ಪ್ರಜಾವಾಣಿ ಕ್ವಿಜ್ 52

7

ಪ್ರಜಾವಾಣಿ ಕ್ವಿಜ್ 52

Published:
Updated:

1. ಇವರಲ್ಲಿ ಯಾರನ್ನು ಸೋಲಿಗರು ತಮ್ಮ ‘ಅಳಿಯ’ನೆಂದು ಭಾವಿಸುತ್ತಾರೆ?

ಅ) ಮಂಟೆಸ್ವಾಮಿ
ಆ) ಜುಂಜಪ್ಪ
ಇ) ಬಿಳಿಗಿರಿರಂಗ
ಈ) ಮಾದೇಶ್ವರ

2. ‘ರೈತರ ಮಿತ್ರ’ ಎಂದು ಕರೆಯಲಾಗುವ ಹುಳು ಯಾವುದು?

ಅ) ಲಾಡಿಹುಳು
ಆ) ಸಗಣಿಹುಳು
ಇ) ಎರೆಹುಳು
ಈ) ಜಂತುಹುಳು

3. ಇವರಲ್ಲಿ ‘ಕನ್ನಡದ ಆದ್ಯ ವಿಜ್ಞಾನ ಬರಹಗಾರ’ ಯಾರು?

ಅ) ಜಿ.ಟಿ. ನಾರಾಯಣರಾವ್
ಆ) ನಂಗಪುರಂ ವೆಂಕಟೇಶ ಅಯ್ಯಂಗಾರ್
ಇ) ಡಿ.ಆರ್. ಬಳೂರಗಿ
ಈ) ಜೆ.ಆರ್. ಲಕ್ಷ್ಮಣ ರಾವ್

4. ಜ್ಯಾಮಿತಿಯ ಪ್ರಕಾರ ‘ಡೊಡೆಕಹೆಡ್ರನ್’ ಎಂಬ ಆಕೃತಿಯಲ್ಲಿ ಎಷ್ಟು ಸಮತಲಗಳಿರುತ್ತವೆ?

ಅ) ಹನ್ನೆರಡು
ಆ) ಹದಿನಾಲ್ಕು
ಇ) ಹದಿನಾರು
ಈ) ಹದಿನೆಂಟು

5. ‘ಹೊಸಗನ್ನಡದ ಅರುಣೋದಯ’ ಯಾರು ರಚಿಸಿದ ಕೃತಿ?

ಅ) ಶ್ರೀನಿವಾಸ ಹಾವನೂರ
ಆ) ರಾ.ಯ. ಧಾರವಾಡಕರ
ಇ) ಹರಿಕೃಷ್ಣ ಭರಣ್ಯ
ಈ) ಎಲ್.ಎಸ್. ಶೇಷಗಿರಿ ರಾವ್

6. ಟೆಸ್ಟ್ ಕ್ರಿಕೆಟ್‍ನಲ್ಲಿ ಮೊತ್ತಮೊದಲ ಶತಕವನ್ನು ಬಾರಿಸಿದ ಭಾರತೀಯ ಕ್ರೀಡಾಪಟು ಯಾರು?

ಅ) ವಿನು ಮಂಕಡ್
ಆ) ಲಾಲಾ ಅಮರನಾಥ್
ಇ) ಸಿ.ಕೆ. ನಾಯ್ಡು
ಈ) ಗವಾಸ್ಕರ್

7. ಧರ್ಮಸಮನ್ವಯವನ್ನು ಸಾರುವ ವಿಜಯನಗರದ ಅರಸನಾದ ಬುಕ್ಕರಾಯನ ಶಾಸನ ಯಾವ ಊರಿನಲ್ಲಿದೆ?

ಅ) ಹಂಪಿ
ಆ) ಶ್ರವಣಬೆಳಗೊಳ
ಇ) ಬೇಲೂರು
ಈ) ನಂದಿ

8) ಪುದೀನಾ ಸೊಪ್ಪಿನಲ್ಲಿರುವ ಪ್ರಮುಖ ಔಷಧೀಯ ಅಂಶ ಯಾವುದು?

ಅ) ಮೆಂಥಾಲ್
ಆ) ಆಲ್ಕೋಹಾಲ್
ಇ) ಎಥೆನಾಲ್
ಈ) ಮಿಥೆನಾಲ್

9. ಈಜಿಪ್ಟ್‌ನ ನಾಗರಿಕತೆಯು ಯಾವ ನದಿಯ ದಂಡೆಯ ಮೇಲೆ ಬೆಳೆಯಿತು?

ಅ) ಅಮೆಜಾನ್
ಆ) ಟೈಗ್ರಿಸ್
ಇ) ನೈಲ್
ಈ) ಯೂಫ್ರಟಿಸ್

10. ಮಹಾಭಾರತದ ಕರ್ಣ ಯಾರ ಶಿಷ್ಯನಾಗಿದ್ದನು?

ಅ) ದ್ರೋಣ
ಆ) ಕೃಪ 
ಇ) ಪರಶುರಾಮ
ಈ) ದ್ರುಪದ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಡಬ್ಲ್ಯೂ. ವಿ. ರಾಮನ್
2. ಪಾದರಸ
3. ಪೀರಿಯೆಡ್ ಎಂಡ್ ಆಫ್ ಸೆಂಟೆನ್ಸ್
4. ಸಿದ್ದರಾಮ ಜಂಬಲದಿನ್ನಿ
5. ಬಿ.ಆರ್. ಲಕ್ಷಣರಾವ್
6. ಹೆರಾಡಟಸ್
7. ಒಸಡು
8. ಬಾರ್ಸಿಲೋನಾ 
9. ಫಾರ್ಮುಲಾ ಒನ್ ಕಾರ್ ರೇಸ್
10. ಜಗನ್ನಾಥ ದಾಸರು

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !