮೂರ್ತಿ

ಆ) ಲಕ್ಷ್ಮೀನಾರಾಯಣ ಭಟ್ಟ

ಇ) ಬಿ.ಆರ್. ಲಕ್ಷಣರಾವ್

ಈ) ಎಂ.ಎನ್. ವ್ಯಾಸರಾವ್

6. ‘ಇತಿಹಾಸದ ಪಿತಾಮಹ’ ಎಂದು ಯಾರನ್ನು ಕರೆಯಲಾಗುತ್ತದೆ?

ಅ) ಸಾಕ್ರಟಿಸ್

ಆ) ಹೆರಾಡಟಸ್

ಇ) ಪ್ಲೇಟೋ

ಈ) ಪೆಟ್ರಾರ್ಕ್

7. ‘ಪಯೋರಿಯಾ’ ಎಂಬ ಕಾಯಿಲೆ ದೇಹದ ಯಾವ ಭಾಗದಲ್ಲಿ ಕಂಡುಬರುತ್ತದೆ?

ಅ) ಒಸಡು

ಆ) ಕಣ್ಣು

ಇ) ಕಿವಿ

ಈ) ನಾಲಿಗೆ

8) ಜಗತ್ತಿನ ಅತಿ ದೀರ್ಘಕಾಲದಿಂದ ನಿರ್ಮಾಣವಾಗುತ್ತಿರುವ ಚರ್ಚ್ ಯಾವ ನಗರದಲ್ಲಿದೆ?

ಅ) ರೋಮ್

ಆ) ಬಾರ್ಸಿಲೋನಾ

ಇ) ಕೊಲಂಬಿಯಾ

ಈ) ಮಾಸ್ಕೋ

9. ನಾರಾಯಣ ಕಾರ್ತಿಕೇಯನ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?

ಅ) ಫಾರ್ಮುಲಾ ಒನ್ ಕಾರ್ ರೇಸ್

ಆ) ಶೂಟಿಂಗ್

ಇ) ಚೆಸ್

ಈ) ಗಾಲ್ಫ್

10. ‘ಹರಿಕಥಾಮೃತಸಾರ’ ಯಾರು ರಚಿಸಿದ ಕೃತಿ?

ಅ) ವ್ಯಾಸರಾಜರು

ಆ) ವಿಜಯದಾಸರು

ಇ) ನರಹರಿತೀರ್ಥರು

ಈ) ಜಗನ್ನಾಥದಾಸರು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕೇರಳ

2. ಸಿ. ಎಚ್. ಹನುಮಂತರಾಯ

3. ಗರುಡರು

4. ಕರವಾ ಚೌತ್

5. ಮುಸುರಿ ಕೃಷ್ಣಮೂರ್ತಿ

6. ವಾರಣಾಸಿ

7. ಮರಗಳು

8. ಮೀಥೇನ್

9. ಇಬ್ಬರು

10. ಭಾರವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT