ಜಯಂತ್ ಕಾಯ್ಕಿಣಿಯವರ ಯಾವ ಕೃತಿಗೆ ಪ್ರತಿಷ್ಠಿತ ಡಿಎಸ್‌ಸಿ ಬಹುಮಾನ ಲಭಿಸಿದೆ?

ಭಾನುವಾರ, ಮಾರ್ಚ್ 24, 2019
33 °C

ಜಯಂತ್ ಕಾಯ್ಕಿಣಿಯವರ ಯಾವ ಕೃತಿಗೆ ಪ್ರತಿಷ್ಠಿತ ಡಿಎಸ್‌ಸಿ ಬಹುಮಾನ ಲಭಿಸಿದೆ?

Published:
Updated:

1. ಗುರುಮುಖಿ ಲಿಪಿಯನ್ನು ಯಾವ ಭಾಷೆಯನ್ನು ಬರೆಯಲು ಬಳಸಲಾಗುತ್ತದೆ?
ಅ) ಗುಜರಾತಿ ಆ) ಬಂಗಾಲಿ
ಇ) ಪಂಜಾಬಿ ಈ) ಬಿಹಾರಿ

2. ಮಾವಿನ ಬೆಳೆ ಪ್ರತಿವರ್ಷ ಭಾರತದಲ್ಲಿ ಮೊದಲು ಯಾವ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತದೆ?
ಅ) ಕರ್ನಾಟಕ ಆ) ತಮಿಳು ನಾಡು ಇ) ಆಂಧ್ರ ಈ) ಕೇರಳ

3. ಜಗತ್ತಿನ ಮೇಲ್ಛಾವಣಿ ಎಂದು ಹೆಸರಾದ ದೇಶ ಯಾವುದು?
ಅ) ಚೀನಾ ಆ) ಭೂತಾನ್ ಇ) ಭಾರತ ಈ) ಟಿಬೆಟ್

4. ಜಯಂತ್ ಕಾಯ್ಕಿಣಿಯವರ ಯಾವ ಕೃತಿಗೆ ಪ್ರತಿಷ್ಠಿತ ಡಿಎಸ್‌ಸಿ ಬಹುಮಾನ ಲಭಿಸಿದೆ?
ಅ) ಗಾಳ ಆ) ತೂಫಾನ್ ಮೇಲ್
ಇ) ನೋ ಪ್ರೆಸೆಂಟ್ಸ್ ಪ್ಲೀಸ್ ಈ) ಆಕಾಶ ಬುಟ್ಟಿ

5. ಬ್ಲೀಚಿಂಗ್ ಪೌಡರ್ ಗಾಳಿಯೊಂದಿಗೆ ಬೆರೆತಾಗ ಬಿಡುಗಡೆಯಾಗುವ ಅನಿಲ ಯಾವುದು?
ಅ) ಕ್ಲೋರಿನ್ ಆ) ಸಾರಜನಕ ಇ) ಜಲಜನಕ ಈ) ಇಂಗಾಲ

6. ಪಿ.ಆರ್. ರಾಮಯ್ಯನವರು ನಡೆಸುತ್ತಿದ್ದ ಕನ್ನಡದ ಪ್ರಸಿದ್ಧ ಪತ್ರಿಕೆ ಯಾವುದು?
ಅ) ತಾಯಿನಾಡು ಆ) ಪ್ರಜಾಮತ ಇ) ಕರ್ಮವೀರ ಈ) ಪ್ರಜಾವಾಣಿ

7. ಸಾಂಪ್ರದಾಯಿಕವಾಗಿ ಕ್ರಿಕೆಟ್ ಬ್ಯಾಟುಗಳನ್ನು ಯಾವ ಮರದಿಂದ ಮಾಡಲಾಗುತ್ತದೆ?
ಅ)ಟೀಕ್ ಆ) ರೋಸ್‌ವುಡ್ ಇ) ರೆಡ್‌ವುಡ್ ಈ) ವಿಲ್ಲೋ

8) ಗುಟ್ಕಾದಲ್ಲಿನ ಯಾವ ಅಂಶ ಹಾನಿಕಾರಕವೆಂದು ಹೇಳಲಾಗುತ್ತದೆ?
ಅ) ಅಡಿಕೆ  ಆ) ತಂಬಾಕು ಇ) ಸುಣ್ಣ ಈ) ಯಾವುದೂ ಅಲ್ಲ

9. ನಟ ವಿಷ್ಣುವರ್ಧನ್ ಅಭಿನಯದ ಮೊತ್ತಮೊದಲ ಚಲನಚಿತ್ರ ಯಾವುದು?
ಅ) ನಾಗರಹಾವು ಆ) ಸೀತೆ ಅಲ್ಲ ಸಾವಿತ್ರಿ‌
ಇ) ವಂಶವೃಕ್ಷ ಈ) ಮನೆ ಬೆಳಗಿದ ಸೊಸೆ

10. ಗುಲ್ಜಾರಿಲಾಲ್ ನಂದಾ ಎಷ್ಟು ಬಾರಿ ಹಂಗಾಮಿ ಪ್ರಧಾನ ಮಂತ್ರಿಯಾಗಿದ್ದರು?
ಅ) ಒಂದು ಆ) ಎರಡು ಇ) ಮೂರು ಈ) ನಾಲ್ಕು

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಪತ್ರಿಕೋದ್ಯಮ 2. ಉಧಮ್ ಸಿಂಗ್ 3. ಟೊಮೆಟೊ 4. ಮೈಸೂರು ಸಿವಿಲ್ ಸರ್ವೀಸ್ 5. ತೆರ ತೀಯಗರಾದಾ 6. ಎಂಟು 7. ಕ್ವೆಟಾರ್ 8. ಅನುಪಮ್ ಖೇರ್ 9. 2014 10. ನೆಂಟರ ಮೇಲೆ ಪ್ರೀತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !